ಆರಂಭಿಕ ಸುತ್ತುಗಳ ಹಿನ್ನಡೆ ಬಳಿಕ ಗೆದ್ದು ಬೀಗಿದ ಡಿಸಿಎಂ ಮನೀಶ್ ಸಿಸೋಡಿಯಾ

Delhi election Result: ಅರವಿಂದ್ ಕೇಜ್ರಿವಾಲ್ ಬಿಟ್ಟರೆ ಆಮ್ ಆದ್ಮಿಯಲ್ಲಿ ಅತ್ಯಂತ ಪ್ರಬಲ ಶಕ್ತಿ ಎನಿಸಿರುವುದು ಮನೀಶ್ ಸಿಸೋಡಿಯಾ ಅವರೆಯೇ. ಉಪಮುಖ್ಯಮಂತ್ರಿಯಾಗಿ ಮತ್ತು ಶಿಕ್ಷಣ ಸಚಿವರಾಗಿ ಅವರು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದ್ದಾರೆ.

ಮನಿಶ್​​ ಸಿಸೋಡಿಯಾ

ಮನಿಶ್​​ ಸಿಸೋಡಿಯಾ

  • Share this:
ನವದೆಹಲಿ(ಫೆ. 11): ಇಂದು ನಡೆದ ಮತ ಎಣಿಕೆಯ ಸಂದರ್ಭದಲ್ಲಿ ಅತಿ ಹೆಚ್ಚು ಅಚ್ಚರಿ ಮೂಡಿಸಿದ್ದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಪಟಪರ್​ಗಂಜ್ ಕ್ಷೇತ್ರ. ಆರಂಭಿಕ ಸುತ್ತುಗಳ ಮತ ಎಣಿಕೆಯಲ್ಲಿ ಬಿಜೆಪಿಯೇ ಇಲ್ಲಿ ಮುಂದಿತ್ತು. ಆದರೆ, ಅಂತಿಮವಾಗಿ ಸಿಸೋಡಿಯಾ ಅವರೇ ಗೆಲುವಿನ ನಗೆ ಬೀರಿದ್ದಾರೆ. ಮನೀಶ್ ಸಿಸೋಡಿಯಾ ಅವರು ಬಿಜೆಪಿಯ ರವೀಂದರ್ ಸಿಂಗ್ ನೇಗಿ ವಿರುದ್ಧ 3 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಿದರು.

ಸುಮಾರು 10 ಸುತ್ತುಗಳವರೆಗೂ ಸಿಸೋಡಿಯಾ ಹಿನ್ನಡೆಯಲ್ಲೇ ಇದ್ದರು. ಆ ನಂತರ ಸುತ್ತುಗಳಲ್ಲಿ ಗಮನಾರ್ಹವಾಗಿ ಅವರ ಪರ ಮತಗಳು ಬಿದ್ದಿವೆ.

ಅರವಿಂದ್ ಕೇಜ್ರಿವಾಲ್ ಬಿಟ್ಟರೆ ಆಮ್ ಆದ್ಮಿಯಲ್ಲಿ ಅತ್ಯಂತ ಪ್ರಬಲ ಶಕ್ತಿ ಎನಿಸಿರುವುದು ಮನೀಶ್ ಸಿಸೋಡಿಯಾ ಅವರೆಯೇ. ಉಪಮುಖ್ಯಮಂತ್ರಿಯಾಗಿ ಮತ್ತು ಶಿಕ್ಷಣ ಸಚಿವರಾಗಿ ಅವರು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದ್ದಾರೆ. ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲು ಹಿಂದಿನ ಶಕ್ತಿ ಮನೀಶ್ ಸಿಸೋಡಿಯಾ ಎಂದು ಹೆಳಲಾಗುತ್ತಿದೆ.

ಇದನ್ನು ಓದಿ: ಪ್ರೇಮಿಗಳ ದಿನ ಎಂದರೆ ಅರವಿಂದ್​ ಕೇಜ್ರಿವಾಲ್​ಗೆ ಬಲು ವಿಶೇಷ; ಕಾರಣ ಗೊತ್ತಾ!

ಆದರೆ, ಶಾಹೀನ್ ಬಾಗ್​ನಲ್ಲಿ ನಡೆದ ಪ್ರತಿಭಟನೆಗಳಿಗೆ ಮನೀಶ್ ಸಿಸೋಡಿಯಾ ಬಹಿರಂಗವಾಗಿ ಬೆಂಬಲ ನೀಡಿದ್ದರು. ಈ ವಿವಾದದಿಂದ ಆಮ್ ಆದ್ಮಿ ತುಸು ಅಂತರ ಕಾಯ್ದುಕೊಂಡರೂ ಸಿಸೋಡಿಯಾ ಮಾತ್ರ ಘಂಟಾಘೋಷವಾಗಿ ಪ್ರತಿಭಟನಾಕಾರರ ಪರ ನಿಂತಿದ್ದರು. ಪ್ರತಿಭಟನಾ ಸ್ಥಳಕ್ಕೆ ಹೋಗಿಯೂ ಬೆಂಬಲ ನೀಡಿದ್ದರು. ಇದು ಅವರಿಗೆ ತುಸು ಹಿನ್ನಡೆ ತಂದಿರುವ ಸಾಧ್ಯತೆ ಇದೆ. ಆದರೆ, ಅವರು ಮಾಡಿದ ಕೆಲಸಗಳು ಅಂತಿಮವಾಗಿ ಅವರ ಕೈ ಹಿಡಿದಿವೆ.
First published: