ಐಎನ್​ಎಕ್ಸ್​ ಮೀಡಿಯಾ ಪ್ರಕರಣ; ಚಿದಂಬರಮ್​ಗೆ ಇನ್ನೂ 14 ದಿನ ನ್ಯಾಯಾಂಗ ಬಂಧನ; ಅ. 3ರವರೆಗೆ ಜೈಲೇ ಗತಿ

73 ವರ್ಷದ ಹಿರಿಯ ಕಾಂಗ್ರೆಸ್​ ಮುಖಂಡರಾದ ಚಿದಂಬರಂ ಅವರು ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಸ್ಟಡಿಗೆ ಕಳುಹಿಸಿದ ಸಮಯದಲ್ಲಿ ಅವರು ದೇಹದ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಸಿಬಾಲ್ ಹೇಳಿದ್ದಾರೆ.

HR Ramesh | news18-kannada
Updated:September 19, 2019, 4:59 PM IST
ಐಎನ್​ಎಕ್ಸ್​ ಮೀಡಿಯಾ ಪ್ರಕರಣ; ಚಿದಂಬರಮ್​ಗೆ ಇನ್ನೂ 14 ದಿನ ನ್ಯಾಯಾಂಗ ಬಂಧನ; ಅ. 3ರವರೆಗೆ ಜೈಲೇ ಗತಿ
ಪಿ ಚಿದಂಬರಂ ರೇಖಾಚಿತ್ರ
  • Share this:
ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಪ್ರಕರಣ ಸಂಬಂಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನದ ಅವಧಿ ಇನ್ನೂ 14 ದಿನ ವಿಸ್ತರಣೆಗೊಂಡಿದೆ. ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಅ. 3ವರೆಗೂ ಅದೇ ಕಸ್ಟಡಿಯಲ್ಲಿ ಮುಂದುವರಿಯಲಿದ್ದಾರೆ. ಚಿದಂಬರಮ್ ಅವರನ್ನು 14 ದಿನಗಳ ಕಾಲ ಜುಡಿಷಿಯಲ್ ಕಸ್ಟಡಿಗೆ ಕೊಡಬೇಕೆಂದು ಸಿಬಿಐ ಮಾಡಿಕೊಂಡ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರ ನ್ಯಾಯಪೀಠವು ಪುರಸ್ಕರಿಸಿದೆ. ಹಾಗೆಯೇ, ಚಿದಂಬರಮ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಕಾಳಜಿ ವಹಿಸಿ ಆಗಾಗ್ಗ ತಪಾಸಣೆ ನಡೆಸಬೇಕೆಂದು ಸಿಬಿಐ ಅಧಿಕಾರಿಗಳಿಗೆ ಸೂಚಿಸಿದೆ.

ಹಿರಿಯ ವಕೀಲರಾದ ಕಪಿಲ್ ಸಿಬಾಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಪಿ. ಚಿದಂಬರಂ ಪರ ವಾದ ಮಂಡನೆ ಮಾಡಿದರು. ಚಿದಂಬರಮ್ ಅವರ ಆರೋಗ್ಯ ಸ್ಥಿತಿ ಸರಿಯಾಗಿಲ್ಲ. ಹಲವಾರು ಆರೋಗ್ಯ ತೊಂದರೆಗಳಿಂದ ಬಳಲುತ್ತಿದ್ದಾರೆ ಎಂದು ಕಪಿಲ್ ಸಿಬಾಲ್. ಅವರಿಗೆ ಆಗಾಗ ವೈದ್ಯಕೀಯ ತಪಾಸಣೆಯ ಅಗತ್ಯವಿದೆ ಎಂದು ವಾದಿಸಿದರು.

ಇದನ್ನು ಓದಿ: ಹಿಂದಿ ದೇಶವನ್ನು ಒಗ್ಗೂಡಿಸಲಿದೆ ಎಂಬ ಕಲ್ಪನೆಯೇ ಅಪಾಯಕಾರಿ; ಕಾಂಗ್ರೆಸ್​​ ಹಿರಿಯ ನಾಯಕ ಪಿ. ಚಿದಂಬರಂ

73 ವರ್ಷದ ಹಿರಿಯ ಕಾಂಗ್ರೆಸ್​ ಮುಖಂಡರಾದ ಚಿದಂಬರಂ ಅವರು ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಸ್ಟಡಿಗೆ ಕಳುಹಿಸಿದ ಸಮಯದಲ್ಲಿ ಅವರು ದೇಹದ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಸಿಬಾಲ್ ಹೇಳಿದ್ದಾರೆ.

ಜೈಲಿನಲ್ಲಿ ಸೆಲ್ ಎದುರಿನ ಹಾಲ್​ನಲ್ಲಿ ಚಿದಂಬರಮ್ ಅವರಿಗೆಂದು ನೀಡಲಾಗಿದ್ದ ಕುರ್ಚಿಯನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಅವರು ಈಗ ಸೆಲ್​ವೊಳಗಿರುವ ಹಾಸಿಗೆಯ ಮೇಲಷ್ಟೇ ಕುಳಿತುಕೊಳ್ಳಬಹುದು. ಹಾಸಿಗೆಯಲ್ಲಿ ದಿಂಬು ಕೂಡ ಇಲ್ಲ ಎಂದು ಸಿಂಘ್ವಿ ವಾದಿಸಿದರು.

ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿದಂಬರಮ್ ಅವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಸಿ ಎಂಬುದು ಅವರ ಪರ ವಕೀಲರು ಮನವಿ ಮಾಡಿಕೊಂಡರು.

ಯಾವುದೇ ಖೈದಿಯಾದರೂ ಅವರ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ಕಾನೂನು ಪ್ರಕಾರ ಏನೇನು ಸಾಧ್ಯವೋ ಅದೆಲ್ಲವನ್ನೂ ಜೈಲಧಿಕಾರಿಗಳು ಮಾಡುತ್ತಾರೆ ಎಂದು ಸರಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದಿಸಿದರು.
First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading