Arvind Kejriwal: ಅರವಿಂದ್​ ಕೇಜ್ರಿವಾಲ್​​ಗೆ ಕೊರೋನಾ​ ಪಾಸಿಟಿವ್​, ಹೋಂ ಐಸೋಲೇಷನ್​ನಲ್ಲಿ ದೆಹಲಿ ಸಿಎಂ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 4,099 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ದೆಹಲಿಯಲ್ಲಿ ಪಾಸಿಟಿವಿಟಿ ದರವೂ ಹೆಚ್ಚಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

  • Share this:
ನವದೆಹಲಿ(ಜ.04): ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (Delhi Chief Minister Arvind Kejriwal)​​ ಅವರಿಗೆ ಕೊರೋನಾ ಪಾಸಿಟಿವ್ (Corona Positive) ದೃಢಪಟ್ಟಿದೆ. ಈ ಕುರಿತು ಸಿಎಂ ಕೇಜ್ರಿವಾಲ್​ ತಮ್ಮ ಟ್ವಿಟ್ವರ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ. ಟ್ವೀಟ್ (Tweet) ಮಾಡಿರುವ ಅವರು, ಇಂದು ಬೆಳಗ್ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಮನೆಯಲ್ಲಿಯೇ ಐಸೋಲೇಷನ್ (Home Isolation)​ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.

‘‘ನನಗೆ ಕೋವಿಡ್ ಪಾಸಿಟಿವ್​ ದೃಢಪಟ್ಟಿದೆ. ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ. ನಾನು ಮನೆಯಲ್ಲಿ ಐಸೋಲೇಟ್ ಆಗಿದ್ದೇನೆ. ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿದ್ದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ. ಜೊತೆಗೆ ಐಸೋಲೇಟ್​ನಲ್ಲಿ ಇರಿ‘‘ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಟ್ವೀಟ್​ ಮಾಡಿದ್ದಾರೆ.ಕೇಜ್ರಿವಾಲ್​ ಅವರು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ, ಪಂಜಾಬ್​, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.

ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಳ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 4,099 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ದೆಹಲಿಯಲ್ಲಿ ಪಾಸಿಟಿವಿಟಿ ದರವೂ ಹೆಚ್ಚಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಸದ್ಯ ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ. 6.46 ಕ್ಕೆ ಹೆಚ್ಚಾಗಿದೆ. ಪ್ರಸ್ತುತ 6,288 ಕೋವಿಡ್​-19 ರೋಗಿಗಳು ಹೋಂ ಐಸೋಲೇಷನ್​ನಲ್ಲಿ ಇದ್ದಾರೆ ಎಂದು ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ ಸೋಮವಾರ ದೆಹಲಿಯಲ್ಲಿ ಒಂದು ಕೊರೋನಾ ಸಾವು ಸಹ ಸಂಭವಿಸಿದೆ.

ಇದನ್ನೂ ಓದಿ: PM Modi: ಇಂದು ತ್ರಿಪುರಾ, ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ; ಹೊಸ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಉದ್ಘಾಟನೆ

ಆತಂಕ ಮೂಡಿಸುತ್ತಿರುವ ಓಮೈಕ್ರಾನ್

ಇನ್ನು, ಓಮೈಕ್ರಾನ್​ ರೂಪಾಂತರವು ದೆಹಲಿಯಲ್ಲಿ ಹೆಚ್ಚಿನ ಆತಂಕ ಮೂಡಿಸುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 30-31ರಂದು ಮೂರು ಲ್ಯಾಬ್​ಗಳಿಂದ ಸಂಗ್ರಹವಾದ ಜೀನೋಮ್​ ಸೀಕ್ವೆನ್ಸಿಂಗ್​ ವರದಿಗಳ ಪ್ರಕಾರ, ಶೇ.81 ರಷ್ಟು ಸ್ಯಾಂಪಲ್ಸ್​​ ಓಮೈಕ್ರಾನ್​​ ಸೋಂಕು ಎಂದು ದೃಢಪಟ್ಟಿವೆ. ಹೆಚ್ಚಿನ ಪ್ರಕರಣಗಳು ಒಮೈಕ್ರಾನ್​ ಆಗಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.

ಮೂಲಗಳ ಪ್ರಕಾರ, ಈ ಉಲ್ಬಣವು ಕಲರ್-ಕೋಡೆಡ್​ ಗ್ರೇಡೆಡ್​ ರೆಸ್ಪಾನ್ಸ್​ ಆ್ಯಕ್ಷನ್​ ಪ್ಲ್ಯಾನ್​​(GRAP) ಅಡಿಯಲ್ಲಿ ಹೊಸ ನಿರ್ಬಂಧಗಳನ್ನು ವಿಧಿಸಲು ಕಾರಣವಾಗಬಹುದು. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಇಂದು ಸಭೆ ಸೇರಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ದೆಹಲಿಯಲ್ಲಿ ರೆಡ್​ ಅಲರ್ಟ್

ಸತತ 2 ದಿನಗಳಿಂದ ದೆಹಲಿಯಲ್ಲಿ ಪಾಸಿಟಿವಿ ದರ ಶೇ.5ಕ್ಕಿಂತ ಹೆಚ್ಚಾಗಿರುವ ಹಿನ್ನೆಲೆ, ರೆಡ್​ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ ದೆಹಲಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಶಾಪ್​ಗಳು, ಮಾಲ್​ಗಳು, ಸಲೂನ್​ಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ಸಾರಿಗೆ, ಮದುವೆ ಸಮಾರಂಭಗಳು ಹಾಗೂ ಅಂತ್ಯಕ್ರಿಯೆಗಳ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸಲಾಗಿದೆ.

ಹೆಚ್ಚಿನ ನಿರ್ಬಂಧ ಜಾರಿ

ಡಿಸೆಂಬರ್ 29 ರಿಂದ ರಾಜಧಾನಿಯಲ್ಲಿ "ಹಳದಿ ಅಲರ್ಟ್" ಜಾರಿಯಲ್ಲಿದೆ. ಚಿತ್ರಮಂದಿರಗಳು, ಜಿಮ್‌ಗಳನ್ನು ಮುಚ್ಚಲಾಗಿದೆ ಮತ್ತು ಬೆಸ-ಸಮ ಆಧಾರದ ಮೇಲೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಮೆಟ್ರೋ ರೈಲುಗಳು ಮತ್ತು ಬಸ್‌ಗಳು ಶೇ.50ರಷ್ಟು ಸಾಮರ್ಥ್ಯದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಇದನ್ನೂ ಓದಿ: Covid Crisis: ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳ: ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಣೆ ಸಾಧ್ಯತೆ

ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ, ಜನರು ಭಯಭೀತರಾಗಬೇಡಿ ಎಂದು ಕೇಜ್ರಿವಾಲ್ ಈ ಹಿಂದೆ ಒತ್ತಾಯಿಸಿದ್ದರು. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದರು.
Published by:Latha CG
First published: