HOME » NEWS » National-international » DELHI ELECTION RESULTS A LESSON FOR THOSE INDULGING IN HATE AND DIVISIVE POLITICS SAYS MAMATHA BANERJEE MAK

ದ್ವೇಷ ಮತ್ತು ವಿಭಜಕ ರಾಜಕಾರಣ ಮಾಡುವವರಿಗೆ ದೆಹಲಿ ಫಲಿತಾಂಶ ತಕ್ಕ ಉತ್ತರ; ಮಮತಾ ಬ್ಯಾನರ್ಜಿ

ದೆಹಲಿಯಲ್ಲಿ ಆಮ್ ಆದ್ಮಿ ಜೊತೆಗೆ ಕೊನೆಗೂ ಪ್ರಜಾಪ್ರಭುತ್ವ ಗೆಲುವು ಸಾಧಿಸಿದೆ. ಜನ ವಿಭಜಕ ರಾಜಕಾರಣಕ್ಕಿಂತ ಅಭಿವೃದ್ಧಿಗೆ ಒತ್ತು ನೀಡುತ್ತಾನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:February 11, 2020, 3:52 PM IST
ದ್ವೇಷ ಮತ್ತು ವಿಭಜಕ ರಾಜಕಾರಣ ಮಾಡುವವರಿಗೆ ದೆಹಲಿ ಫಲಿತಾಂಶ ತಕ್ಕ ಉತ್ತರ; ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
  • Share this:
ಕೋಲ್ಕತಾ (ಫೆಬ್ರವರಿ. 11); ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದಾಖಲಿಸಿರುವ ಗೆಲುವು ಪ್ರಜಾಪ್ರಭುತ್ವದ ಗೆಲುವು, ದ್ವೇಷದ ಮತ್ತು ವಿಭಜಕ ರಾಜಕಾರಣ ಮೇಲೆ ನಂಬಿಕೆ ಇಟ್ಟಿರುವ ರಾಷ್ಟ್ರೀಯ ನಾಯಕರಿಗೆ ತಕ್ಕ ಉತ್ತರ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಆಮ್ ಆದ್ಮಿ ಪಕ್ಷ ಮೂರನೇ ಭಾರಿಗೆ ಭರ್ಜರಿ ಗೆಲುವು ದಾಖಲಿಸಿದೆ. ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.

ಈ ಕುರಿತು ಟ್ವಿಟರ್​ನಲ್ಲಿ ಪ್ರಶಂಶೆ ವ್ಯಕ್ತಪಡಿಸಿರುವ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಅರವಿಂದ ಕೇಜ್ರಿವಾಲ್ ದೆಹಲಿಯಲ್ಲಿ ಮತ್ತೊಮ್ಮೆ ಬಹುಮತದ ಸರ್ಕಾರ ರಚಿಸುವ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಈ ಮೂಲಕ ದ್ವೇಷದ ಮತ್ತು ವಿಭಜಕ ರಾಜಕಾರಣದ ಮೇಲೆ ನಂಬಿಕೆ ಇಟ್ಟಿರುವ ನಾಯಕರಿಗೆ ಕಟುವಾದ ಸೂಚನೆ ನೀಡಿದ್ದಾರೆ. ಅಂತಹ ನಾಯಕರಿಗೆ ಈ ಫಲಿತಾಂಶ ತಕ್ಕ ಉತ್ತರ.

ದೆಹಲಿಯಲ್ಲಿ ಆಮ್ ಆದ್ಮಿ ಜೊತೆಗೆ ಕೊನೆಗೂ ಪ್ರಜಾಪ್ರಭುತ್ವ ಗೆಲುವು ಸಾಧಿಸಿದೆ. ಜನ ವಿಭಜಕ ರಾಜಕಾರಣಕ್ಕಿಂತ ಅಭಿವೃದ್ಧಿಗೆ ಒತ್ತು ನೀಡುತ್ತಾನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಒದಿ : Delhi Election Result: ದೆಹಲಿಯ ಮತದಾರರು ತಮ್ಮ ಆದ್ಯತೆ ಅಭಿವೃದ್ಧಿಗೆ ಮಾತ್ರ ಎಂಬುದರ ಮೇಲ್ಪಂಕ್ತಿ ಹಾಕಿದ್ದಾರೆ; ಹೆಚ್​.ಡಿ. ಕುಮಾರಸ್ವಾಮಿ
First published: February 11, 2020, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories