Arvind Kejriwal: ಅರವಿಂದ್ ಕೇಜ್ರಿವಾಲ್​ಗೆ ಅಗ್ನಿಪರೀಕ್ಷೆ! ಆಮ್​ಆದ್ಮಿ ಶಾಸಕರಿಂದ ಬಿಜೆಪಿ ಬೆಂಬಲ?

Arvind Kejriwal trust vote today: 70 ಸದಸ್ಯರ ದೆಹಲಿ ದೆಹಲಿ ವಿಧಾನಸಭೆಯಲ್ಲಿ ಸದ್ಯ ಎಎಪಿ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 8 ಶಾಸಕರನ್ನು ಹೊಂದಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

  • Share this:
    ದೆಹಲಿ: ಅರವಿಂದ್ ಕೇಜ್ರಿವಾಲ್​ ಸರ್ಕಾರಕ್ಕೆ (CM Arvind Kejriwal Delhi Government) ಅಗ್ನಿಪರೀಕ್ಷೆ ಎದುರಾಗಿದೆ. ಬಿಜೆಪಿ ತಮ್ಮ ಪಕ್ಷದ ಶಾಸಕರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal Trust Vote Today) ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ.  70 ಸದಸ್ಯರ ದೆಹಲಿ ದೆಹಲಿ ವಿಧಾನಸಭೆಯಲ್ಲಿ ಸದ್ಯ ಎಎಪಿ (AAP vs BJP) 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ 8 ಶಾಸಕರನ್ನು ಹೊಂದಿದೆ. ಸದ್ಯ ಇಂದು ದೆಹಲಿ ವಿಧಾನಸಭೆಯ ವಿಶ್ವಾಸಮತ ಪರೀಕ್ಷೆ ಬಹಳ ಕುತೂಹಲ ಹುಟ್ಟಿಸಿದೆ. 

    ಪಕ್ಷಾಂತರ ಮಾಡಲು ಹಲವು ಎಎಪಿ ಶಾಸಕರಿಗೆ 20 ಕೋಟಿ ರೂಪಾಯಿ ನೀಡುವ ಆಮಿಷವನ್ನು ಬಿಜೆಪಿ ಒಡ್ಡಿತ್ತು ಎಂದು ಆಮ್​ ಆದ್ಮಿ ಪಕ್ಷ ಆರೋಪ ಮಾಡಿತ್ತು. ಅಲ್ಲದೇ ಬಿಜೆಪಿ ಸೇರದೇ ಇದ್ದರೆ ಸಿಬಿಐ ಮತ್ತು ಇಡಿ ಪ್ರಕರಣಗಳನ್ನು ದಾಖಲಿಸುವ ಮೂಲಕ ದೆಹಲಿಯಲ್ಲಿ ತನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ಹೂಡಿದೆ ಎಂದು ಆಮ್ ಆದ್ಮಿ ಆರೋಪಿಸಿದೆ.

    ದೆಹಲಿಯಲ್ಲಿ ಆಪರೇಷನ್ ಕಮಲ ವಿಫಲ
    ಬಿಜೆಪಿಯ ‘ಆಪರೇಷನ್ ಕಮಲ ದೆಹಲಿ’ ‘ಆಪರೇಷನ್ ಕಿಚಡ್’ ಆಗಿ ಮಾರ್ಪಟ್ಟಿದೆ ಎಂಬುದನ್ನು ದೆಹಲಿ ಜನತೆಯ ಮುಂದೆ ಸಾಬೀತುಪಡಿಸಲು ನಾನು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ತರಲು ಬಯಸುತ್ತೇನೆ ಎಂದು ಕೇಜ್ರಿವಾಲ್ ಅವರು ವಿಧಾನಸಭೆಯ ಕಲಾಪದಲ್ಲಿ ಹೇಳಿದ್ದರು.

    ಇದನ್ನೂ ಓದಿ: Mukesh Ambani: 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ! ನೀವೂ ಹೀಗೆ ಭಾಗವಹಿಸಿ

    ದೆಹಲಿಯಲ್ಲಿ ವಿಶೇಷ ವಿಧಾನಸಭೆ ಅಧಿವೇಶನ ಸೋಮವಾರ ಆರಂಭವಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಶ್ವಾಸಮತ ಯಾಚನೆಯನ್ನು ಮಂಡಿಸಿದ್ದಾರೆ. ಇತರ ರಾಜ್ಯಗಳಲ್ಲಿ ‘ಆಪರೇಷನ್ ಕಮಲ’ ಯಶಸ್ವಿಯಾಗಬಹುದೆಂದು ಸಾಬೀತುಪಡಿಸುವ ಉದ್ದೇಶವಾಗಿತ್ತು. ಆದರೆ ಎಲ್ಲಾ ಎಎಪಿ ಶಾಸಕರು ತುಂಬಾ ಪ್ರಾಮಾಣಿಕ ಆಗಿರುವುದರಿಂದ ದೆಹಲಿಯಲ್ಲಿ ಆಪರೇಷನ್ ಕಮಲ ವಿಫಲವಾಗಿದೆ ಎಂದು  ಈ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.

    ಎಲ್ಲೆಲ್ಲೂ ತೆರಿಗೆ ಎಂದ ಆಪ್ ನಾಯಕ
    ಎಎಪಿ ಶಾಸಕರನ್ನು ಬೇಟೆಯಾಡಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದ ಕೇಜ್ರಿವಾಲ್, ಗರ್ಭಾ ಡ್ಯಾನ್ಸ್‌ನಲ್ಲಿಯೂ ತೆರಿಗೆ ವಿಧಿಸಲಾಗಿದೆ ಎಂದು ಆರೋಪಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಗಳಿಸುವ ಸಂಪನ್ಮೂಲಗಳು ‘ಆಪರೇಷನ್ ಕಮಲ’ಕ್ಕೆ ವೆಚ್ಚವಾಗುತ್ತವೆ ಎಂದು ಅವರು ಹೇಳಿದರು.

    ಇದನ್ನೂ ಓದಿ: Compensation: ಮದ್ರಾಸ್ ಹೈಕೋರ್ಟ್ ವಕೀಲರಿಗೆ ಮಾನಸಿಕ ಕಿರುಕುಳ; ಪರಿಹಾರ ನೀಡಲು ಬ್ಯಾಂಕ್‌ಗೆ ಆದೇಶ

    ಅತ್ಯಂತ ಭ್ರಷ್ಟ ಸರ್ಕಾರ ಎಂದು ಆರೋಪಿಸಿದ ದೆಹಲಿ ಸಿಎಂ
    ಸ್ವಾತಂತ್ರ್ಯದ ನಂತರ ಅತ್ಯಂತ ಭ್ರಷ್ಟ ಸರ್ಕಾರ ಯಾವುದಾದರೂ ಇದ್ದರೆ, ಅದು ಪ್ರಸ್ತುತ ಕೇಂದ್ರ ಸರ್ಕಾರ ಎಂದು ಅವರು ಸದನವನ್ನು ಉದ್ದೇಶಿಸಿ ಹೇಳಿದರು.
    Published by:guruganesh bhat
    First published: