• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ದೆಹಲಿ ಡಿಸಿಎಂ ಮನೀಶ್​ ಸಿಸೋಡಿಯಾಗೆ ಕೊರೋನಾ ಸೋಂಕು, ಉಸಿರಾಟದಲ್ಲಿ ತೀವ್ರ ತೊಂದರೆ ಆಸ್ಪತ್ರೆಗೆ ದಾಖಲು

ದೆಹಲಿ ಡಿಸಿಎಂ ಮನೀಶ್​ ಸಿಸೋಡಿಯಾಗೆ ಕೊರೋನಾ ಸೋಂಕು, ಉಸಿರಾಟದಲ್ಲಿ ತೀವ್ರ ತೊಂದರೆ ಆಸ್ಪತ್ರೆಗೆ ದಾಖಲು

ಮನೀಶ್​ ಸಿಸೋಡಿಯಾ.

ಮನೀಶ್​ ಸಿಸೋಡಿಯಾ.

48 ವರ್ಷದ ಮನೀಶ್ ಸಿಸೋಡಿಯಾ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಅನ್ನು ಹಿಮ್ಮೆಟ್ಟಿಸುವ ಸಲುವಾಗಿ ಇತರ ಮಂತ್ರಿಗಳೊಂದಿಗೆ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವರ್ಚುವಲ್ ಪತ್ರಿಕಾಗೋಷ್ಠಿಗಳನ್ನು ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿ ಅನೇಕರಿಂದ ಪ್ರಶಂಶೆಗೆ ಪಾತ್ರರಾಗಿದ್ದರು.

ಮುಂದೆ ಓದಿ ...
  • Share this:

ನವ ದೆಹಲಿ (ಸೆಪ್ಟೆಂಬರ್ 23); ರಾಷ್ಟ್ರ ರಾಜಧಾನಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮಾರಣಾಂತಿಕ ಕೊರೋನಾ ವೈರಸ್ ಸೋಂಕು ತಗುಲಿದ್ದು ಅವರನ್ನು ಲೋಕ ನಾಯಕ ಜಯಪ್ರಕಾಶ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ. ಅಸಲಿಗೆ ಮನೀಶ್ ಸಿಸೋಡಿಯಾ ಅವರನ್ನು ಸೆಪ್ಟೆಂಬರ್. 14 ರಂದೇ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗಲೇ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ, ಅವರು ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಅಲ್ಲದೆ. ಕಳೆದ ಒಂದು ವಾರಗಳಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಅವರಿಗೆ ತೀವ್ರ ಉಸಿರಾಟದ ತೊಂದರೆ ಮತ್ತು ಜ್ವರ ಕಾಣಿಸಿಕೊಂಡ ಪರಿಣಾಮ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಇತರೆ ಆರೋಗ್ಯ ಸಮಸ್ಯೆಗಳು ಇಲ್ಲದ ಮತ್ತು ವಯಸ್ಸಾಗದವರು ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಸಿಸೋಡಿಯಾ ಮನೆಯಲ್ಲೇ ಪ್ರತ್ಯೇಕತೆಗೆ ಒಳಗಾಗಿದ್ದರು.


ಕಳೆದ ಸೆಪ್ಟೆಂಬರ್ 14 ರಂದು ಮನೀಶ್ ಸಿಸೋಡಿಯಾ ಕೊರೋನಾ ಪರೀಕ್ಷೆ ಪಾಸಿಟಿವ್ ಎಂದು ಘೋಷಣೆ ಮಾಡಲಾಗಿತ್ತು. ಅಲ್ಲದೆ, ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗುವಂತೆ ಟ್ವೀಟ್ ಮಾಡುವ ಮೂಲಕ ಸ್ವತಃ ಅವರೇ ಸೂಚನೆ ನೀಡಿದ್ದರು.


ಈ ಟ್ವೀಟ್​ನಲ್ಲಿ, “ನನಗೆ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡ ಪರಿಣಾಮ ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ಆದರೆ, ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ನಾನು ನನ್ನನ್ನು ಮನೆಯಲ್ಲೇ ಪ್ರತ್ಯೇಕಿಸಿಕೊಂಡಿದ್ದೇನೆ. ನನಗೆ ಜ್ವರ ಅಥವಾ ಇನ್ನಾವುದೇ ಸಮಸ್ಯೆ ಇಲ್ಲ, ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ನಿಮ್ಮ ಪ್ರಾರ್ಥನೆಯೊಂದಿಗೆ ನನ್ನ ಆರೋಗ್ಯವನ್ನು ಮರಳಿ ಪಡೆದ ನಂತರ ನಾನು ಕೆಲಸಕ್ಕೆ ಮರಳುತ್ತೇನೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.


ಆದರೆ, ಒಂದು ವಾರಗಳ ಕಾಲ ಮನೆಯಲ್ಲೇ ಪ್ರತ್ಯೇಕತೆಯಲ್ಲಿದ್ದ ಮನೀಶ್ ಸಿಸೋಡಿಯಾ ಇದೀಗ ಆಸ್ಪತ್ರೆಗೆ ದಾಖಲಾಗಿರುವುದು ಅನೇಕರಿಗೆ ಆಘಾತ ಮೂಡಿಸಿದೆ. ಹೀಗಾಗಿ ಅವರ ಶೀಘ್ರದಲ್ಲೇ ಗುಣಮುಖರಾಗಿ ಸಾರ್ವಜನಿಕ ಸೇವೆಗೆ ಮರಳಲಿ ಎಂದು ಅನೇಕ ರಾಷ್ಟ್ರ ನಾಯಕರು ಆಶಿಸಿದ್ದಾರೆ.


48 ವರ್ಷದ ಮನೀಶ್ ಸಿಸೋಡಿಯಾ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಅನ್ನು ಹಿಮ್ಮೆಟ್ಟಿಸುವ ಸಲುವಾಗಿ ಇತರ ಮಂತ್ರಿಗಳೊಂದಿಗೆ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವರ್ಚುವಲ್ ಪತ್ರಿಕಾಗೋಷ್ಠಿಗಳನ್ನು ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿ ಅನೇಕರಿಂದ ಪ್ರಶಂಶೆಗೆ ಪಾತ್ರರಾಗಿದ್ದರು.


ಇದನ್ನೂ ಓದಿ : ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಸಂಖ್ಯೆ; ಸೌದಿ ಅರೇಬಿಯಾದಲ್ಲಿ ಭಾರತದ ವಿಮಾನಗಳಿಗೆ ನಿಷೇಧ!


ಇಲ್ಲದೆ, ರಾಜಧಾನಿಯ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ರೋಗದ ನಿರ್ವಹಣೆಯ ಮೇಲ್ವಿಚಾರಣೆಯನ್ನು ಸ್ವತಃ ತಾವೇ ವಹಿಸಿ ಇತರರಿಗೆ ಮಾದರಿಯಾಗಿದ್ದರು. ಪರಿಣಾಮ ಕೊರೋನಾ ಪಟ್ಟಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದ ದೆಹಲಿ ಹಂತ ಹಂತವಾಗಿ ಸುಧಾರಣೆಯತ್ತ ಸಾಗಿತ್ತು. ವ್ಯಾಪಕವಾಗಿ ಹರಡುತ್ತಿದ್ದ ಸೋಂಕಿತರ ಸಂಖ್ಯೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು.


ಭಾರತದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 56,46,010 ಕ್ಕೆ ತಲುಪಿದೆ ಮತ್ತು ಸಾವಿನ ಸಂಖ್ಯೆ 90,020 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 1,085 ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಬುಧವಾರ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

top videos
    First published: