ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್​ ಹೂಡಿದ್ದ ಮಾನಹಾನಿ ಪ್ರಕರಣ ಕೈಬಿಟ್ಟ ದೆಹಲಿ ಕೋರ್ಟ್

ಭಾರತೀಯ ಸಂವಿಧಾನವು ಮಹಿಳೆಯರಿಗೆ ತನ್ನ ಕುಂದು ಕೊರತೆಗಳನ್ನು ಯಾವುದೇ ವೇದಿಕೆಯ ಮುಂದೆ ಮತ್ತು ಯಾವುದೇ ಸಮಯದಲ್ಲಿ ಮಂಡಿಸಲು ಅನುವು ಮಾಡಿಕೊಡುತ್ತದೆಎಂದು ನ್ಯಾಯಾಧೀಶರು ತೀರ್ಪಿನ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಪತ್ರಕರ್ತೆ ಪ್ರಿಯಾ ರಮಣಿ, ಮಾಜಿ ಸಚಿವ ಎಂ.ಜೆ. ಅಕ್ಬರ್​.

ಪತ್ರಕರ್ತೆ ಪ್ರಿಯಾ ರಮಣಿ, ಮಾಜಿ ಸಚಿವ ಎಂ.ಜೆ. ಅಕ್ಬರ್​.

 • Share this:
  ದೆಹಲಿ (ಫೆಬ್ರವರಿ 17); ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಪ್ರತಿಯಾಗಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಹೂಡಲಾಗಿದ್ದ ಮಾನಹಾನಿ ಪ್ರಕರಣವನ್ನು ದೆಹಲಿ ನ್ಯಾಯಾಲಯ ಇಂದು ವಜಾಗೊಳಿಸಿದೆ. ಪ್ರಿಯಾ ರಮಣಿ ಮೇಲಿನ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿರುವ ಕೋರ್ಟ್ "ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿರುವ ವ್ಯಕ್ತಿ ಸಹ ಲೈಂಗಿಕ ಕಿರುಕುಳ ನೀಡುವವನಾಗಬಹುದು. ಹೀಗಾಗಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಕ್ಕಾಗಿ ಮಹಿಳೆಯರನ್ನು ಶಿಕ್ಷಿಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದೆ.

  2018 ರಲ್ಲಿ ಭಾರಿ ಸದ್ದು ಮಾಡಿದ್ದ #MeToo ವಿವಾದದ ಸಮಯದಲ್ಲಿ, ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ವಿರುದ್ದ ಪತ್ರಕರ್ತೆ ಪ್ರಿಯಾ ರಮಣಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದರೆ ಪತ್ರಕರ್ತೆಯ ಆರೋಪ ಸುಳ್ಳು ಎಂದು ಕಿಡಿಕಾರಿದ್ದ ಸಚಿವ ಅಕ್ಬರ್​ ಅವರ ವಿರುದ್ಧ‌ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ಕುರಿತು ದೆಹಲಿ ಕೋರ್ಟ್ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸಿದೆ.

  ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಚಿವರಾಗಿದ್ದ ಅಕ್ಬರ್ ಅವರು ರಮಣಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದಾದ ಎರಡು ದಿನಗಳ ನಂತರ, ಅಕ್ಟೋಬರ್ 17, 2018 ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  "ಭಾರತೀಯ ಸಂವಿಧಾನವು ಮಹಿಳೆಯರಿಗೆ ತನ್ನ ಕುಂದು ಕೊರತೆಗಳನ್ನು ಯಾವುದೇ ವೇದಿಕೆಯ ಮುಂದೆ ಮತ್ತು ಯಾವುದೇ ಸಮಯದಲ್ಲಿ ಮಂಡಿಸಲು ಅನುವು ಮಾಡಿಕೊಡುತ್ತದೆ"ಎಂದು ನ್ಯಾಯಾಧೀಶರು ತೀರ್ಪಿನ ವೇಳೆ ಅಭಿಪ್ರಾಯಪಟ್ಟಿದ್ದಾರೆ.

  ಪತ್ರಕರ್ತೆ ಪ್ರಿಯಾ ರಮಣಿ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಂದು 2018 ರ ಅಕ್ಟೋಬರ್‌ 15 ರಂದು ಎಂ.ಜೆ. ಅಕ್ಬರ್ ಪ್ರಿಯಾ ರಮಣಿ‌ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. 2021 ರ ಫೆಬ್ರವರಿ 1 ರಂದು ಎರಡು ಕಡೆಯ ವಾದಗಳನ್ನು ಆಲಿಸಿದ್ದ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. "ಮುಚ್ಚಿದ ಬಾಗಿಲುಗಳ ಹಿಂದೆ ಹೆಚ್ಚಿನ ಬಾರಿ ಲೈಂಗಿಕ ಕಿರುಕುಳ ನಡೆಯುತ್ತಿರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.

  ದುರುಪಯೋಗಕ್ಕೆ ಒಳಗಾಗುವ ಹೆಚ್ಚಿನ ಮಹಿಳೆಯರು ತಮ್ಮ ಮೇಲೆ ಕಳಂಕ ಅಂಟಿಕೊಳ್ಳುತ್ತದೆ ಮತ್ತು ಸಾಮಾಜಿಕವಾಗಿ ಉಂಟಾಗಬಹುದಾದ ದಾಳಿಯಿಂದಾಗಿ ಹೆಚ್ಚಾಗಿ ಮಾತನಾಡಲು ಸಾಧ್ಯವಿಲ್ಲ" ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಹೇಳಿದ್ದಾರೆ.

  ಇದನ್ನೂ ಓದಿ: ಪಂಜಾಬ್​ ಸ್ಥಳೀಯ ಚುನಾವಣೆ; ರೈತ ಹೋರಾಟಕ್ಕೆ ಬಿಜೆಪಿ ಧೂಳೀಪಟ, ಹೊಸ ಇತಿಹಾಸ ನಿರ್ಮಿಸಿದ ಕಾಂಗ್ರೆಸ್​!

  ಲೈಂಗಿಕ ದಾಳಿ ಮತ್ತು ಕಿರುಕುಳಕ್ಕೆ ಒಳಗಾದ ಸಂತ್ರಸ್ಥೆಯ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ಮಹಿಳೆಯು ತನಗಾದ ಅನ್ಯಾಯದ ವಿರುದ್ಧ ದಶಕಗಳ ನಂತರವೂ ದನಿಯೆತ್ತುವ ಹಕ್ಕು ಹೊಂದಿದ್ದಾಳೆ ಎಂದು ನ್ಯಾಯಾಧೀಶರು" ಹೇಳಿದ್ದಾರೆ.

  ಎಂ.ಜೆ. ಅಕ್ಬರ್ ಏಷ್ಯನ್ ಏಜ್ ಮುಖ್ಯಸ್ಥರಾಗಿದ್ದಾಗ ಈ ಲೈಂಗಿಕ ದುಷ್ಕೃತ್ಯ ನಡೆದಿದೆ ಎಂದು ಪತ್ರಿಕೆಯ ಲೇಖನವೊಂದರಲ್ಲಿ ಪ್ರಿಯಾ ರಮಣಿ ಬರೆದಿದ್ದರು. ಉದ್ಯೋಗ ಸಂದರ್ಶನಕ್ಕಾಗಿ ನನ್ನನ್ನು ತಮ್ಮ ಹೋಟೆಲ್ ಮಲಗುವ ಕೋಣೆಗೆ ಕರೆದು ಅಕ್ಬರ್ ಅನುಚಿತವಾಗಿ ವರ್ತಿಸಿದ್ದರು ಎಂದು ರಮಣಿ ಆರೋಪಿಸಿದ್ದರು. ಅವರ ಲೇಖನದ ಪರಿಣಾಮವಾಗಿ, ಸುಮಾರು ಒಂದು ಡಜನ್ ಮಹಿಳೆಯರು ಮಾಜಿ ಸಂಪಾದಕ ಅಕ್ಬರ್ ವಿರುದ್ಧ ಇದೇ ರೀತಿಯ ಆರೋಪಗಳನ್ನು ಹೊರಿಸಿದ್ದರು
  Published by:MAshok Kumar
  First published: