HOME » NEWS » National-international » DELHI COP BEATEN UP AT TIKRI BORDER WHEN PASTING POSTERS OF MISSING FARMERS SNVS

ನಾಪತ್ತೆಯಾದ ರೈತರ ಪೋಸ್ಟರ್ ಅಂಟಿಸಲು ಹೋದ ಪೊಲೀಸ್ ಮೇಲೆ ಹಲ್ಲೆ

ರೈತರು ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ ಗಡಿಭಾಗದಲ್ಲಿ ಪೋಸ್ಟರ್ ಹಚ್ಚಲು ಹೋಗಿದ್ದ ಪೊಲೀಸ್ ಮೇಲೆ ಕೆಲ ವ್ಯಕ್ತಿಗಳು ಹಲ್ಲೆ ಎಸಗಿದ್ದಾರೆ. ನಂಗಲೋಯ್ ಠಾಣೆಯ ಜಿತೇಂದರ್ ರಾಣ ತಲೆ ಹಾಗು ಇತರ ಭಾಗಗಳಿಗೆ ಗಾಯವಾಗಿದೆ.

news18
Updated:February 13, 2021, 8:53 AM IST
ನಾಪತ್ತೆಯಾದ ರೈತರ ಪೋಸ್ಟರ್ ಅಂಟಿಸಲು ಹೋದ ಪೊಲೀಸ್ ಮೇಲೆ ಹಲ್ಲೆ
ದೆಹಲಿ ಪೊಲೀಸರು
  • News18
  • Last Updated: February 13, 2021, 8:53 AM IST
  • Share this:
ನವದೆಹಲಿ(ಫೆ. 13): ಕಳೆದ ತಿಂಗಳ ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ಮೆರಣಿಗೆಯ ಪ್ರತಿಭಟನೆ ವೇಳೆ ಕಾಣೆಯಾಗಿದ್ದ ಕೆಲ ರೈತರ ಭಾವಚಿತ್ರಗಳಿರುವ ಪೋಸ್ಟರ್​ಗಳನ್ನ ಅಂಟಿಸಲು ಹೋದ ಒಬ್ಬ ಪೊಲೀಸನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಗಾಯಗೊಳಿಸುವ ಘಟನೆ ಟಿಕ್ರಿ ಗಡಿಭಾಗದಲ್ಲಿ ನಡೆದಿದೆ. ನಂಗಲೋಯ್ ಪೊಲೀಸ್ ಠಾಣೆಯ ಕಾನ್ಸ್​ಟಬಲ್ ಜಿತೇಂದರ್ ರಾಣಾ ಅವರ ತಲೆ ಹಾಗೂ ಇತರ ಭಾಗಗಳಿಗೆ ಗಾಯವಾಗಿರುವುದು ತಿಳಿದುಬಂದಿದೆ.

ಗಾಯಗೊಂಡ ಪೊಲೀಸನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಪ್ರಾಣಕ್ಕೆ ಅಪಾಯ ಇಲ್ಲವೆನ್ನಲಾಗುತ್ತಿದೆ. ಆದರೆ, ಹಲ್ಲೆ ಎಸಗಿದವರು ಯಾರು ಎಂಬುದು ಇನ್ನೂ ದೃಢಪಟ್ಟಿಲ್ಲ. ಗಡಿಭಾಗದಲ್ಲಿ ಪ್ರತಿಭಟನಾನಿರತ ರೈತರಿಂದ ಈ ಕೃತ್ಯ ಎಸಗಿದೆಯಾ ಎಂಬುದು ಗೊತ್ತಾಗಿಲ್ಲ. ಈ ಘಟನೆ ಸಂಬಂಧ ಎಫ್​ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Earthquake - ತಜಿಕಿಸ್ತಾನ್​ನಲ್ಲಿ ಭಾರೀ ಭೂಕಂಪ; ದೆಹಲಿ ಮತ್ತಿತರರೆಡೆಯೂ ಕಂಪಿಸಿದ ಭೂಮಿ

ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಡಿಸೆಂಬರ್ ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರೈತರು ಜನವರಿ 26ರಂದು ದೆಹಲಿಯಲ್ಲಿ ಟ್ರಾಕ್ಟರ್ ಮೆರವಣಿಗೆ ನಡೆಸಿದ್ದರು. ನಿಷಿದ್ಧವಿದ್ದ ಮಾರ್ಗಗಳಲ್ಲಿ ಪ್ರತಿಭಟನಾಕಾರರ ಒಂದು ಗುಂಪು ಟ್ರಾಕ್ಟರ್​​ಗಳನ್ನ ಕೊಂಡೊಯ್ದು ಪೊಲೀಸರ ಮೇಲೆ ಹಲ್ಲೆ ಸೇರಿದಂತೆ ಸಾಕಷ್ಟು ಹಿಂಸಾಚಾರ ನಡೆಸಿತ್ತು. ಕೆಂಪುಕೋಟೆಯಲ್ಲಿ ಸಿಖ್ ಧಾರ್ಮಿಕ ಬಾವುಟ ಹಾರಿಸಿ ಪ್ರತಿಭಟನಾಕಾರರು ದೊಡ್ಡ ವಿವಾದ ಹುಟ್ಟುಹಾಕಿದ್ದರು. ಆ ದಿನ ನಡೆದ ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿರುವುದು ತಿಳಿದುಬಂದಿದೆ. ಒಬ್ಬ ಪ್ರತಿಭಟನಾಕಾರನ ಸಾವೂ ಕೂಡ ಸಂಭವಿಸಿದೆ. ದೆಹಲಿಗೆ ಲಗ್ಗೆ ಇಟ್ಟಿದ್ದ ಹಲವು ರೈತರು ಕಾಣೆಯಾಗಿದ್ಧಾರೆ ಎಂಬ ದೂರುಗಳೂ ಕೂಡ ಕೇಳಿಬಂದಿವೆ.
Published by: Vijayasarthy SN
First published: February 13, 2021, 8:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories