Delhi Budget 2022: ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ: ದೆಹಲಿ ಸರ್ಕಾರದ ಗುರಿ

Rozgaar budget: ರೋಜ್‌ಗಾರ್ ಬಜೆಟ್ ಮೂಲಕ ನಾವು ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ. ದೆಹಲಿಯ ಆರ್ಥಿಕತೆಯನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು, ಲಕ್ಷಗಟ್ಟಲೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಿಸೋಡಿಯಾ ಹೇಳಿದರು. 

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

  • Share this:
ದೆಹಲಿ: ಪಂಜಾಬ್​​​ ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಆಪ್​ (AAP) ಪಕ್ಷ ಹೊಸ ಹುಮ್ಮಸ್ಸಿನಲ್ಲಿದ್ದು, ದೆಹಲಿಯಲ್ಲಿ ಬಜೆಟ್​ (Delhi Budget 2022) ಮೂಲಕ ಆಪ್​ ಸರ್ಕಾರ ಸದ್ದು ಮಾಡುತ್ತಿದೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Delhi Deputy Chief Minister Manish Sisodia) ಇಂದು ವಿಧಾನಸಭೆಯಲ್ಲಿ 2022-23ನೇ ಹಣಕಾಸು ವರ್ಷಕ್ಕೆ 75,800 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು.  'ರೋಜ್‌ಗಾರ್ ಬಜೆಟ್' ಮೂಲಕ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ದೆಹಲಿ ಸರ್ಕಾರ ಹೊಂದಿದೆ ಎಂದು ದೆಹಲಿ ಹಣಕಾಸು ಸಚಿವ ಸಿಸೋಡಿಯಾ ಇಂದು ಹೇಳಿದ್ದಾರೆ. ಮನೀಶ್ ಸಿಸೋಡಿಯಾ ಅವರು 8 ನೇ ವಾರ್ಷಿಕ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು.

ಇದನ್ನೂ ಓದಿ: ಚೀನಾ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಬೇಡ.. ಭಾರತೀಯ ವಿದ್ಯಾರ್ಥಿಗಳಿಗೆ UGC ಎಚ್ಚರಿಸಿದ್ದು ಏಕೆ?

ರೋಜ್‌ಗಾರ್ ಬಜೆಟ್

ಇಂದು ನಾವು ರೋಜ್‌ಗಾರ್ ಬಜೆಟ್ ಅನ್ನು ಪ್ರಸ್ತುತಪಡಿಸುತ್ತಿದ್ದೇವೆ. ಅದು ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ. ರೋಜ್‌ಗಾರ್ ಬಜೆಟ್ ಮೂಲಕ ನಾವು ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ. ದೆಹಲಿಯ ಆರ್ಥಿಕತೆಯನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು, ಲಕ್ಷಗಟ್ಟಲೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಿಸೋಡಿಯಾ ಹೇಳಿದರು.

ಆಪ್​​ ಸರ್ಕಾರದ ಸಾಧನೆ

ದೆಹಲಿಯಲ್ಲಿ ಕಳೆದ ಏಳು ವರ್ಷಗಳಲ್ಲಿ 1.78 ಲಕ್ಷಕ್ಕೂ ಹೆಚ್ಚು ಯುವಕರು ಉದ್ಯೋಗ ಪಡೆದಿದ್ದಾರೆ. ಈ 51,307 ಖಾಯಂ ಸರ್ಕಾರಿ ಉದ್ಯೋಗಗಳ ಜೊತೆಗೆ ದೆಹಲಿ ಸರ್ಕಾರದ ಅಡಿಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸುಮಾರು 2,500 ಖಾಯಂ ಉದ್ಯೋಗಗಳನ್ನು ನೀಡಲಾಗಿದೆ. ದೆಹಲಿ ಆಸ್ಪತ್ರೆಗಳಲ್ಲಿ ಸುಮಾರು 3,000 ಖಾಯಂ ಉದ್ಯೋಗಗಳನ್ನು ನೀಡಲಾಗಿದೆ ಎಂದು ಸಿಸೋಡಿಯಾ ಹೇಳಿದರು. ಕಳೆದ ಏಳು ವರ್ಷಗಳ  ಸರ್ಕಾರವು ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗವನ್ನು ಒದಗಿಸಿದೆ ಎಂದು ಸಿಸೋಡಿಯಾ ಹೇಳಿದರು. ಸುಮಾರು 25,000 ಶಿಕ್ಷಕರನ್ನು ತಾತ್ಕಾಲಿಕ ಆಧಾರದ ಮೇಲೆ ನಿಯೋಜಿಸಲಾಗಿದೆ. ಕೋವಿಡ್ ನಂತರ 10 ಲಕ್ಷ ಜನರು ಖಾಸಗಿ ವಲಯಗಳಲ್ಲಿ ಉದ್ಯೋಗಗಳನ್ನು ಪಡೆದರು ಎಂದು ಅವರು ಹೇಳಿದರು.

ಏರುಗತಿಯಲ್ಲಿ ದೆಹಲಿಯ ಆರ್ಥಿಕತೆ

ದೆಹಲಿ ರೋಜ್‌ಗಾರ್ ಪೋರ್ಟಲ್ ಮೂಲಕ, ಕೋವಿಡ್ ನಂತರದ ಅವಧಿಯಲ್ಲಿ ಖಾಸಗಿ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು.  ಕೋವಿಡ್-19 ರ ಐದು ಅಲೆಗಳ ನಡುವೆ ದೆಹಲಿಯ ಆರ್ಥಿಕತೆಯು ನಿಧಾನವಾಗಿ ಸವಾಲುಗಳಿಂದ ಹೊರಬರುತ್ತಿದೆ. ಈ ಕಾರಣದಿಂದಾಗಿ ಪ್ರಸ್ತುತ ಮಾರುಕಟ್ಟೆ ಬೆಲೆಗಳಲ್ಲಿ ದೆಹಲಿಯ ಒಟ್ಟು ರಾಜ್ಯ ದೇಶೀಯ ಉತ್ಪನ್ನ (ಜಿಎಸ್‌ಡಿಪಿ) 7,85,342 ರಿಂದ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17.65ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.

ಇದನ್ನೂ ಓದಿ: BJP ಗೆದ್ದರೆ ರಾಜಕೀಯವನ್ನೇ ತೊರೆಯುವೆ.. ದೆಹಲಿ ಸಿಎಂ ಕೇಜ್ರಿವಾಲ್ ಸವಾಲನ್ನು ಸ್ವೀಕರಿಸುತ್ತಾ ಕೇಸರಿ ಪಕ್ಷ?

ದೆಹಲಿಯ GSDP ಕೊಡುಗೆ

2021-22ರಲ್ಲಿ ದೆಹಲಿಯ GSDP ಬೆಳವಣಿಗೆ ದರವು ಶೇ 10.23 ಆಗಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ ಈ ಬೆಳವಣಿಗೆಯ ದರವು ಶೇ.8.9 ಎಂದು ಅಂದಾಜಿಸಲಾಗಿದೆ. ನಾವು ಮತ್ತೆ ಸಾಂಕ್ರಾಮಿಕ ಪೂರ್ವ ಆರ್ಥಿಕ ಚಟುವಟಿಕೆಗಳ ಮಟ್ಟವನ್ನು ತಲುಪುತ್ತಿದ್ದೇವೆ ಎಂದು ದೆಹಲಿ ಸರ್ಕಾರ ಹೇಳಿದೆ. ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು  ಜಿಡಿಪಿ ದೆಹಲಿಯ ನೈಜ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಕೊಡುಗೆಯು 2011-12ರಲ್ಲಿ ಶೇ 3.94, 2021-22ರಲ್ಲಿ ಶೇ 4.21 ಕ್ಕೆ ಏರಿಕೆಯಾಗಿದೆ ಎಂದು ಸಿಸೋಡಿಯಾ ಹೇಳಿದರು.

ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರವು ಚಿಲ್ಲರೆ ಕ್ಷೇತ್ರ, ಆಹಾರ ಮತ್ತು ಪಾನೀಯಗಳು, ಲಾಜಿಸ್ಟಿಕ್ ಮತ್ತು ಪೂರೈಕೆ ಸರಪಳಿ, ಪ್ರಯಾಣ ಮತ್ತು ಪ್ರವಾಸೋದ್ಯಮ, ಮನರಂಜನೆ, ನಿರ್ಮಾಣ, ರಿಯಲ್ ಎಸ್ಟೇಟ್ ಮತ್ತು ಹಸಿರು ಇಂಧನ ಕ್ಷೇತ್ರಗಳನ್ನು ಆದ್ಯತೆಯಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದರು. ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವು ಮಾರ್ಚ್ 23 ರಂದು ಪ್ರಾರಂಭವಾಗಿದ್ದು, ಮಾರ್ಚ್ 29 ರಂದು ಮುಕ್ತಾಯಗೊಳ್ಳಲಿದೆ.
Published by:Kavya V
First published: