ಅತ್ಯಂತ ಕಳಪೆಯಾದ ದೆಹಲಿ ವಾಯು ಗುಣಮಟ್ಟ; ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಡೀಸೆಲ್​ ಜನರೇಟರ್​ ಬಳಕೆ ನಿಷೇಧ

ಈ ನಡುವೆ ನಗರದ ವಾಯು ಗುಣಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಡಿಪಿಸಿಸಿ ಗುರುವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಜನರೇಟರ್ ಬಳಕೆಯನ್ನು ಗ್ರೇಡೆಡ್ ರೆಸ್ಪಾನ್ಸ್ ಕ್ರಿಯಾ ಯೋಜನೆ (ಜಿಆರ್‌ಪಿ) ಅಡಿಯಲ್ಲಿ ನಿಷೇಧಿಸಿ ನಿರ್ದೇಶನಗಳನ್ನು ನೀಡಿದೆ.

ವಾಯು ಮಾಲಿನ್ಯ.

ವಾಯು ಮಾಲಿನ್ಯ.

 • Share this:
  ನವ ದೆಹಲಿ (ಅಕ್ಟೋಬರ್​ 15); ವಿಪರೀತ ವಾಯು ಮಾಲಿನ್ಯದಿಂದಾಗಿ ಕುಖ್ಯಾತಿ ಗಳಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಮತ್ತೆ ಅತ್ಯಂತ ಕಳಪೆ ವಾಯು ಮಾಲಿನ್ಯವನ್ನು ದಾಖಲಿಸಿದೆ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟದ ಕುರಿತು ಸರ್ಕಾರ ಇಂದು ಸೂಚ್ಯಾಂಕ (ಎಕ್ಯೂಐ) ಬಿಡುಗಡೆ ಮಾಡಿದ್ದು, ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆ ಹಂತಕ್ಕೆ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಅಂಕಿಅಂಶಗಳ ಪ್ರಕಾರ, ಗುರುವಾರ ಬೆಳಿಗ್ಗೆ ಎಕ್ಯೂಐ ಐಟಿಒನಲ್ಲಿ 366, ಆರ್​ಕೆ ಪುರಂನಲ್ಲಿ 309, ಆನಂದ್ ವಿಹಾರದಲ್ಲಿ 313 ಮತ್ತು ವಾಜೀರ್ಪುರದಲ್ಲಿ 339 ಎಂದು ದಾಖಲಾಗಿದೆ. ಆದರೆ, "ದೆಹಲಿಯ ವಾಯು ಗುಣಮಟ್ಟ ಕುಸಿಯಲು ನೆರೆ ರಾಜ್ಯಗಳಲ್ಲಿ ಕೃಷಿ ಭೂಮಿಯಲ್ಲಿ ಒಣ ಹುಲ್ಲುಗಳನ್ನು ಸುಡುತ್ತಿರುವುದೇ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಈ ಕುರಿತು ಸರ್ಕಾರ ಏನಾದರೂ ಮಾಡಬೇಕು. ಇಲ್ಲದಿದ್ದರೆ ಇಂತಹ ಪರಿಣಾಮಗಳು ದೆಹಲಿಯ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ" ಎಂದು ಎಎನ್‌ಐ ಸೈಕ್ಲಿಸ್ಟ್ ಸೂಚಿಸಿದೆ.

  ಈ ನಡುವೆ ನಗರದ ವಾಯು ಗುಣಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಡಿಪಿಸಿಸಿ ಗುರುವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಜನರೇಟರ್ ಬಳಕೆಯನ್ನು ಗ್ರೇಡೆಡ್ ರೆಸ್ಪಾನ್ಸ್ ಕ್ರಿಯಾ ಯೋಜನೆ (ಜಿಆರ್‌ಪಿ) ಅಡಿಯಲ್ಲಿ ನಿಷೇಧಿಸಿ ನಿರ್ದೇಶನಗಳನ್ನು ನೀಡಿದೆ.

  ಇದಕ್ಕೂ ಮುನ್ನ ದೆಹಲಿಯ ವಾಯು ಗುಣಮಟ್ಟವನ್ನು 'ಕಳಪೆ' ವಿಭಾಗದಲ್ಲಿ ದಾಖಲಿಸಲಾಗಿದ್ದು, ನಗರವು ಬುಧವಾರ 276 ರ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕವನ್ನು (ಎಕ್ಯೂಐ) ದಾಖಲಿಸಿದೆ. 0 ಮತ್ತು 50 ರ ನಡುವಿನ ಎಕ್ಯೂಐ ಅನ್ನು 'ಉತ್ತಮ', 51 ಮತ್ತು 100 'ತೃಪ್ತಿದಾಯಕ', 101 ಮತ್ತು 200 'ಮಧ್ಯಮ', 201 ಮತ್ತು 300 'ಕನಿಷ್ಟ', 301 ಮತ್ತು 400 'ತುಂಬಾ ಕನಿಷ್ಟ', ಮತ್ತು 401 ಮತ್ತು 500 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

  ಮುಂಬರುವ ಚಳಿಗಾಲದ ಅವಧಿಯನ್ನು ಪರಿಗಣಿಸಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಗುರುವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿ 50 ತಂಡಗಳನ್ನು ಪರಿಶೀಲನೆಗಾಗಿ ನಿಯೋಜಿಸುವುದಾಗಿ ತಿಳಿಸಿದೆ. ಮಂಡಳಿಯು ನೀಡಿದ ವಿವಿಧ ನಿರ್ದೇಶನಗಳಿಗೆ ಅನುಸಾರವಾಗಿರುವುದನ್ನು ಪರಿಶೀಲಿಸಲು ಸಿಪಿಸಿಪಿ ತನ್ನ ತಂಡಗಳನ್ನು ಮೈದಾನದಲ್ಲಿ ನಿಯೋಜಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ.

  ದೆಹಲಿಯಲ್ಲಿ ಕುಸಿಯುತ್ತಿರುವ ಗಾಳಿಯ ಗುಣಮಟ್ಟವನ್ನು ಚರ್ಚಿಸಲು ವಿವಿಧ ಪಾಲುದಾರರೊಂದಿಗೆ ನಡೆದ ಸಭೆಯಲ್ಲಿ, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಕೃಷಿ ಭೂಮಿಯಲ್ಲಿ ಒಣ ಹುಲ್ಲುಗಳನ್ನು ಸುಡುತ್ತಿರುವುದೇ ವಾಯು ಮಾಲಿನ್ಯಕ್ಕೆ ಕಾರಣ. ಹೀಗಾಗಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಭತ್ತದ ಒಣಹುಲ್ಲಿನ ಸಮಸ್ಯೆಯನ್ನು ಎದುರಿಸಲು ರೈತರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

  ಇದನ್ನೂ ಓದಿ : ತೀವ್ರ ಹಿನ್ನಡೆ ಕಂಡ ದೇಶದ ಅರ್ಥಿಕತೆ; ತಲಾ ಆದಾಯದಲ್ಲಿ ಭಾರತವನ್ನು ಹಿಂದಿಕ್ಕಲಿರುವ ಬಾಂಗ್ಲಾದೇಶ

  ಈ ಸಭೆಯಲ್ಲಿ, ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಭತ್ತದ ಒಣಹುಲ್ಲಿನ ತ್ಯಾಜ್ಯವನ್ನು ನಿರ್ವಹಿಸಲು ನವೀನ ತಂತ್ರಜ್ಞಾನಕ್ಕೆ ಒತ್ತು ನೀಡಬೇಉ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪರಿಸರ ಸಚಿವ ಗೋಪಾಲ್ ರಾಯ್ ನೇತೃತ್ವದಲ್ಲಿ ದೆಹಲಿ ಸರ್ಕಾರವು 'ಯುಧ್ ಪ್ರದೂನ್ ಕೆ ವಿರುದ್ಧ್' ಎಂಬ ಹೆಸರಿನ ಬೃಹತ್ ವಾಯುಮಾಲಿನ್ಯ ವಿರೋಧಿ ಅಭಿಯಾನವನ್ನು ಈಗಾಗಲೇ ಪ್ರಾರಂಭಿಸಿದೆ.
  Published by:MAshok Kumar
  First published: