Arvind Kejriwal: ಕಾಂಗ್ರೆಸ್ ಕಾಲ ಮುಗಿದುಹೋಗಿದೆ; ಕೇಜ್ರಿವಾಲ್ ಘೋಷಣೆ

ಗುಜರಾತ್​ನಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಕ್ಷ ಪರ್ಯಾಯವಾಗಿ ನಿಲ್ಲಲಿದೆ ಎಂದು ಸಹ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಾಖ್ಯಾನಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

 • Share this:
  ಅಹಮದಾಬಾದ್: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಕಾಲ ಮುಗಿದುಹೋಗಿದೆ ಎಂದು ದೇಶದ ಅತಿ ಹಳೆಯ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  2023 ರಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು ಸ್ವಚ್ಛತಾ ಕಾರ್ಮಿಕರ ಜೊತೆ ಸಂವಾದ ನಡೆಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. 

  ಪಂಜಾಬ್‌ನ ಎಎಪಿ ಸರ್ಕಾರವು ದಿವಾಳಿತನದ ಅಂಚಿನಲ್ಲಿದ್ದು, ಸಂಬಳಕ್ಕೂ ಹಣ ಒದಗಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದೆ. ಆದರೆ ಗುಜರಾತ್‌ ವಿಧಾನನಭಾ ಚುನಾವಣೆಯಲ್ಲಿನ ಜಾಹೀರಾತುಗಳಿಗಾಗಿ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಪ್ರತಿಕ್ರಿಯಿಸುವಂತೆ ವರದಿಗಾರರೊಬ್ಬರು ಅವರನ್ನು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, ಕಾಂಗ್ರೆಸ್ ಕಾಲ ಈಗಾಗಲೇ ಮುಗಿದುಹೋಗಿದೆ. ಯಾರೂ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ತೀಕ್ಷ್ಣವಾಗಿ ವ್ಯಂಗ್ಯ ಮಾಡಿದ್ದಾರೆ.

  ಕಾಂಗ್ರೆಸ್​ಗೆ ಮತ ಹಾಕಿ ಏಕೆ ವೇಸ್ಟ್ ಮಾಡ್ತೀರಾ?
  ಕಾಂಗ್ರೆಸ್​ಗಿಂತ ಬಿಜೆಪಿಯೇ ಆಮ್ ಆದ್ಮಿ ಪಕ್ಷದ ನಿಜವಾದ ಎದುರಾಳಿ ಎಂದು ಘೋಷಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್​ಗೆ ಮತ ಹಾಕಿ ಏಕೆ ನಿಮ್ಮ ಮತವನ್ನು ಹಾಳು ಮಾಡುತ್ತೀರಿ? ಎಂದು ಸಹ ಪ್ರಶ್ನಿಸಿದ್ದಾರೆ. ಗುಜರಾತ್​ನಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಕ್ಷ ಪರ್ಯಾಯವಾಗಿ ನಿಲ್ಲಲಿದೆ ಎಂದು ಸಹ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವ್ಯಾಖ್ಯಾನಿಸಿದ್ದಾರೆ.

  ಪೊಲೀಸರ ವಿರುದ್ಧ ಸಿಟ್ಟಿಗೆದ್ದ ದೆಹಲಿ ಸಿಎಂ
  ಅರವಿಂದ್ ಕೇಜ್ರಿವಾಲ್ ಪೊಲೀಸರ ವಿರುದ್ಧ ಸಿಟ್ಟಿಗೆದ್ದ ಕಾರಣಗಳಿಂದ ದೇಶಾದ್ಯಂತ ಮತ್ತೆ ಸುದ್ದಿಯಲ್ಲಿದ್ದಾರೆ. ಪೊಲೀಸರಿಗೂ ಅರವಿಂದ್ ಕೇಜ್ರಿವಾಲ್ ನಡುವೆ ಹೈವೋಲ್ಟೇಜ್ ಡ್ರಾಮಾ ನಡೆದಿದೆ.

  ಇದನ್ನೂ ಓದಿ: Viral Video: ನಾನು ಕಳ್ಳರ ಸರದಾರ ಎಂದ ಬಿಹಾರ ಸಚಿವ! ಸರ್ಕಾರದಲ್ಲಿ ಇನ್ನೂ ದೊಡ್ಡ ಕಳ್ಳರಿದ್ದಾರಂತೆ

  ಈ ಹಿಂದೆ ಆಟೋ ಚಾಲಕರೋರ್ವರು ದೆಹಲಿ ಸಿಎಂ ಕೇಜ್ರಿವಾಲ್​ರನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಸೋಮವಾರ ತಡರಾತ್ರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಊಟಕ್ಕೆ ಕರೆದಿದ್ದ ಆಟೋ ಚಾಲಕನ ಮನೆಗೆ ಹೋಗುತ್ತಿದ್ದಾಗ ಅವರನ್ನು ಪೊಲೀಸರು ಭದ್ರತಾ ಕಾರಣಗಳಿಗಾಗಿ ತಡೆದು ನಿಲ್ಲಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 'ಜನತಾ ಕಾ ಆದ್ಮಿ ಹೂ' ಎಂದು ಪೊಲೀಸ್ ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.

  ನಮಗೆ ನಿಮ್ಮ ಭದ್ರತೆ ಬೇಡ
  “ನಿಮ್ಮ ಭದ್ರತೆ ನಮಗೆ ಬೇಡ. ನಿಮ್ಮ ಭದ್ರತೆಯನ್ನು ನೀವು ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳದೆಯೂ ಇರಬಹುದು. ನೀವು ನಮ್ಮನ್ನು ಭದ್ರತೆ ತೆಗೆದುಕೊಳ್ಳುವಂತೆ ಏಕೆ ಒತ್ತಾಯಿಸುತ್ತಿದ್ದೀರಿ? ನೀವು ನಮ್ಮನ್ನು ಒತ್ತೆಯಾಳಾಗಿ ಇರಿಸಿದ್ದೀರಿ ”ಎಂದು ಕೇಜ್ರಿವಾಲ್ ಅಧಿಕಾರಿಗೆ ಹೇಳಿದ್ದಾರೆ.

  ಇದನ್ನೂ ಓದಿ: Dog Attack: 12 ವರ್ಷದ ಪುಟ್ಟ ಬಾಲಕನ ಮೇಲೆ ಎರಗಿದ ಬೀದಿನಾಯಿ, ಕಿತ್ತು ತಿನ್ನುವ ಭಯಾನಕ ವಿಡಿಯೋ ವೈರಲ್​!

  ಎಎಪಿ ಟ್ವೀಟ್ ಮಾಡಿದ ವೀಡಿಯೊದಲ್ಲಿ ಇಬ್ಬರು ಆಮ್ ಆದ್ಮಿ ಕಾರ್ಯಕರ್ತರ ಪಕ್ಕದಲ್ಲಿ ಕುಳಿತಿರುವ ಅರವಿಂದ್ ಕೇಜ್ರಿವಾಲ್, ಕರ್ತವ್ಯದಲ್ಲಿರುವ ಅಧಿಕಾರಿ ವಿರುದ್ದ ಸಿಟ್ಟಿಗೆದ್ದಿರುವ ಕಂಡುಬರುತ್ತದೆ. "ಇದಕ್ಕಾಗಿಯೇ ಗುಜರಾತ್‌ನ ಜನರು ಅತೃಪ್ತರಾಗಿದ್ದಾರೆ. ಪ್ರೋಟೋಕಾಲ್ ಅನ್ನು ಉಲ್ಲೇಖಿಸಿ ನೀವು ಜನರ ಬಳಿಗೆ ಹೋಗುವುದನ್ನು ತಡೆಯುತ್ತಿದ್ದೀರಿ. ರಾಜ್ಯದ ನಾಯಕರು ಅವರ ಬಳಿಗೆ ಹೋಗುವುದಿಲ್ಲ. ಪ್ರೋಟೋಕಾಲ್ ಅನ್ನು ಮುರಿದು ಜನರನ್ನು ಭೇಟಿ ಮಾಡಲು ನಿಮ್ಮ ನಾಯಕರನ್ನು ಆಗ್ರಹಿಸಿ" ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಿರುವುದು ಸಹ ವಿಡಿಯೋದಲ್ಲಿ ಕೇಳಿಸುತ್ತದೆ. ಸದ್ಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪೊಲೀಸರಿಗೆ ಬೈಯ್ದಿರುವ ವಿಡಿಯೋ ವೈರಲ್ ಆಗುತ್ತಿದೆ.
  Published by:ಗುರುಗಣೇಶ ಡಬ್ಗುಳಿ
  First published: