ಏಮ್ಸ್ ವೈದ್ಯರ ಸಮಿತಿಯಿಂದ ಚಿದಂಬರಂ ಆರೋಗ್ಯ ಪರಿಶೀಲನೆ; ನಾಳೆಯೊಳಗೆ ವರದಿ ನೀಡುವಂತೆ ಕೋರ್ಟ್ ಸೂಚನೆ

ಈ ಏಮ್ಸ್​ ಸಮಿತಿಯಲ್ಲಿ ಹೈದ್ರಾಬಾದ್​ ಮೂಲದ ಗ್ಯಾಸ್ಟ್ರೋಲಾಜಿಸ್ಟ್​ ನಾಗೇಶ್ವರ ರೆಡ್ಡಿ ಅವರು ಇರಬೇಕು.  ಈ ಸಮಿತಿ ಸದಸ್ಯರು ಮಾಜಿ ಸಚಿವರ ಆರೋಗ್ಯ ಕುರಿತು ಅಭಿಪ್ರಾಯ ತಿಳಿಸಬೇಕು ಎಂದು ಸೂಚನೆ ನೀಡಿದೆ.

Seema.R | news18-kannada
Updated:October 31, 2019, 1:13 PM IST
ಏಮ್ಸ್ ವೈದ್ಯರ ಸಮಿತಿಯಿಂದ ಚಿದಂಬರಂ ಆರೋಗ್ಯ ಪರಿಶೀಲನೆ; ನಾಳೆಯೊಳಗೆ ವರದಿ ನೀಡುವಂತೆ ಕೋರ್ಟ್ ಸೂಚನೆ
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ
  • Share this:
ನವದೆಹಲಿ (ಅ.31): ಐಎನ್​ಎಕ್ಸ್​ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ಕಾಂಗ್ರೆಸ್​ ಹಿರಿಯ ನಾಯಕ ಪಿ ಚಿದಂಬರಂ ಆರೋಗ್ಯದ ದೃಷ್ಟಿಯಿಂದ ಏಮ್ಸ್​ ವೈದ್ಯರ ಸಮಿತಿ ರಚನೆ ಮಾಡಿದ್ದು,  ಅವರಿಗೆ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ದೆಹಲಿ ಹೈ ಕೋರ್ಟ್​ ಸೂಚಿಸಿದೆ.

ಅಲ್ಲದೇ ಈ ಸಮಿತಿ ನಾಳೆ ಮಧ್ಯಾಹ್ನದ ಒಳಗೆ ಅವರ ಆರೋಗ್ಯದ ಕುರಿತು ವರದಿ ನೀಡಬೇಕು ಎಂದು ತಿಳಿಸಿದೆ.

ತಮ್ಮ ಆರೋಗ್ಯದ ಹಿನ್ನೆಲೆ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಗೊಂಡ ಬೆನ್ನಲ್ಲೇ ದೆಹಲಿ ನ್ಯಾಯಾಲಯ ಈ ಸೂಚನೆ ನೀಡಿದೆ. ಹೊಟ್ಟೆ ನೋವಿನಿಂದ ಬಳಲುತ್ತಿರುವ ಅವರು ಕಳೆದ ಸೋಮವಾರ ಏಮ್ಸ್​ಗೆ ದಾಖಲಾಗಿದ್ದರು. ತಮ್ಮ ಆರೋಗ್ಯ ಸುಧಾರಿಸಿದ ಹಿನ್ನೆಲೆ ಹೈದ್ರಾಬಾದ್​​ನ ತಮ್ಮ ವೈದ್ಯರ ಬಳಿ ತಪಾಸಣೆಗೆ ಅನುಮತಿ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಇನ್ನು ಈ ಏಮ್ಸ್​ ಸಮಿತಿಯಲ್ಲಿ ಹೈದ್ರಾಬಾದ್​ ಮೂಲದ ಗ್ಯಾಸ್ಟ್ರೋಲಾಜಿಸ್ಟ್​ ನಾಗೇಶ್ವರ ರೆಡ್ಡಿ ಅವರು ಇರಬೇಕು.  ಈ ಸಮಿತಿ ಸದಸ್ಯರು ಮಾಜಿ ಸಚಿವರ ಆರೋಗ್ಯ ಕುರಿತು ಅಭಿಪ್ರಾಯ ತಿಳಿಸಬೇಕು ಎಂದು ಸೂಚನೆ ನೀಡಿದೆ.

ಇದನ್ನು ಓದಿ: ಅನಾರೋಗ್ಯ ಹಿನ್ನೆಲೆ ಪಿ. ಚಿದಂಬರಂ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ವಜಾ

ತಿಹಾರ್​ ಜೈಲಿನಲ್ಲಿರುವ ಚಿದಂಬರಂ, ಪ್ರತ್ಯೇಕ ಸೆಲ್​ನಲ್ಲಿ ಇರಿಸಬೇಕು ಹಾಗೂ ಪಶ್ಚಿಮಾತ್ಯ ಶೌಚಾಲಯ ವ್ಯವಸ್ಥೆಯನ್ನು ಇದು  ಒಳಗೊಂಡಿರಬೇಕು. ಅಲ್ಲದೇ ಅವರಿಗೆ ಮನೆ ಅಡುಗೆ, ಔಷೌಧಪಚಾರ ನೀಡಬೇಕು ಎಂದು ಕೂಡ ಕೋರ್ಟ್​​ ತಿಳಿಸಿದೆ.

First published: October 31, 2019, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading