ದೆಹಲಿಯಲ್ಲಿ ಕೈ ಸೊನ್ನೆ: ಕಾಂಗ್ರೆಸ್​ನಿಂದ ನಿಜವಾಗಿ ಡ್ಯಾಮೇಜ್ ಆಗಿದ್ದು ಯಾರಿಗೆ?

ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಕಂಡಿರುವ ಕ್ಷೇತ್ರಗಳಲ್ಲೆಲ್ಲಾ ಬಿಜೆಪಿಯೇ ಗೆಲುವು ಪಡೆದಿದೆ. ಅಂದರೆ, ಕಾಂಗ್ರೆಸ್ ಪಕ್ಷ ಹೆಚ್ಚು ವೋಟು ಪಡೆದುಕೊಂಡ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲವಾಗಿದೆ. ಆಮ್ ಆದ್ಮಿಗೆ ಹೋಗಬೇಕಾದ ವೋಟುಗಳನ್ನು ಕಾಂಗ್ರೆಸ್ ಸೆಳೆದುಕೊಂಡಿರುವ ಸಾಧ್ಯತೆ ಇದೆ.

ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ

ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ

  • News18
  • Last Updated :
  • Share this:
ನವದೆಹಲಿ(ಫೆ. 11): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಗಳ ಪ್ರಕಾರವೇ ಜನಾದೇಶ ಬಂದಿದೆ. ಆಮ್ ಆದ್ಮಿ ಪಕ್ಷ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಿಂಚಿದೆ. ಉಳಿದ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಆರಂಭದ ಹಂತದಲ್ಲಿ ಒಂದು ಕ್ಷೇತ್ರದಲ್ಲಿ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ಪಕ್ಷ ಅಂತಿಮವಾಗಿ ಶೂನ್ಯ ಸಂಪಾದನೆ ಮಾಡಿದೆ. ಚುನಾವಣೆ ಘೋಷಣೆಯಾದಾಗಿನಿಂದಲೂ ಕಾಂಗ್ರೆಸ್ ಯಾವ ಹಂತದಲ್ಲೂ ಗೆಲುವಿನ ನಿರೀಕ್ಷೆ ಮೂಡಿಸಿರಲಿಲ್ಲ. ಕಾಂಗ್ರೆಸ್ ಒಂದು ರೀತಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ವಾಸ್ತವದಲ್ಲಿ ಕಾಂಗ್ರೆಸ್ ಈ ಚುನಾವಣೆಯಲ್ಲಿ ಆಟಕ್ಕೂ ಇತ್ತು ಲೆಕ್ಕಕ್ಕೂ ಇತ್ತು. ಕೆಲ ಕ್ಷೇತ್ರಗಳಲ್ಲಿ ಬಂದಿರುವ ಫಲಿತಾಂಶಗಳು ಇದಕ್ಕೆ ಇಂಬು ಕೊಡುವಂತಿವೆ.

ಕಳೆದ ಬಾರಿಯ ಚುನಾವಣೆಯಲ್ಲಿ ದೆಹಲಿಯ 70 ಕ್ಷೇತ್ರಗಳ  ಪೈಕಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನ ಗೆದ್ದಿತ್ತು. ಬಿಜೆಪಿಗೆ ಸಿಕ್ಕಿದ್ದು ಮೂರೇ ಮೂರು ಸೀಟು. ಕಾಂಗ್ರೆಸ್ ಆಗಲೂ ಶೂನ್ಯ ಸಂಪಾದನೆ ಮಾಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 67ರಲ್ಲಿ ಗೆಲ್ಲಲು ಸಾಧ್ಯವಾಗದೇ ಹೋದರೂ 60ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಅದು ಅಂದುಕೊಂಡದ್ದಕ್ಕಿಂತಲೂ ಕಡಿಮೆ ಸ್ಥಾನ ದಕ್ಕಿದೆ.

ಇದನ್ನೂ ಓದಿ: ನಿಜವಾದ ರಾಷ್ಟ್ರೀಯತೆ ಎಂದರೆ ಜನರಿಗಾಗಿ ಕೆಲಸ ಮಾಡುವುದು, ಆ ಕೆಲಸವೇ ಆಪ್ ಗೆಲ್ಲಿಸಿದೆ; ಮನೀಶ್ ಸಿಸೋಡಿಯಾ

ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಕಂಡಿರುವ ಕ್ಷೇತ್ರಗಳಲ್ಲೆಲ್ಲಾ ಬಿಜೆಪಿಯೇ ಗೆಲುವು ಪಡೆದಿದೆ. ಅಂದರೆ, ಕಾಂಗ್ರೆಸ್ ಪಕ್ಷ ಹೆಚ್ಚು ವೋಟು ಪಡೆದುಕೊಂಡ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲವಾಗಿದೆ. ಆಮ್ ಆದ್ಮಿಗೆ ಹೋಗಬೇಕಾದ ವೋಟುಗಳನ್ನು ಕಾಂಗ್ರೆಸ್ ಸೆಳೆದುಕೊಂಡಿರುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ತನ್ನ ಹಿರಿಯ ನಾಯಕರನ್ನು ಮತ್ತು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಕ್ಷೇತ್ರಗಳಲ್ಲಿ ತ್ರಿಕೋನ ಹಣಾಹಣಿ ಇದೆ. ಈ ಕ್ಷೇತ್ರಗಳಲ್ಲೆಲ್ಲಾ ಆಮ್ ಆದ್ಮಿಗೇ ನಷ್ಟವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ದೆಹಲಿ ಉತ್ತರ ಭಾಗದ ಮಾಡೆಲ್ ಟೌನ್, ಕರವಾಲ್ ನಗರ್ ಕ್ಷೇತ್ರಗಳು; ದೆಹಲಿ ಪೂರ್ವ ಭಾಗದ ದ್ವಾರಕಾ ಮತ್ತು ಕೃಷ್ಣಾ ನಗರ್; ಹಾಗೂ ದೆಹಲಿ ಪಶ್ಚಿಮ ಭಾಗದಲ್ಲಿರುವ ಮೋತಿ ನಗರ್ ಕ್ಷೇತ್ರಗಳು ತ್ರಿಕೋನ ಹಣಾಹಣಿ ಕಂಡಿದ್ದವು. ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಮುಸ್ಲಿಮ್ ಪ್ರಾಬಲ್ಯ ಇರುವ ಬಲ್ಲಿಮಾರನ್  ಮತ್ತು ಓಖ್ಲಾದಲ್ಲೂ ಬಿಜೆಪಿ ಮುನ್ನಡೆಗೆ ಪ್ರಬಲ ಕಾಂಗ್ರೆಸ್ ಸ್ಪರ್ಧೆಯೇ ಕಾರಣವೆಂದು ವಿಶ್ಲೇಷಿಸಲಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: