• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Court News: ನಿರುದ್ಯೋಗಿ ಗಂಡನಿಂದ ತಿಂಗಳಿಗೆ 50 ಸಾವಿರ ಜೀವನಾಂಶ ಕೇಳಿದ ಎಂಬಿಎ ಪದವೀಧರೆ! ದುಡಿದು ತಿನ್ನುವಂತೆ ಕೋರ್ಟ್ ತಪರಾಕಿ

Court News: ನಿರುದ್ಯೋಗಿ ಗಂಡನಿಂದ ತಿಂಗಳಿಗೆ 50 ಸಾವಿರ ಜೀವನಾಂಶ ಕೇಳಿದ ಎಂಬಿಎ ಪದವೀಧರೆ! ದುಡಿದು ತಿನ್ನುವಂತೆ ಕೋರ್ಟ್ ತಪರಾಕಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳೆ ತನ್ನ ಮಧ್ಯಂತರ ಜೀವನಾಂಶಕ್ಕಾಗಿ ಮಹಿಳೆಯರ ರಕ್ಷಣೆ ಕಾಯ್ದೆಯ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್, ​ ಮಹಿಳೆ ವಿದ್ಯಾವಂತಳಾಗಿದ್ದು, ಸ್ವಯಂ ದುಡಿಯುವ ಅರ್ಹತೆ ಹೊಂದಿದ್ದಾಳೆ ಎಂದು ಮನವಿಯನ್ನು ತಿರಸ್ಕರಿಸಿದೆ.

  • Share this:

ನವದೆಹಲಿ: ದಂಪತಿ ವಿಚ್ಛೇದನ (Divorce) ಪಡೆದ ನಂತರ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ (Protection of Women from Domestic Violence Act) ಪ್ರಕಾರ ಪತಿ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶ (Maintenance) ನೀಡಬೇಕು. ಆದರೆ ಕೆಲವೊಮ್ಮೆ ಪತಿ ಜೀವನಾಂಶ ನೀಡುವುದಕ್ಕೆ ಒಪ್ಪುವುದಿಲ್ಲ. ಹಾಗಾಗಿ ಪತ್ನಿ ಕೋರ್ಟ್ (Court)​ ಮೂಲಕ ಜೀವನಾಂಶ ಕೊಡಿಸುವಂತೆ ಮನವಿ ಸಲ್ಲಿಸಬಹುದು. ಆದರೆ ಇಲ್ಲೊಂದು ಪ್ರಕರಣದಲ್ಲಿ ಮಹಿಳೆ ತನ್ನ ಪತಿಯಿಂದ ಮಧ್ಯಂತರ ಜೀವನಾಂಶ ಕೋರಿ ಸಲ್ಲಿಸಿದ್ದ ಮನವಿಯನ್ನು ಕೋರ್ಟ್​ ತಿರಸ್ಕರಿಸಿದೆ.


ಮಹಿಳೆ ತನ್ನ ಮಧ್ಯಂತರ ಜೀವನಾಂಶ ಮಹಿಳೆಯರ ರಕ್ಷಣೆ ಕಾಯ್ದೆಯ ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್, ​ ಮಹಿಳೆ ವಿದ್ಯಾವಂತಳಾಗಿದ್ದು, ಸ್ವಯಂ ದುಡಿಯುವ ಅರ್ಹತೆ ಹೊಂದಿದ್ದಾಳೆ. ಆಕೆ ತನ್ನ ಶಿಕ್ಷಣವನ್ನು ಸಾಧನವನ್ನು ಬಳಸಿಕೊಂಡು ಆದಾಯಗಳಿಸಬಹುದು. ಆಕೆಗೆ ನಿರ್ವಹಣೆಗಾಗಿ ಜೀವನಾಂಶ ನೀಡುವುದು ಆಕೆಯ ಮೇಲೆ ನಿಷ್ಕ್ರಿಯತೆ ಮತ್ತು ಸಂಗಾತಿಯ ಮೇಲಿನ ಅವಲಂಬನೆಯನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದೆ.


ತಿಂಗಳಿಗೆ 50 ಸಾವಿರ ಜೀವನಾಂಶಕ್ಕೆ ಮನವಿ


ಮಹಿಳೆ ತಿಂಗಳಿಗೆ ₹50,000 ಮಧ್ಯಂತರ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ವಯಂ ಸಿದ್ಧ ತ್ರಿಪಾಠಿ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು, ಅರ್ಜಿದಾರೆ (ಪತ್ನಿ) ಉನ್ನತ ಶಿಕ್ಷಣ ಪಡೆದಿದ್ದಾರೆ ಮತ್ತು ಆದಾಯದ ಮೂಲವನ್ನು ಕಂಡುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ನಿರ್ವಹಣೆಯ ಜೀವನಾಂಶ ಅವಕಾಶ ನೀಡುವುದರಿಂದ ಆಲಸ್ಯ ಮತ್ತು ಪತಿಯ ಮೇಲಿನ ಅವಲಂಬನೆಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ಆಕೆಗೆ ಆದಾಯ ಗಳಿಸುವ ಸಾಮರ್ಥ್ಯ ಇರುವುದರಿಂದ ನಾನು ಯಾವುದೇ ಜೀವನಾಂಶ ನೀಡಲು ಒಲವು ತೋರುವುದಿಲ್ಲ ಎಂದು ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.


ಇದನ್ನೂ ಓದಿ:  Compensation: ದುಬೈ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ಪರಿಹಾರ! ವಿಮಾ ಕಂಪನಿಗೆ ಕೋರ್ಟ್ ಆದೇಶ


ಯಾವಾಗ ಜೀವನಾಂಶ ಕೇಳಬೇಕು?


ವಿಚ್ಛೇದನ ಪಡೆದು ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದ್ದರೂ ಅದೂ, ಅದು ಎಲ್ಲಾ ಕಡೆ ಅನ್ವಯವಾಗುವುದಿಲ್ಲ. ಪತ್ನಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದಂತಹ ಸ್ಥಿತಿಯಲ್ಲಿರಬೇಕು. ಹಾಗೆಯೇ ಪತಿ ಆದಾಯ ಉತ್ತಮವಾಗಿದ್ದಾಗ ಮತ್ತು ಸಮೃದ್ಧ ಜೀವನಶೈಲಿಯನ್ನು ನಡೆಸುತ್ತಿದ್ದಾನೆ ಎಂದು ಸಾಬೀತುಪಡಿಸಿಬೇಕು. ಆಗಆಕೆಯು ತನಗೆ ಬೇಕಾದ ಅವಶ್ಯತೆಗಳ ಬಗ್ಗೆ ಮಾಹಿತಿ ನೀಡಬೇಕು. ಆಗ ಮಾತ್ರ ಆಕೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗುತ್ತಾಳೆ ಎಂದು ಕೋರ್ಟ್​ ಹೇಳಿದೆ.
ನಿರುದ್ಯೋಗಿ ಪತಿಯಿಂದ ಜೀವನಾಂಶ ಸಾಧ್ಯವಿಲ್ಲ


ಪ್ರಸ್ತುತ ಪ್ರಕರಣದಲ್ಲಿ ಜೀವನಾಂಶ ಕೇಳಿ ಪತ್ನಿ ಎಂಬಿಎ ಪದವೀಧರರಾಗಿದ್ದು, ಅವರ ಪತಿಗೆ ಸಮಾನವಾಗಿ ಅರ್ಹತೆ ಹೊಂದಿದ್ದಾರೆ, ಜೊತೆಗೆ ದೈಹಿಕವಾಗಿ ಸಮರ್ಥರಾಗಿದ್ದಾರೆ. ಆದರೆ ಉದ್ಯೋಗ ಮಾಡದಿರಲು ನಿರ್ಧರಿಸಿದ್ದಾರೆ. ಇದಲ್ಲದೆ, ವೈದ್ಯರಾಗಿದ್ದ ಪತಿ ಪ್ರಸ್ತುತ ನಿರುದ್ಯೋಗಿಯಾಗಿದ್ದು, ಅವರು ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ.


" ದೂರುದಾರರು ಮತ್ತು ಅವರ ಪತಿ ಇಬ್ಬರೂ ಆದಾಯಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಆದರೆ ಉದ್ಯೋಗದಲ್ಲಿಲ್ಲ. ಆದ್ದರಿಂದ, ಒಬ್ಬ ನಿರುದ್ಯೋಗಿ ಸಂಗಾತಿ ಮತ್ತೊಬ್ಬ ನಿರುದ್ಯೋಗಿ ಸಂಗಾತಿಗೆ ಜೀವನಾಂಶವನ್ನು ಒದಗಿಸಲು ಸಾಧ್ಯವಿಲ್ಲ " ಎಂದು ನ್ಯಾಯಾಲಯ ಹೇಳಿದೆ.


ನ್ಯಾಯ ಇಬ್ಬರಿಗೂ ಸಮಾನವಾಗಿರಬೇಕು


ಅಲ್ಲದೆ ಮಹಿಳೆ ತನ್ನ ಗಂಡನ ಮನೆಯಲ್ಲಿ ನೆಲೆಸಿದ್ದಾಗ ಉನ್ನತ ಜೀವನಮಟ್ಟವನ್ನು ಅನುಭವಿಸುತ್ತಿರುವುದನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ. ಆಕೆಯ ಪ್ರಸ್ತುತ ಕುಟುಂಬದ ಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಆಕೆಗೆ ಬೆಂಬಲಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. " ನ್ಯಾಯ ಇಬ್ಬರಿಗೂ ಸಮಾನವಾಗಿರಬೇಕು. ಅದು ಕೇವಲ ನೊಂದ ಹೆಂಡತಿಗೆ ಮಾತ್ರ ಅನ್ವಯಿಸಲಾಗುವುದಿಲ್ಲ. ಅರ್ಹ ಸಂಗಾತಿಗಳಲ್ಲಿ ಯಾರೊಬ್ಬರೂ ಇತರರ ಯೋಗಕ್ಷೇಮಕ್ಕೆ ಜವಾಬ್ದಾರರಾಗಿರುವುದಿಲ್ಲ, ಏಕೆಂದರೆ ಅವರಿಬ್ಬರೂ ನಿರ್ಗತಿಕತೆಯ ಅಂಚಿನಲ್ಲಿದ್ದಾರೆ " ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

First published: