• Home
  • »
  • News
  • »
  • national-international
  • »
  • ನೋಟುಗಳ ಮೇಲೆ ಗಣೇಶ, ಲಕ್ಷ್ಮೀ ದೇವಿಯರ ಚಿತ್ರ ಛಾಪಿಸಿ; ಅರವಿಂದ್ ಕೇಜ್ರಿವಾಲ್ ಆಗ್ರಹ

ನೋಟುಗಳ ಮೇಲೆ ಗಣೇಶ, ಲಕ್ಷ್ಮೀ ದೇವಿಯರ ಚಿತ್ರ ಛಾಪಿಸಿ; ಅರವಿಂದ್ ಕೇಜ್ರಿವಾಲ್ ಆಗ್ರಹ

ಪ್ರಧಾನಿ ಮೋದಿ, ದೆಹಲಿ ಸಿಎಂ ಕೇಜ್ರಿವಾಲ್​

ಪ್ರಧಾನಿ ಮೋದಿ, ದೆಹಲಿ ಸಿಎಂ ಕೇಜ್ರಿವಾಲ್​

ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಇರಿಸಿ, ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಹೊಂದಿರುವ ಭಾರತೀಯ ಕರೆನ್ಸಿ ನೋಟುಗಳನ್ನು ಪರಿಚಯಿಸಬೇಕು ಎಂದು ದೆಹಲಿ ಸಿಎಂ ಮನವಿ ಮಾಡಿದ್ದಾರೆ.

  • News18 Kannada
  • Last Updated :
  • New Delhi, India
  • Share this:

    ಭಾರತದ ಕರೆನ್ಸಿ ಮೇಲೆ ಗಣೇಶ ಮತ್ತು ಲಕ್ಷ್ಮೀ ದೇವಿಯರ ಚಿತ್ರಗಳನ್ನು ಛಾಪಿಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Delhi CM Arvind Kejriwal ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಇರಿಸಿ, ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಹೊಂದಿರುವ ಭಾರತೀಯ ಕರೆನ್ಸಿ ನೋಟುಗಳನ್ನು (Ganesh and Lakshmi Photos On Indian Currency) ಪರಿಚಯಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದ್ದಾರೆ.  


    ಇದೇ ಪರಿಕಲ್ಪನೆಯನ್ನು ಅನುಸರಿಸುವ ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದ ಉದಾಹರಣೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.


    ಇಂಡೋನೇಷ್ಯಾದಲ್ಲಿ ಸಾಧ್ಯವಾದದ್ದು ಭಾರತದಲ್ಲೇಕೆ ಸಾಧ್ಯವಿಲ್ಲ?
    ಇಂಡೋನೇಷ್ಯಾದಲ್ಲಿ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಗಣೇಶನ ಚಿತ್ರವಿದೆ. ಅದು ಮುಸ್ಲಿಂ ಬಹುಸಂಖ್ಯಾತರ ದೇಶವಾಗಿದೆ.  ಆ ದೇಶವು 85% ಕ್ಕಿಂತ ಹೆಚ್ಚು ಮುಸ್ಲಿಮರನ್ನು ಹೊಂದಿದೆ.ಆದರೂ ಇಂಡೋನೇಷ್ಯಾದಲ್ಲಿ ನೋಟುಗಳ ಮೇಲೆ ಗಣೇಶನ ಚಿತ್ರ ಮುದ್ರಿಸಲಾಗಿದೆ. ಆ ದೇಶದಲ್ಲೇ ಹೀಗೆ ಮಾಡಲು ಸಾಧ್ಯವಾಗುತ್ತದೆ ಎಂದಾದರೆ ಭಾರತದಲ್ಲು ಸಹ ಗಣೇಶ ಮತ್ತು ಲಕ್ಷ್ಮೀ ದೇವಿಯರ ಚಿತ್ರಗಳನ್ನು ನೋಟುಗಳ ಮೇಲೆ ಮುದ್ರಿಸಬಹುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.


    ದೇವರ ಆಶೀರ್ವಾದ ಬೇಕೇಬೇಕು
    ಪ್ರಯತ್ನಗಳನ್ನು ಮಾಡಿದರೂ ಕೆಲವೊಮ್ಮೆ ದೇವರು ಮತ್ತು ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ನಮ್ಮ ಕರೆನ್ಸಿಯಲ್ಲಿ ಅಥವಾ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಅಳವಡಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ ದೆಹಲಿ ಮುಖ್ಯಮಂತ್ರಿ.


    ಇದನ್ನೂ ಓದಿ: Rishi Sunak: ರಿಷಿ ಸುನಕ್ ಕೈಯಲ್ಲಿ ಹಿಂದೂಗಳ ಪವಿತ್ರ ಕೆಂಪು ದಾರ!


    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ
    ನಮ್ಮ ನೋಟುಗಳಲ್ಲಿ ಲಕ್ಷ್ಮಿ-ಗಣೇಶನ ಫೋಟೋ ಇದ್ದರೆ, ನಮ್ಮ ದೇಶವು ಅಭಿವೃದ್ಧಿ ಹೊಂದುತ್ತದೆ. ನಾನು ಈ ಬಗ್ಗೆ ಎರಡು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.


    ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ವಿಷಾದಿಸಿದ ದೆಹಲಿ ಸಿಎಂ, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವ ಮೂಲಕ ದೇಶವು ಸೂಕ್ಷ್ಮ ಪರಿಸ್ಥಿತಿಯ ಮೂಲಕ ಹಾದುಹೋಗುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.


    ಇದನ್ನೂ ಓದಿ: Rishi Sunak: ಬ್ರಿಟನ್​ ಪಿಎಂ ಭಾರತ ಮೂಲದವರಾಗಿರುತ್ತಾರೆ, 2015ರಲ್ಲಿ ಮೋದಿ ಎದುರೇ ಆಗಿತ್ತು ಈ ಭವಿಷ್ಯವಾಣಿ!


    "ಭಾರತವು ಶ್ರೀಮಂತವಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಇಲ್ಲಿನ ಪ್ರತಿಯೊಂದು ಕುಟುಂಬವು ಸಮೃದ್ಧವಾಗಿರಬೇಕು. ನಾವು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ದೊಡ್ಡ ಪ್ರಮಾಣದಲ್ಲಿ ತೆರೆಯಬೇಕು" ಎಂದು ಅವರು ಹೇಳಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: