ಯುವತಿಯ ಮೇಲೆ ಪೊಲೀಸ್​ ಮಗನ ಪ್ರತಾಪ; ವೈರಲ್​ ಆಯ್ತು ವಿಡಿಯೋ: ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಂದ ಸೂಚನೆ


Updated:September 14, 2018, 5:44 PM IST
ಯುವತಿಯ ಮೇಲೆ ಪೊಲೀಸ್​ ಮಗನ ಪ್ರತಾಪ; ವೈರಲ್​ ಆಯ್ತು ವಿಡಿಯೋ: ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಂದ ಸೂಚನೆ

Updated: September 14, 2018, 5:44 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಸೆ.14): ಖಾಸಗಿ ಕಚೇರಿಯಲ್ಲಿ ಯುವತಿಯನ್ನು ಮನಬಂದಂತೆ ಥಳಿಸಿದ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್​ ಕಮಿಷನರ್​ ಅಮಲ್​ ಪಟ್ನಾಯಕ್​ ಅವರಿಗೆ ಗೃಹ ಸಚಿವ ರಾಜನಾಥ್​ ಸಿಂಗ್​ ಸೂಚಿಸಿದ್ದಾರೆ.

ಯುವಕನೊಬ್ಬ ಯುವತಿಯನ್ನು ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದರಲ್ಲಿರುವ ಆರೋಪಿ ಯುವಕ ದೆಹಲಿ ಸಬ್​ ಇನ್ಸ್​ಪೆಕ್ಟರ್​ ಮಗ ರೋಹಿತ್​ ಸಿಂಗ್​ ತೋಮರ್​ ಎಂದು ತಿಳಿದುಬಂದಿದೆ.

ಉತ್ತಮನಗರದ ಖಾಸಗಿ ಕಂಪನಿಯಲ್ಲಿ ಈ ಘಟನೆ ನಡೆದಿದ್ದು, ಯುವತಿಯ ದೂರಿನ ಆಧಾರದ ಮೇಲೆ ಯುವಕನ ವಿರುದ್ಧ ಪಶ್ಚಿಮ ದೆಹಲಿ ಪೊಲೀಸರು ಕೂಡ ಎಫ್​ಐಆರ್​ ದಾಖಲಿಸಿದ್ದಾರೆ. ಸೆ.12ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

 ಈ ಕುರಿತು ಟ್ವೀಟ್​ ಮಾಡಿರುವ ಗೃಹ ಸಚಿವರಾದ ರಾಜನಾಥ್​ ಸಿಂಗ್​, ಯುವಕ ಯುವತಿಯನ್ನು ಥಳಿಸುತ್ತಿರುವ ವಿಡಿಯೋವನ್ನು ಗಮನಿಸಿ, ಇದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ದೆಹಲಿ ಕಮಿಷನರ್​ಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಘಟನೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತಿಳಿದಿಲ್ಲ. ಆರೋಪಿ ಯುವತಿಯ ಕೂದಲು ಹಿಡಿದು ಎಳೆದಾಡಿದ್ದು, ಕೆನ್ನೆಗೆ ಬಾರಿಸಿ, ಆಕೆಯ ಹೊಟ್ಟೆಗೆ ಕಾಲಿನಿಂದ ಒದ್ದಿದ್ದಾನೆ. ಇದನ್ನು ಆತನ ಗೆಳೆಯ ಚಿತ್ರೀಕರಿಸಿದ್ದಾನೆ.

First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ