Delhiಯಲ್ಲಿ ಇನ್ಮುಂದೆ ಕೇಳಿದವರಿಗೆ ಮಾತ್ರ ವಿದ್ಯುತ್​ ಸಬ್ಸಿಡಿ

ವಿದ್ಯುತ್ ಗ್ರಾಹಕರು ವಿದ್ಯುತ್ ಸಬ್ಸಿಡಿಯನ್ನು ಬಯಸಿದರೆ, ಅವರಿಗೆ ಮಾತ್ರ ಉಚಿತ ಅಥವಾ ಸಬ್ಸಿಡಿ ವಿದ್ಯುತ್ ನೀಡಲಾಗುವುದು.

ಸಿಎಂ ಅರವಿಂದ್​ ಕೇಜ್ರಿವಾಲ್​

ಸಿಎಂ ಅರವಿಂದ್​ ಕೇಜ್ರಿವಾಲ್​

  • Share this:
    ದೆಹಲಿ (Delhi) ಜನರಿಗೆ ವಿದ್ಯುತ್​ಅನ್ನು (Electricity)  ಉಚಿತವಾಗಿ ನೀಡುತ್ತಿದ್ದ ಆಮ್​ ಆದ್ಮಿ ಸರ್ಕಾರ ಇನ್ಮುಂದೆ ಕೇಳಿದವರಿಗೆ ಮಾತ್ರ ಉಚಿತವಾಗಿ ನೀಡಲು ಮುಂದಾಗಿದೆ. ಈ ಸಂಬಂದ ಇಂದು ಮಹತ್ವದ ಘೋಷಣೆ ಹೊರಡಿಸಿರುವ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (Delhi CM Arvind Kejriwal)​, ಅಕ್ಟೋಬರ್ 1 ರಿಂದ ರಾಷ್ಟ್ರ ರಾಜಧಾನಿಯಲ್ಲಿ ವಿದ್ಯುತ್ ಸಬ್ಸಿಡಿಯನ್ನು (Subsidy) ಕೇಳುವವರಿಗೆ ಮಾತ್ರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

    ಅನೇಕ ಜನರು ಉಚಿತ ವಿದ್ಯುತ್​ ಅತ್ಯ ಇಲ್ಲ ಈ ಹಿನ್ನಲೆ ಸಬ್ಸಿಡಿ ಬೇಕಾದವರು ತಿಳಿಸಿ ಎಂದಿದ್ದಾರೆ. ದೆಹಲಿ ವಿದ್ಯುತ್ ಗ್ರಾಹಕರು ವಿದ್ಯುತ್ ಸಬ್ಸಿಡಿಯನ್ನು ಬಯಸಿದರೆ, ಅವರಿಗೆ ಮಾತ್ರ ಉಚಿತ ಅಥವಾ ಸಬ್ಸಿಡಿ ವಿದ್ಯುತ್ ನೀಡಲಾಗುವುದು. ಈ ಜನರು ಈ ಬಗ್ಗೆ ಮಾಹಿತಿ ನೀಡಿದರೆ, ಅಕ್ಟೋಬರ್​ 1 ರಿಂದ ಬಯಸಿದವರಿಗೆ ಮಾತ್ರ ಉಚಿತ ವಿದ್ಯುತ್​ ಸಿಗಲಿದೆ ಎಂದಿದ್ದಾರೆ

    ಚುನಾವಣೆ ಭರವಸೆಯಂತೆ 2015ರಿಂದ ಉಚಿತ ವಿದ್ಯುತ್​
    ಚುನಾವಣಾ ಭರವಸೆಯಂತೆ ಕೇಜ್ರಿವಾಲ್​ ಸರ್ಕಾರ 2015ರಿಂದ ವಿಶೇಷ ವಿದ್ಯುತ್ ಸಬ್ಸಿಡಿ ಯೋಜನೆಯ ದೆಹಲಿ ಜನರಿಗೆ ಶೂನ್ಯ ವಿದ್ಯುತ್ ಬಿಲ್ ಅಡಿಯಲ್ಲಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುತ್ತದೆ. 200 ಯೂನಿಟ್‌ಗಳಿಗಿಂತ ಕಡಿಮೆ ಅಗತ್ಯವಿರುವ ಬಡ ಕುಟುಂಬಗಳಿಗೆ ಸರ್ಕಾರ ಉಚಿತವಾಗಿ ವಿದ್ಯುತ್​ ನೀಡುತ್ತಿದೆ.

    ಬಿಲ್ ಕಟ್ಟಲು ಸಮರ್ಥರಿರುವರು ಮುಂದೆ ಬನ್ನಿ
    ಈ ಕುರಿತು ಟ್ವೀಟರ್​ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಸಿಎಂ ಅರವಿಂದ್​ ಕೇಜ್ರಿವಾಲ್​, ವಿದ್ಯುತ್ ಬಿಲ್​ ಕಟ್ಟಲು ಸಮರ್ಥರೆಂದು ಪರಿಗಣಿಸಿದರೆ, ವಿದ್ಯುತ್ ಸಬ್ಸಿಡಿ ಬೇಡ ಎಂದು ಜನರು ಮುಂದೆ ಬರಬಹುದು. ಅವರು ಸಾಮಾನ್ಯ ದರದ ವಿದ್ಯುತ್ ಅನ್ನು ಬಳಸಬಹುದು. ಈ ಬಗ್ಗೆ ಶೀಘ್ರದಲ್ಲೇ ಜನರಿಂದ ಉತ್ತರ ಆಲಿಸಲಾಗುವುದು ಎಂದಿದ್ದಾರೆ
    ವಿದ್ಯುತ್ ಸಬ್ಸಿಡಿಗಾಗಿ ದೆಹಲಿ ಸರ್ಕಾರ 2015-16ರಲ್ಲಿ 1,200 ಕೋಟಿ ರೂ., 2022-23ನೇ 3,340 ಕೋಟಿ ರೂ ಅನ್ನು ವಿದ್ಯುತ್​ಗೆ  ವ್ಯಯಿಸುತ್ತಿದೆ.

    ಇದನ್ನು ಓದಿ: ನಗರಸಭೆಯ ಸಾಮಾನ್ಯ ಸಭೆಗೆ ನುಗ್ಗಿ ಆಟೋ ಡ್ರೈವರ್​ಗಳ ಆಕ್ರೋಶ, ರಸ್ತೆ ದುರಸ್ತಿಗೆ ಪಟ್ಟು

    ರಾಜಧಾನಿಯಲ್ಲಿ ಕಲ್ಲಿದ್ದಲ್ಲ ಸಮಸ್ಯೆ

    ರಾಷ್ಟ್ರ ರಾಜಧಾನಿಯು ಕಡಿಮೆ ಕಲ್ಲಿದ್ದಲು ದಾಸ್ತಾನು ಎದುರಿಸುತ್ತಿರುವ ಹಿನ್ನಲೆ ಈ ಪ್ರಕಟಣೆ ಹೊರ ಬಿದ್ದಿದೆ ಎನ್ನಲಾಗಿದೆ. ಈ ನಡುವೆ ರಾಜ್ಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ದೆಹಲಿಗೆ ವಿದ್ಯುತ್ ಪೂರೈಸುವ ವಿವಿಧ ಥರ್ಮಲ್ ಪ್ಲಾಂಟ್ ಗಳಲ್ಲಿ ಕಡಿಮೆ ಕಲ್ಲಿದ್ದಲು ದಾಸ್ತಾನು ಇರುವ ವಿವರಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ರಾಜಧಾನಿಯಲ್ಲಿ ನಿರಂತರ ವಿದ್ಯುತ್ ಪೂರೈಕೆಗಾಗಿ ಕಲ್ಲಿದ್ದಲು ಸಮರ್ಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

    ಇದನ್ನು ಓದಿ: ಬೆಂಗಳೂರಿನಲ್ಲಿ ಕ್ಯಾಬ್‍ಗಳ ಕೊರತೆ: ಪ್ರಯಾಣಿಕರಿಗಷ್ಟೇ ಅಲ್ಲ, ಚಾಲಕರಿಗೂ ಸಮಸ್ಯೆ

    ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ರಾಜಧಾನಿಯಲ್ಲಿನ ವಿದ್ಯುತ್ ಪರಿಸ್ಥಿತಿ ಕುರಿತು ದೆಹಲಿ ಸರ್ಕಾರ ತಪ್ಪು ಮಾಹಿತಿ ನೀಡಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ

    ಸ್ಟಾರ್ಟ್​ ಅಪ್​ ನೀತಿ ಬಿಡುಗಡೆ
    ವಿದ್ಯುತ್​ ಸೇರಿದಂತೆ ಅನೇಕ ವಿಷಯಗಳ ಕುರಿತು ಇಂದು ದೆಹಲಿ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಳಿಕ ಮಾತನಾಡಿ ಸಿಎಂ, ರಾಷ್ಟ್ರ ರಾಜಧಾನಿಯಲ್ಲಿ ಸ್ಟಾರ್ಟ್-ಅಪ್‌ಗಳಿಗೆ ಬಾಡಿಗೆ, ಸಂಬಳ ಮತ್ತು ಪೇಟೆಂಟ್ ಶುಲ್ಕವನ್ನು ಪಾವತಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಯುವಜನರ ಕನಸಿಗೆ ಬಡ್ಡಿ ರಹಿತ ಸಾಲವನ್ನು ಒದಗಿಸಿ, ಉಚಿತ ಕಾನೂನು ಮತ್ತು ಆರ್ಥಿಕ ಸಲಹೆಯನ್ನು ನೀಡಲಾಗುವುದು. ಜೊತೆಗೆ ಅವರಿಗೆ ಹೂಡಿಕೆದಾರರನ್ನು ಹುಡುಕಲು ಸಹಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ
    Published by:Seema R
    First published: