ನವದೆಹಲಿ(ನ. 02): ಭಾರತೀಯ ಜನತಾ ಪಕ್ಷದ ದೆಹಲಿ ವಿಭಾಗದ ಜಾಲತಾಣವನ್ನು ಪಾಕಿಸ್ತಾನೀಯರು ಎರಡನೇ ಬಾರಿ ಹ್ಯಾಕ್ ಮಾಡಿದ್ದಾರೆ. ನರೇಂದ್ರ ಮೋದಿ ಅಧಿಕಾರ ಸ್ವೀಕಾರದ ವೇಳೆ ಪಾಕಿಸ್ತಾನೀ ಹ್ಯಾಕರ್ಗಳು ಬಿಜೆಪಿ ಜಾಲತಾಣವನ್ನು ಹ್ಯಾಕ್ ಮಾಡಿ ಬೀಫ್ ಸಂದೇಶ ರವಾನಿಸಿದ್ದರು. ಈಗ ಮತ್ತೊಮ್ಮೆ ಹ್ಯಾಕ್ ಮಾಡಿದ್ಧಾರೆ. ಹ್ಯಾಕ್ ಆದ ಬೆನ್ನಲ್ಲೇ ದೆಹಲಿ ವಿಭಾಗದ ತನ್ನ ವೆಬ್ಸೈಟನ್ನು ಬಿಜೆಪಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಬಿಜೆಪಿ ಜಾಲತಾಣ ಹ್ಯಾಕ್ ಆಗಿರುವ ವಿಚಾರವನ್ನು ಭದ್ರತಾ ಸಂಶೋಧಕ ಎಲಿಯಟ್ ಆಲ್ಡರ್ಸನ್ ಅವರು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. Delhi.bjp.org ಜಾಲತಾಣಕ್ಕೆ Kashmir.html ಪುಟವನ್ನು ಹ್ಯಾಕರ್ಸ್ ಸೇರಿಸುವಲ್ಲಿ ಯಶಸ್ವಿಯಾಗಿದೆ. ಹ್ಯಾಕ್ ಆದ ಜಾಲತಾಣದ ವಿಳಾಸಕ್ಕೆ ಹೋದರೆ ನರೇಂದ್ರ ಮೋದಿ ಮತ್ತು ಭಾರತದ ವಿರುದ್ಧ ಕೆಲವು ಘೋಷಣೆಗಳನ್ನ ಹಾಕಿದ್ದು ಕಂಡು ಬಂದಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ತುರ್ತು ಪರಿಸ್ಥಿತಿಯ ಗಡಿಯನ್ನೂ ದಾಟಿದ ಜೀವ ವಾಯುವಿನ ಗುಣಮಟ್ಟ; ಉಸಿರಾಟ ಇನ್ನು ಕಷ್ಟ ಕಷ್ಟ..!
“ಘರ್ ಮೇ ಘುಸ್ ಕರ್ ಮಾರಾ ಗಯಾ” (ಮನೆಯೊಳಗೆ ನುಸುಳಿ ಹೊಡೆಸಿಕೊಂಡ); “I can lie a lot, can I also get a Vir Chakra like Abhinandan?” (ಬೇಕಷ್ಟು ಸುಳ್ಳು ಹೇಳಿ ಅಭಿನಂದನ್ ರೀತಿ ನಾನೂ ವೀರ್ ಚಕ್ರ ಪಡೆಯಬಹುದಾ?) ಎಂದು ಹೀಯಾಳಿಸುವ ಸಂದೇಶಗಳನ್ನು ಪೋಸ್ಟ್ ಮಾಡಲಾಗಿತ್ತು. ಹಾಗೆಯೇ ಮೋದಿ ಅವರನ್ನ ಅವಹೇಳನ ಮಾಡುವ ಸಂದೇಶಗಳೂ ಇದ್ದವು. ಜೊತೆಗೆ, catch.if.you.can@hotmail.com ಎಂಬ ಇಮೇಲ್ ಐಡಿಯನ್ನೂ ಬಹಿರಂಗಪಡಿಸಿ ಸವಾಲು ಹಾಕಲಾಗಿತ್ತು.
🧨 Alert 🧨: The website of the @BJP4India, the Indian political party of @narendramodi, has been hacked… again… https://t.co/JQ8EBHFnbr pic.twitter.com/MBEqQbnTow
— Elliot Alderson (@fs0c131y) November 1, 2019
Decoded version of the Kashmir.html page pic.twitter.com/ki7dWAAsdl
— Elliot Alderson (@fs0c131y) November 1, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ