ಕಾಲ್ ಟ್ಯಾಕ್ಸಿಯಲ್ಲಿ ಕಾಂಡೋಮ್ ಕಡ್ಡಾಯ, ಇಲ್ಲದಿದ್ದರೆ ಬೀಳುತ್ತೆ ಭಾರೀ ದಂಡ; ಮರ್ಮಾಘಾತ ನೀಡಿದ ದೆಹಲಿ ಪೊಲೀಸ್
ಹೊಸ ಮೋಟಾರು ಕಾಯ್ದೆ ಜಾರಿಗೆ ಬಂದ ನಂತರ ದುಬಾರಿ ಮೊತ್ತದ ದಂಡದ ಬಗ್ಗೆ ಅಲ್ಲಲ್ಲಿ ನಿರಂತರವಾಗಿ ವರದಿಯಾಗುತ್ತಲೇ ಇತ್ತು. ಆದರೆ, ಇದೀಗ ಕಾಂಡೋಮ್ ರಹಿತ ಟ್ಯಾಕ್ಸಿ ಚಾಲನೆಗೂ ಸಹ ಪೊಲೀಸರು ಭಾರೀ ಮೊತ್ತದ ದಂಡ ವಿಧಿಸುತ್ತಿರುವುದು ಕಾರು ಚಾಲಕರನ್ನು ಆಘಾತಕ್ಕೆ ದೂಡಿದರೆ, ಜನ ಸಾಮಾನ್ಯರನ್ನು ಆಶ್ವರ್ಯಕ್ಕೆ ಈಡುಮಾಡಿದೆ.

ಕಾಲ್ ಟ್ಯಾಕ್ಸಿ ಪ್ರಥಮ ಚಿಕಿತ್ಸೆ ಬಾಕ್ಸ್ನಲ್ಲಿ ಕಾಂಡೋಮ್.
- News18 Kannada
- Last Updated: September 22, 2019, 10:34 PM IST
ನೂತನ ಮೋಟಾರ್ ವಾಹನ ಕಾಯ್ದೆ-2019 ಕಳೆದ ಸೆಪ್ಟೆಂಬರ್ 1 ರಿಂದ ದೇಶದಾದ್ಯಂತ ಜಾರಿಯಾಗಿದೆ. ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಟ್ರಾಫಿಕ್ ಪೊಲೀಸರು ರಾಷ್ಟ್ರದಾದ್ಯಂತ ತೀವ್ರ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ, ಹೆಲ್ಮೆಟ್ ಸೇರಿದಂತೆ ಸೂಕ್ತ ದಾಖಲೆಗಳಿಲ್ಲದೆ ರಸ್ತೆಗಿಳಿಯುವ ವಾಹನಗಳಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ.
ಈ ಕುರಿತು ಕಳೆದ ಮೂರು ವಾರಗಳಿಂದ ಸತತ ವರದಿಯಾಗುತ್ತಲೇ ಇದೆ. ಆದರೆ, ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಲ್ ಟ್ಯಾಕ್ಸಿಗಳ ತಪಾಸಣೆ ನಡೆಸುತ್ತಿರುವ ಸಂಚಾರಿ ಪೊಲೀಸರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಲ್ಲದ ಕಾರಣಕ್ಕೆ ಕಾರು ಚಾಲಕರಿಗೆ ದಂಡ ವಿಧಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದೆ.
Delhi: Special Commissioner of Police (Traffic) Taj Hasan says, "There is nothing mentioned in The Motor Vehicles Act about condoms. We are not issuing any challan to drivers for not having condoms in their first aid kits." https://t.co/pn0fdmml6m
— ANI (@ANI) September 21, 2019
ಆದರೆ, ಕೆಲವರು ಕಾಂಡೋಮ್ ಕೇವಲ ಸುರಕ್ಷಿತ ಲೈಂಗಿಕ ಕ್ರಿಯೆ ಮಾತ್ರವಲ್ಲ, ಮಳೆಗಾಲದಲ್ಲಿ ಕಾರಿನಲ್ಲಿ ಎಲ್ಲಾದರೂ ಲೀಕೇಜ್ ಸಮಸ್ಯೆ ಕಂಡು ಬಂದರೆ ಅದನ್ನು ನಿಲ್ಲಿಸಲು ಅಥವಾ ಯಾರಿಗಾದರೂ ಅಪಘಾತವಾಗಿ ರಕ್ತ ಸೋರಿಕೆಯಾದರೆ ಅದನ್ನು ತಡೆಯಲು ಸಹ ಕಾಂಡೋಮ್ ಸಹಕಾರಿಯಾಗುತ್ತದೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
Cab drivers in Delhi say they've been carrying condoms, besides other medicines, in their first aid kits as they're penalised by police if found without condoms in their first aid kits. Say "We've never asked reason but we get challans if found without condoms in first aid kits." pic.twitter.com/IPTzHJQ8ip
— ANI (@ANI) September 21, 2019
ಒಟ್ಟಾರೆ ಹೊಸ ಮೋಟಾರು ಕಾಯ್ದೆ ಜಾರಿಗೆ ಬಂದ ನಂತರ ದುಬಾರಿ ಮೊತ್ತದ ದಂಡದ ಬಗ್ಗೆ ಅಲ್ಲಲ್ಲಿ ನಿರಂತರವಾಗಿ ವರದಿಯಾಗುತ್ತಲೇ ಇತ್ತು. ಆದರೆ, ಇದೀಗ ಕಾಂಡೋಮ್ ರಹಿತ ಟ್ಯಾಕ್ಸಿ ಚಾಲನೆಗೂ ಸಹ ಪೊಲೀಸರು ಭಾರೀ ಮೊತ್ತದ ದಂಡ ವಿಧಿಸುತ್ತಿರುವುದು ಕಾರು ಚಾಲಕರನ್ನು ಆಘಾತಕ್ಕೆ ದೂಡಿದರೆ, ಜನ ಸಾಮಾನ್ಯರನ್ನು ಆಶ್ವರ್ಯಕ್ಕೆ ಈಡುಮಾಡಿದೆ.
ಇದನ್ನೂ ಓದಿ : ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಿರ್ಮಾಣಕ್ಕೆ ಮಾಜಿ ಪ್ರಧಾನಿ ನೆಹರು ಕಾರಣ; ಮತ್ತೆ ಇತಿಹಾಸ ಕೆದಕಿ ಟೀಕಿಸಿದ ಅಮಿತ್ ಶಾ