ಕುಡಿಯುವ ನೀರು, ಇ-ಸ್ಕೂಟರ್, 2 ರೂಗೆ ಗೋಧಿ ಹಿಟ್ಟು: ದೆಹಲಿ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್

ಸಂಕಲ್ಪ ಪತ್ರ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಹಿರಿಯ ನಾಯಕ ನಿತಿನ್​ ಗಡ್ಕರಿ, ಹರ್ಷ ವರ್ಧನ್​, ಪ್ರಕಾಶ್​ ಜಾವ್ಡೇಕರ್​​ ಮಹಿಳಾ ಸುರಕ್ಷತೆ, ಭ್ರಷ್ಟಚಾರ ಮುಕ್ತ, ಪಾರದರ್ಶಕ ವ್ಯವಸ್ಥೆ ಕಲ್ಪಿಸುವ ಕುರಿತು ಆಶ್ವಾಸನೆ ನೀಡಿದ್ದಾರೆ.

ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ನಾಯಕರು

ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ನಾಯಕರು

  • Share this:
ನವದೆಹಲಿ(ಜ.31):ದೇಶದ ರಾಜಧಾನಿಯ ಗದ್ದುಗೆ ಏರಲು ಹಣಾಹಣಿ ನಡೆಸಿರುವ ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸಿದೆ.

ಚುನಾವಣೆಗೆ ಇನ್ನೇನು ಒಂದು ವಾರ ಬಾಕಿ ಇದ್ದು, ಇಲ್ಲಿನ ಜನರನ್ನು ಅತಿಹೆಚ್ಚು ಕಾಡುವ ವಾಯು ಮತ್ತು ಜಲ ಮಾಲಿನ್ಯ ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.

ಇಂದು ಪಕ್ಷದ ಕಚೇರಿಯಲ್ಲಿ ಸಂಕಲ್ಪ ಪತ್ರ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಹಿರಿಯ ನಾಯಕ ನಿತಿನ್​ ಗಡ್ಕರಿ, ಹರ್ಷ ವರ್ಧನ್​, ಪ್ರಕಾಶ್​ ಜಾವ್ಡೇಕರ್​​ ಮಹಿಳಾ ಸುರಕ್ಷತೆ, ಭ್ರಷ್ಟಚಾರ ಮುಕ್ತ, ಪಾರದರ್ಶಕ ವ್ಯವಸ್ಥೆ ಕಲ್ಪಿಸುವ ಕುರಿತು ಆಶ್ವಾಸನೆ ನೀಡಿದ್ದಾರೆ.

ಪ್ರಣಾಳಿಕೆ ಹೀಗಿದೆ.

  • ಕೇಂದ್ರ ಸರ್ಕಾರದ ಅಡಿ ಆಯುಷ್ಯಾನ್​ ಭಾರತ್​ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದು.

  • ಹೈಯರ್​ ಸೆಕೆಂಡರಿ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿದ್ಯುತ್​ ಚಾಲಿತ ಸ್ಕೂಟರ್​ ನೀಡುವುದು.

  • ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಬಡವರಿಗೆ 2 ರೂ ದರಲ್ಲಿ ಗೋಧಿ ಹಿಟ್ಟು ನೀಡುವುದು. ಹಾಗೇ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆ

  • ಸರ್ಕಾರ ರಚನೆಯಾದ ಕೂಡಲೇ ಕಿಸಾನ್​ ಸಮ್ಮಾನ್​ ನಿಧಿ ಹಂಚಿಕೆ

  • ರೈತರ ಮೇಲೆ ವಿಧಿಸಿರುವ ಸೆಕ್ಷನ್​ 33 ಮತ್ತು 81ನ್ನು ತೆಗೆದುಹಾಕುವುದು

  • ಮುಂದಿನ ಐದು ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿ

  • ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ

  • ಹಿಂದುಳಿದ ವರ್ಗದವರಿಗೆ ಪ್ರತ್ಯೇಕ ಮಂಡಳಿ ಸ್ಥಾಪನೆ

  • ಬಡ ಕುಟುಂಬದ ವಿಧವೆಯರ ಮಗಳ ಮದುವೆಗೆ 50 ಸಾವಿರರೂ ಸಹಾಯಧನ


ಫೆ.8ರಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಏಕ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆ. 11ರಂದು ಮತ ಎಣಿಕೆ ಆಗಲಿದೆ. ಬಿಜೆಪಿ ಹಾಗೂ ಎಎಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಭಾರೀ ಕಸರತ್ತು ನಡೆಸಿದೆ.

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಉಚಿತ ಬಸ್, ಯಮುನಾ ಸ್ವಚ್ಚ, ದೆಹಲಿ ಮಾಲಿನ್ಯ ನಿಯಂತ್ರಣ; 10 ಗ್ಯಾರಂಟಿ ಕಾರ್ಡ್​ ಬಿಡುಗಡೆ ಮಾಡಿದ ಆಪ್

ಇನ್ನು ಈಗಾಗಲೇ ಪ್ರಣಾಳಿಕೆ ಬಿಡುಗಡೆ ಮಾಡಿರುವ ಎಎಪಿ 200 ಯೂನಿಟ್​ವರೆಗೆ ಉಚಿತ ಕರೆಂಟ್, ಉಚಿತ ಆರೋಗ್ಯ ಸೌಲಭ್ಯಗಳು, ಎರಡು ಕೋಟಿ ಸಸಿಗಳನ್ನು ನೆಡುವುದು, ಯಮುನಾ ನದಿಯನ್ನು ಸ್ವಚ್ಚಗೊಳಿಸುವುದು, ಮುಂದಿನ ಐದು ವರ್ಷಗಳಲ್ಲಿ ದೆಹಲಿಯ ಮಾಲಿನ್ಯವನ್ನು ಕಡಿಮೆ ಮಾಡುವ ಯೋಜನೆ" ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದ್ದರು.
First published: