Delhi Fire Accident: ಅಗ್ನಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ 20 ಹಸುಗಳು, ದೆಹಲಿಯಲ್ಲಿ ಇನ್ನೊಂದು ಅಗ್ನಿ ದುರಂತ

ಏಳು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ ಎಂದು ವರದಿಯಾಗಿದೆ.  ಈ ಅಗ್ನಿ ದುರಂತಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ದುರಂತಗಳು ಹೆಚ್ಚುತ್ತಿವೆ. ಡೈಲಿ ಫಾರ್ಮ್ ಒಂದಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು ಇಪ್ಪತ್ತು ಹಸುಗಳು ಸುಟ್ಟು ಕರಕಲಾದ ( 20 Cows Burnt To Death) ಭೀಕರ ದುರ್ಘಟನೆ ಇಂದು (ಮೇ 14) ಜರುಗಿದೆ.  ಬೆಂಕಿ ತಗುಲಿರುವುದು ಬೆಳಕಿಗೆ ಬಂದ ತಕ್ಷಣ ಮಧ್ಯಾಹ್ನ 1.25 ರ ಸುಮಾರಿಗೆ ರೋಹಿಣಿಯ ಸಾವ್ಡಾ ಗ್ರಾಮದ ಡೈರಿ ಫಾರ್ಮ್‌ನಲ್ಲಿ (Dairy Farm Fire Accident) ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲು ಆರಂಭಿಸಿದೆವು ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಏಳು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ ಎಂದು ವರದಿಯಾಗಿದೆ.  ಈ ಅಗ್ನಿ ದುರಂತಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

  ಕಳೆದ ತಿಂಗಳು ದೆಹಲಿಯ ಬಳಿಯ ಗಾಜಿಯಾಬಾದ್‌ನ ಇಂದಿರಾಪುರಂನ ಹಳ್ಳಿಯೊಂದರಲ್ಲಿ, ಡಂಪ್‌ಯಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಿರದ ಗೋಶಾಲೆಗೆ ಬೆಂಕಿ ಹಚ್ಚಿದ ನಂತರ ಮೂವತ್ತೆಂಟು ಹಸುಗಳು ಸಾವನ್ನಪ್ಪಿದ್ದವು. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸುಮಾರು 150 ಹಸುಗಳಿದ್ದವು.

  ಪದೇ ಪದೇ ಬೆಂಕಿ ದುರಂತ ಏಕೆ?
  ದೆಹಲಿಯಲ್ಲಿ ಪದೇ ಪದೇ ಭೀಕರ ಬೆಂಕಿ ದುರಂತಗಳು ನಡೆಯುತ್ತಿರುವುದು ವರದಿಯಾಗುತ್ತಿದೆ. ಈ ಘಟನೆಗಳ ಹಿಂದಿನ ಕಾರಣ ಸೂಕ್ತ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ. 

  ನಿನ್ನೆಯಷ್ಟೇ ದೆಹಲಿಯಲ್ಲಿ ನಡೆದಿತ್ತು ಘೋರ ದುರಂತ

  ಪಶ್ಚಿಮ ದೆಹಲಿಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನಿನ್ನೆ (ಮೇ 13) ಸಂಭವಿಸಿದ ಭಾರೀ ಬೆಂಕಿ ಅವಘಡದಲ್ಲಿ  ಹಲವಾರು ಜನರು ಸಾವನ್ನಪ್ಪಿದ್ದರು. ಇದುವರೆಗೆ 20 ಕ್ಕಿಂತಲೂ ಹೆಚ್ಚು ಮೃತದೇಹಗಳು  ಪತ್ತೆಯಾಗಿವೆ. 40ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಇನ್ನೂ ಒಂದು ಮಹಡಿಯಲ್ಲಿ ಹುಡುಕಾಟ ನಡೆಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಣಿಜ್ಯ ಕಟ್ಟಡವು ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಇದೆ. ಕಟ್ಟಡದಿಂದ ಸುಮಾರು 60-70 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

  ಇದನ್ನೂ ಓದಿ:ದೆಹಲಿಯ ಬಹು ಮಹಡಿ ಕಟ್ಟದಲ್ಲಿ ಭೀಕರ ಅಗ್ನಿ ದುರಂತ; 20 ಸಾವು, 40 ಕ್ಕೂ ಹೆಚ್ಚು ಜನರಿಗೆ ಗಾಯ

  ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಪ್ರಕಾರ, 20 ಅಗ್ನಿಶಾಮಕ ಟೆಂಡರ್‌ಗಳು ಘಟನಾ ಸ್ಥಳಕ್ಕೆ ಧಾವಿಸಿದ ನಂತರ ಸಂಜೆ 4.40 ಕ್ಕೆ ಬೆಂಕಿಯ ಬಗ್ಗೆ ಮಾಹಿತಿ ಲಭಿಸಿತು ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

  ಕಂಪನಿಗಳ ಕಚೇರಿಗಳಿಗೆ ಬಳಕೆ ಆಗುತ್ತಿತ್ತು
  ಬೆಂಕಿ ಅವಘಡ ನಡೆದ ಕಟ್ಟಡವನ್ನು ಸಾಮಾನ್ಯವಾಗಿ ಕಂಪನಿಗಳಿಗೆ ಕಚೇರಿ ಸ್ಥಳಾವಕಾಶಕ್ಕಾಗಿ ಬಳಸಲಾಗುತ್ತಿತ್ತು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.

  ನಿನ್ನೆಯ ಘಟನೆಗೆ ಸಂತಾಪ ಸೂಚನೆ
  ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಕಚೇರಿಯಿಂದ ಟ್ವೀಟ್ ಮೂಲಕ ಸಂತಾಪ ಸೂಚಿಸಲಾಗಿತ್ತು."ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದ ದುಃಖಿತವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ" ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಕಚೇರಿ ಟ್ವೀಟ್ ಮಾಡಿದೆ.

  ಇದನ್ನೂ ಓದಿ: Amritsarದ ಗುರುನಾನಕ್​ ದೇವ್​ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

  ಪ್ರಧಾನಿ ಮೋದಿ ಸಂತಾಪ
  "ದೆಹಲಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದ ಸಂಭವಿಸಿದ ಪ್ರಾಣಹಾನಿಯಿಂದ ಅತೀವ ದುಃಖವಾಗಿದೆ. ನನ್ನ ಆಲೋಚನೆಗಳು ದುಃಖತಪ್ತ ಕುಟುಂಬಗಳೊಂದಿಗೆ ಇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾ ಸೂಚಿಸಿದ್ದಾರೆ.
  Published by:guruganesh bhat
  First published: