Arvind Kejriwal: ಮತ್ತೆ ಹದಗೆಟ್ಟ ಅರವಿಂದ ಕೇಜ್ರಿವಾಲ್ ಆರೋಗ್ಯ, ಜಿಂದಾಲ್ ಚಿಕಿತ್ಸಾ ಕೇಂದ್ರದಲ್ಲಿ ಟ್ರೀಟ್ಮೆಂಟ್​

ದೆಹಲಿ ಸಿಎಂ ಆರೋಗ್ಯ ಹದಗೆಟ್ಟಿದ್ದು, ಜಿಂದಾಲ್​ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿರೋ ಅರವಿಂದ ಕೇಜ್ರಿವಾಲ್​ ಇನ್ನು ಒಂದು ವಾರಗಳ ಕಾಲ ಇಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ.

ಸಿಎಂ ಅರವಿಂದ ಕೇಜ್ರಿವಾಲ್​

ಸಿಎಂ ಅರವಿಂದ ಕೇಜ್ರಿವಾಲ್​

  • Share this:
ಬೆಂಗಳೂರು (ಫೆ.28): ಪಂಚರಾಜ್ಯಗಳ ವಿಧಾ​ನ​ಸ​ಭೆ ಚುನಾ​ವ​ಣೆ (Assembly Elections)​ ಹಿನ್ನೆಲೆ ಕಳೆದ 2 ತಿಂಗ​ಳಿಂದ ಪಂಜಾಬ್​ , ಗೋವಾ ಸೇರಿದಂತೆ ಹಲವಡೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ (Arvind Kejriwal) ಭರ್ಜರಿ ಪ್ರಚಾರ ನಡೆಸಿದ್ರು. ವಿಶ್ರ​ಮಿ​ಸದೇ ಪ್ರಚಾರದಲ್ಲಿ ನಿರ​ತ​ರಾ​ಗಿದ್ದ ಅರ​ವಿಂದ ಕೇಜ್ರಿ​ವಾಲ್‌ ಅವರು ಇದೀಗ ಅನಾ​ರೋ​ಗ್ಯ​ಕ್ಕೀ​ಡಾ​ಗಿ​ದ್ದಾರೆ. ಚುನಾವಣೆ (Election) ಪ್ರಚಾ​ರಕ್ಕೆ ತೆರಳಿದ ಪರಿಣಾಮ ಅವರ ಆಹಾರದಲ್ಲಿ ವ್ಯತ್ಯಯವಾ​ಗಿದ್ದು, ಚಿಕಿತ್ಸೆ ಪಡೆಯಲು ಬೆಂಗಳೂರಿನ ಜಿಂದಾಲ್​ಗೆ (Jindal Naturecure) ಆಗಮಿಸಿದ್ದಾರೆ. ಬೆಂಗಳೂರು ಉತ್ತರದ   ಮಾದವಾರದ ಬಳಿ ಇರೋ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಅರವಿಂದ್​ ಕೇಜ್ರಿವಾಲ್​ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಸಿರಾಟದ ತೊಂದರೆ, ಕೆಮ್ಮು, ಸಕ್ಕರೆ ಕಾಯಿಲೆಯಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಬಳಲುತ್ತಿದ್ದಾರೆ.

ಕುಟುಂಬ ಸಮೇತರಾಗಿ ಜಿಂದಾಲ್​ಗೆ ಕೇಜ್ರಿವಾಲ್​

ಹಲವು ಬಾರಿ ಬೆಂಗಳೂರಿನ ಪ್ರಕೃತಿ ಕೇಂದ್ರ ಜಿಂದಾಲ್​ನಲ್ಲಿ ಚಿಕಿತ್ಸೆ ಪಡೆಯಲು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಗಮಿಸಿದ್ದಾರೆ ಆದ್ರೆ ಈ ಬಾರಿ ಅವರು ತಮ್ಮ ಕುಟುಂಬ ಸಮೇತರಾಗಿ ಬಂದು ಜಿಂದಾಲ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದಲ್ಲಿ ಏರುಪೇರು ಉಂಟಾಗಿರೋ ಹಿನ್ನೆಲೆ ಅವರು ಜಿಂದಾಲ್​ನಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದಾರೆ.

ಮಾರ್ಚ್​ 7ರ ವರೆಗೆ ಜಿಂದಾಲ್​ನಲ್ಲೇ ಚಿಕಿತ್ಸೆ

ಇವತ್ತು ಜಿಂದಾಲ್​ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿರೋ ಅರವಿಂದ ಕೇಜ್ರಿವಾಲ್​ ಇನ್ನು ಒಂದು ವಾರಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಉಸಿರಾಟದ ತೊಂದರೆ, ಕೆಮ್ಮು, ಸಕ್ಕರೆ ಕಾಯಿಲೆಯಂತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಬಳಲುತ್ತಿದ್ದಾರೆ. ಆರೋಗ್ಯ ಹದಗೆಟ್ಟಾಗ ಹಲವು ಬಾರಿ ಜಿಂದಾಲ್​ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಈ ಬಾರಿ ಅವ್ರು ಮಾರ್ಚ್​ 7ರ ವರೆಗೆ ಚಿಕಿತ್ಸೆ ಪಡೆದು ವಾಪಸ್​ ಆಗಲಿದ್ದಾರೆ.

ಇದನ್ನೂ ಓದಿ: UP Election: ಸಾಯುವವರೆಗೂ Varanasi ಜನರ ಸೇವೆ ಮಾಡುತ್ತೇನೆ; PM Modi

ಚುನಾವಣೆ ಪ್ರಚಾರದಿಂದ ಹದಗೆಟ್ಟ ಆರೋಗ್ಯ

ಪಂಚರಾಜ್ಯ ಚುನಾವಣೆ ಹಿನ್ನೆಲೆ ಎಎಪಿ ಅಭ್ಯರ್ಥಿಗಳ ಪರ ದೆಹಲಿ ಸಿಎಂ ಭರ್ಜರಿ ಪ್ರಚಾರ ನಡೆಸಿದ್ರು. ಎಎಪಿಗೆ ಪ್ರತಿಷ್ಠೆಯ ಕಣವಾಗಿರೋ ಪಂಜಾಬ್​ ನಲ್ಲಿ ಗೆಲುವಿ ಸಾಧಿಸಲೇಬೇಕೆಂದು ಕೇಜ್ರಿವಾಲ್ ಹಗಲು, ರಾತ್ರಿ ಎನ್ನದೆ ಪ್ರಚಾರ, ಸಭೆ, ಸಮಾರಂಭಗಳಲ್ಲಿ ಬ್ಯುಸಿಯಾಗಿದ್ರು, ಮೊದಲೇ ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಪ್ರಚಾರದ ವೇಳೆ ಧೂಳು, ಆಯಾಸದ ಓಡಾಟ ಅವರನ್ನು ಮತ್ತೆ ಆಸ್ಪತ್ರೆ ಸೇರುವಂತೆ ಮಾಡಿದೆ. ಈ ಹಿಂದೆ ಕೂಡ ಜಿಂದಾಲ್​ಗೆ ಬಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಚಿಕಿತ್ಸೆ ಪಡೆದಿದ್ರು.

​ಈ ಹಿಂದೆ ಜಿಂದಾಲ್​ನಲ್ಲಿ ಚಿಕಿತ್ಸೆ ಪಡೆದಿದ್ದ ಕೇಜ್ರಿವಾಲ್​

2018ರಲ್ಲಿಯೂ ಸಹ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ  ಆರೋಗ್ಯ ಸಮಸ್ಯೆ ಹೆಚ್ಚಾಗಿತ್ತು. ರಕ್ತ​ದ​ಲ್ಲಿನ ಸಕ್ಕರೆ ಪ್ರಮಾಣ ಏಕಾ​ಏಕಿ ಏರಿ​ಕೆ​ಯಾ​ಗಿತ್ತು. ಹೀಗಾಗಿ ಅವರಿಗೆ ದಿನಕ್ಕೆ ಮೂರು ಬಾರಿ ಇನ್ಸು​ಲಿನ್‌ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಗಿತ್ತು. ಸುಮಾರು 10-12 ದಿನ​ಗಳ ಕಾಲ ಬೆಂಗ​ಳೂ​ರಿ​ನಲ್ಲಿ ಪ್ರಕೃತಿ ಚಿಕಿ​ತ್ಸೆ​ಗೆ (​ನ್ಯಾಚು​ರೋ​ಪ​ತಿ) ಅವರು ಒಳ​ಗಾ​ಗ​ಲಿ​ದ್ರು ಎಂದು ಆಮ್‌ ಆದ್ಮಿ ಪಕ್ಷದ ಮೂಲ​ಗಳು ತಿಳಿ​ಸಿ​ವೆ.

ಇದನ್ನೂ ಓದಿ: Nuclear Bomb Alert: ರಷ್ಯಾ ಉಕ್ರೇನ್ ಯುದ್ಧದಲ್ಲಿ ಪರಮಾಣು ಬಾಂಬ್ ಭೀತಿ; ಹೈ ಅಲರ್ಟ್​ನಲ್ಲಿರಲು ಸೂಚಿಸಿದ ಪುಟಿನ್

ಕೇಜ್ರಿವಾಲ್‌ ಚಿಕಿತ್ಸೆಗಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಇದು 5ನೇ ಬಾರಿ. ಈ ಹಿಂದೆ 2015ರ ಮಾ.5ರಂದು ಜಿಂದಾಲ್‌ ನ್ಯಾಚು​ರೋ​ಪ​ತಿ ಇನ್ಸಿ$್ಟಟ್ಯೂಟ್‌ಗೆ ದಾಖಲಾಗಿ ಕೆಮ್ಮಿಗೆ ಚಿಕಿತ್ಸೆ ಪಡೆದಿದ್ದರು. ಬಳಿಕ 2016ರ ಜ.30ರಂದು ಕೆಮ್ಮು ಮತ್ತು ಸಕ್ಕರೆ ಕಾಯಿಲೆಯ ಚಿಕಿತ್ಸೆಗಾಗಿ ಜಿಂದಾಲ್‌ ನ್ಯಾಚು​ರೋ​ಪ​ತಿ ಇನ್ಸ್ಟಿಟ್ಯೂಟ್‌ಗೆ ಮತ್ತೊಮ್ಮೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 2016ರ ಸೆ.15ರಂದು ಬೆಂಗಳೂರಿನ ಮಜುಂದಾರ್‌ ಶಾ ಕ್ಯಾನ್ಸರ್‌ ಸೆಂಟರ್‌ನಲ್ಲಿ ಕೆಮ್ಮಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಕಿರುನಾಲಿಗೆ ಚಿಕಿತ್ಸೆ ನೆರವೇರಿಸಲಾಗಿತ್ತು. ಇದೀಗ ಕುಟುಂಬ ಸಮೇತರಾಗಿ ಜಿಂದಾಲ್​ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಒಂದು ವಾರಗಳ ಇಲ್ಲೇ ಇದ್ದು ಗುಣಮುಖರಾದ ಬಳಿಕ ವಾಪಸ್​ ಆಗಲಿದ್ದಾರೆ.
Published by:Pavana HS
First published: