ನಿಜವಾದ ರಾಷ್ಟ್ರೀಯತೆ ಎಂದರೆ ಜನರಿಗಾಗಿ ಕೆಲಸ ಮಾಡುವುದು, ಆ ಕೆಲಸವೇ ಆಪ್ ಗೆಲ್ಲಿಸಿದೆ; ಮನೀಶ್ ಸಿಸೋಡಿಯಾ

ಈ ಚುನಾವಣೆಯಲ್ಲಿನ ಆಮ್ ಆದ್ಮಿ ಪಕ್ಷದ ಗೆಲುವು ಕೊನೆಗೂ ಜನರ ಪರವಾಗಿ ಕೆಲಸ ಮಾಡುವುದೇ ನಿಜವಾದ ರಾಷ್ಟ್ರೀಯತೆ ಎಂಬುದನ್ನು ಸಾಬೀತುಪಡಿಸಿದೆ. ರಾಜಕೀಯವಾಗಿ ಅವಕಾಶ ಸಿಕ್ಕರೆ ಜನರ ಪರವಾಗಿ ಕೆಲಸ ಮಾಡಬೇಕು. ಶಿಕ್ಷಣ, ವೈದ್ಯಕೀಯ ಸೇರಿದಂತೆ ಜನರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಪಡಿಸಬೇಕು ಎಂದು ಮನೀಶ್​ ಸಿಸೋಡಿಯಾ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ.

 • Share this:
  ನವ ದೆಹಲಿ (ಫೆಬ್ರವರಿ 11); “ದೆಹಲಿ ವಿಧಾನಸಭಾ ಚುನಾವಣೆಯಲ್ಲಿನ "ಆಮ್ ಆದ್ಮಿ" ಪಕ್ಷದ ಗೆಲುವು ನಿಜವಾದ ರಾಷ್ಟ್ರೀಯತೆ ಎಂದರೆ ಅದು ಜನರಿಗಾಗಿ ಜನರ ಪರವಾಗಿ ಕೆಲಸ ಮಾಡುವುದು” ಎಂದು ಆಮ್ ಆದ್ಮಿ ಪಕ್ಷ ನಾಯಕ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಭಿಪ್ರಾಯಪಟ್ಟಿದ್ದಾರೆ.

  ಕಳೆದ ಫೆಬ್ರವರಿ 08 ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಆರಂಭವಾದ ಮೊದಲ 1 ಗಂಟೆಯ ಅವಧಿಯಲ್ಲೇ ಸುಮಾರು 50 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಆಮ್ ಆದ್ಮಿ ಮತ್ತೊಮ್ಮೆ ದೆಹಲಿ ಗದ್ದುಗೆಗೆ ಏರುವುದು ಬಹುತೇಕ ಖಚಿತವಾಗಿದೆ.

  ಇದರ ಬೆನ್ನಿಗೆ ಪ್ರತಿಕ್ರಿಯಿಸಿರುವ ಮನೀಶ್ ಸಿಸೋಡಿಯಾ, “ಈ ಚುನಾವಣೆಯಲ್ಲಿನ ಆಮ್ ಆದ್ಮಿ ಪಕ್ಷದ ಗೆಲುವು ಕೊನೆಗೂ ಜನರ ಪರವಾಗಿ ಕೆಲಸ ಮಾಡುವುದೇ ನಿಜವಾದ ರಾಷ್ಟ್ರೀಯತೆ ಎಂಬುದನ್ನು ಸಾಬೀತುಪಡಿಸಿದೆ. ರಾಜಕೀಯವಾಗಿ ಅವಕಾಶ ಸಿಕ್ಕರೆ ಜನರ ಪರವಾಗಿ ಕೆಲಸ ಮಾಡಬೇಕು. ಶಿಕ್ಷಣ, ವೈದ್ಯಕೀಯ ಸೇರಿದಂತೆ ಜನರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಪಡಿಸಬೇಕು.

  ಕಳೆದ 5 ವರ್ಷದಲ್ಲಿ ದೆಹಲಿಯಲ್ಲಿ ನಾವು ಇದೇ ಕೆಲಸವನ್ನು ಮಾಡಿದ್ದೇವೆ. ರಾಷ್ಟ್ರ ರಾಜಧಾನಿಯಲ್ಲಿ ನಾವು ಶಾಲೆಗಳ, ಆಸ್ಪತ್ರೆಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇವೆ. ಆದರೆ, ಮತ್ತೊಂದೆಡೆ ವಾತಾವರಣ ಹದಗೆಡಿಸಲು ಹಿಂದೂ-ಮುಸ್ಲಿಂ ಕುರಿತ ಚರ್ಚೆಯನ್ನು ಹರಿಬಿಡಲಾಯ್ತು. ಆದರೆ, ಕೊನೆಗೂ ಸರ್ಕಾರವೊಂದು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಗೆಲುವು ಕಷ್ಟವಲ್ಲ ಎಂಬುದನ್ನು ದೆಹಲಿ ಫಲಿತಾಂಶ ದೃಢಪಡಿಸಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಪೌರತ್ವ ಕಾನೂನಿನ ವಿರುದ್ಧ, ವಿಶೇಷವಾಗಿ ಶಾಹೀನ್ ಬಾಗ್​ನಲ್ಲಿ ನಡೆದ ಪ್ರತಿಭಟನೆಗಳ ಸುತ್ತ "ರಾಷ್ಟ್ರ ವಿರೋಧಿ" ನಿರೂಪಣೆಯನ್ನು ರೂಪಿಸುವ ಮೂಲಕ ದೆಹಲಿಯ ಮತದಾರರನ್ನು ಧ್ರುವೀಕರಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಈ ಹಿಂದೆಯೇ ಎಎಪಿ ಆರೋಪಿಸಿತ್ತು.

  ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ತಮ್ಮ ಅಭಿಯಾನವನ್ನು ಪೌರತ್ವ ಕಾನೂನನ್ನು ವಿರೋಧಿಸುವವರ ಮೇಲಿನ ದಾಳಿಗೆ ಮೀಸಲಿಟ್ಟರು, ಅವರನ್ನು "ದೇಶದ್ರೋಹಿಗಳು" ಎಂದು ಕರೆದರು. ಆದರೆ, ಕಳೆದ ಐದು ವರ್ಷಗಳಲ್ಲಿ ದೆಹಲಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ಗೆಲ್ಲುತ್ತದೆ ಎಂದು ಎಎಪಿ ಹೇಳಿಕೊಂಡಿತ್ತು ಎಂಬುದು ಈ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಉಲ್ಲೇಖಾರ್ಹ.

  ಇದನ್ನೂ ಓದಿ : ಹಿಂಸಾಚಾರಕ್ಕೆ ತಿರುಗಿದ ಜಾಮಿಯಾ ಪ್ರತಿಭಟನೆ; ವಿದ್ಯಾರ್ಥಿಗಳ ಮರ್ಮಾಂಗಕ್ಕೆ ಥಳಿಸಿದ ದೆಹಲಿ ಪೊಲೀಸರು
  First published: