HOME » NEWS » National-international » DELHI CHALO FARMERS PROTEST IN DELHI AGAINST UNION GOVERNMENT AGRICULTURE LAW DBDEL SCT

ನೂತನ ಕೃಷಿ, ವಿದ್ಯುತ್ ಕಾಯ್ದೆಗೆ ವಿರೋಧ; ಇಂದಿನಿಂದ ದೆಹಲಿಯಲ್ಲಿ ರೈತರ ಅನಿರ್ಧಿಷ್ಟಾವಧಿ ಧರಣಿ

ದೆಹಲಿಗೆ ಸಮೀಪ ಇರುವ ರಾಜ್ಯಗಳಾದ ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಿಂದ ರೈತರು ಟ್ರ್ಯಾಕ್ಟರ್‌ ಮುಖಾಂತರ ಆಗಮಿಸಲಿದ್ದಾರೆ.‌ ಇಂದು ದೆಹಲಿಯಲ್ಲಿ ಜಮಾವಣೆ ಆಗಿ ನಂತರ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

news18-kannada
Updated:November 26, 2020, 7:51 AM IST
ನೂತನ ಕೃಷಿ, ವಿದ್ಯುತ್ ಕಾಯ್ದೆಗೆ ವಿರೋಧ; ಇಂದಿನಿಂದ ದೆಹಲಿಯಲ್ಲಿ ರೈತರ ಅನಿರ್ಧಿಷ್ಟಾವಧಿ ಧರಣಿ
ರೈತರ ಪ್ರತಿಭಟನೆ
  • Share this:
ನವದೆಹಲಿ (ನ. 26): ಕೇಂದ್ರ ಸರ್ಕಾರ ತಂದಿರುವ ನೂತನ ಕೃಷಿ ಹಾಗೂ ವಿದ್ಯುತ್‌ ಕಾಯ್ದೆಗಳನ್ನು ವಿರೋಧಿಸಿ ದೇಶದ ವಿವಿಧೆಡೆಯಿಂದ  'ದಿಲ್ಲಿ ಚಲೋ' ಹೆಸರಿನಲ್ಲಿ ದೆಹಲಿಯತ್ತ ಬರುತ್ತಿರುವ ರೈತರು ಇಂದಿನಿಂದ ದೆಹಲಿಯಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ದೇಶದ ಎಲ್ಲೆಡೆಯಿಂದಲೂ ರೈತರು ದೆಹಲಿಗೆ ಆಗಮಿಸುತ್ತಿದ್ದಾರೆ. ದೆಹಲಿಗೆ ಸಮೀಪ ಇರುವ ರಾಜ್ಯಗಳಾದ ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಿಂದ ರೈತರು ಟ್ರ್ಯಾಕ್ಟರ್‌ ಮುಖಾಂತರ ಆಗಮಿಸಲಿದ್ದಾರೆ.‌ ಇಂದು ದೆಹಲಿಯಲ್ಲಿ ಜಮಾವಣೆ ಆಗಿ ನಂತರ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ಆದರೆ, ಈಗಾಗಲೇ ಕೆಲವು ಕಡೆ ರೈತರು ದೆಹಲಿಗೆ ಬರದಂತೆ ದಾರಿ ಮಧ್ಯೆಯೇ ತಡೆಯಲಾಗಿದೆ. ರೈತರನ್ನು ತಡೆದಿರುವ ಕಡೆ ರೈತರು ಅಲ್ಲೇ ಧರಣಿ ಆರಂಭಿಸಿದ್ದಾರೆ. ಕೆಲವೆಡೆ ರೈತ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ರೈತರು ದೆಹಲಿ ತಲುಪದೇ ಇರಲು ಪಂಜಾಬ್‌ ಜೊತೆಗಿನ ಗಡಿಯನ್ನು ಹರಿಯಾಣ ರಾಜ್ಯ ಸರ್ಕಾರ ಮುಚ್ಚಿದೆ. ದೆಹಲಿಗೆ ಆಗಮಿಸಬಹುದಾದ ಎಲ್ಲಾ 9 ಗಡಿಯ ಮುಖಾಂತರ ನಾವು ಪ್ರವೇಶಿಸಲಿದ್ದು, ತಡೆದರೆ ಅಲ್ಲಿಯೇ ಪ್ರತಿಭಟನೆ ನಡೆಸುವುದಾಗಿ ಕ್ರಾಂತಿಕಾರಿ ಕಿಸಾನ್‌ ಸಂಘದ ಅಧ್ಯಕ್ಷ ದರ್ಶನ್‌ ಪಾಲ್‌ ಸಿಂಗ್‌ ತಿಳಿಸಿದ್ದರು.

ಇದನ್ನೂ ಓದಿ: ಮುಂಬರುವ ಗ್ರಹಣಗಳಿಂದ‌ ಲೋಕಕ್ಕೆ ಕಂಟಕ, ಭಾರೀ ಭೂಕಂಪ, ವಿಪರೀತ ಮಳೆ; ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ದೆಹಲಿಯಲ್ಲಿ ಕೊರೋನಾ ವ್ಯಾಪಕವಾಗಿರುವುದರಿಂದ ಇದೇ ಕಾರಣ ಕೊಟ್ಟು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ರ್‍ಯಾಲಿ ನಡೆಸಲು ನೀಡಿದ್ದ ಅನುಮತಿಯನ್ನು ಈಗ ದೆಹಲಿ ಪೊಲೀಸರು ಹಿಂಪಡೆದಿದ್ದಾರೆ. 100ಕ್ಕಿಂತ ಹೆಚ್ಚು ಜನರು ಸೇರಿದಂತೆ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದಾರೆ.
ಆದರೆ, ಹೆಚ್ಚು ಸಂಖ್ಯೆಯ ರೈತರು ಆಗಮಿಸುತ್ತಿರುವುದರಿಂದ ಪ್ರತಿಭಟನೆಗೆ ದೆಹಲಿ ಪೊಲೀಸರು ಅವಕಾಶ ನೀಡುತ್ತಾರೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಾಗಿದೆ.
Published by: Sushma Chakre
First published: November 26, 2020, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories