HOME » NEWS » National-international » DELHI BABA KA DHABA OWNER KANTA PRASAD ATTEMPTED SUICIDE SESR

Baba ka Dhaba : ವಿವಾದ ಅಂತ್ಯಗೊಳ್ಳುತ್ತಲೆ ಆತ್ಮಹತ್ಯೆಗೆ ಯತ್ನಿಸಿದ ಬಾಬಾ ಕಾ ಡಾಬಾ ಮಾಲೀಕ

ಬಾಬಾ ಕಾ ಡಾಬಾದ ಮಾಲೀಕ 81 ವರ್ಷದ ಕಾಂತ ಪ್ರಸಾದ್​, ಮದ್ಯದೊಳಗೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

news18-kannada
Updated:June 18, 2021, 5:21 PM IST
Baba ka Dhaba : ವಿವಾದ ಅಂತ್ಯಗೊಳ್ಳುತ್ತಲೆ ಆತ್ಮಹತ್ಯೆಗೆ ಯತ್ನಿಸಿದ ಬಾಬಾ ಕಾ ಡಾಬಾ ಮಾಲೀಕ
ಬಾಬಾ ಕಾ ಡಾಬಾದ ಮಾಲೀಕ 81 ವರ್ಷದ ಕಾಂತ ಪ್ರಸಾದ್​, ಮದ್ಯದೊಳಗೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
  • Share this:
ದಿನಬೆಳಗಾಗುವುದರಲ್ಲಿ ಯೂಟ್ಯೂಬ್​ ಮೂಲಕ ಹೆಸರು ಗಳಿಸಿದ 'ಬಾಬಾ ಕಾ ಡಾಬಾ' ಮಾಲೀಕ ಕಾಂತ ಪ್ರಸಾದ್​ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಗಂಭೀರಗೊಂಡಿರುವ ಅವರನ್ನು ದೆಹಲಿಯ ಸಫ್ದರ್​ಜಂಗ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರವಾರ 11.15ಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರ ರಕ್ಷಣೆಗೆ ಮುಂದಾಗಿದ್ದಾರೆ. 'ಬಾಬಾ ಕಾ ಡಾಬಾ'ದ ಮಾಲೀಕ 81 ವರ್ಷದ ಕಾಂತ ಪ್ರಸಾದ್​, ಮದ್ಯದೊಳಗೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಹಿನ್ನಲೆ ಅವರು ಪ್ರಜ್ಞೆ ತಪ್ಪುತ್ತಿದ್ದಂತೆ ಗಾಬರಿಗೊಂಡು ಮನೆಯವರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ.

ಇದನ್ನು ಓದಿ: ದೇಶಾದ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಮುಂಗಾರು: ಕಾರಣವೇನು?

ಕಾಂತಾ ಪ್ರಸಾದ್​ ಅಸ್ವಸ್ಥಗೊಂಡ ತಕ್ಷಣಕ್ಕೆ ಅವರ ಮಗ ಕರಣ್​ ಸಿಂಗ್​ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಜಾರಿಗೊಳಿಸಲಾದ ಲಾಕ್ ಡೌನ್ ಸಮಯದಲ್ಲಿ ಲಕ್ಷಾಂತರ ಜನರು ತಮ್ಮ ಉದ್ಯೋಗ ಅವಕಾಶಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ದಕ್ಷಿಣ ದೆಹಲಿಯ ಮಾಲವೀಯ ನಗರದ ರಸ್ತೆ ಪಕ್ಕದಲ್ಲಿ ಕಾಂತಾ ಪ್ರಸಾದ್ ಎಂಬ 81 ವರ್ಷದ ಒಬ್ಬ ವ್ಯಕ್ತಿ ಒಂದು ಚಿಕ್ಕ ಗೂಡಂಗಡಿಯನ್ನು ನಡೆಸುತ್ತಿದ್ದರು.

ಇದನ್ನು ಓದಿ: ಮೇಕೆದಾಟು ವಿವಾದ ಗೆಲ್ಲುವ ವಿಶ್ವಾಸವಿದೆ ಎಂದ ಗೃಹ ಸಚಿವ ಬೊಮ್ಮಾಯಿ

ಲಾಕ್‌ಡೌನ್‌ನಿಂದಾಗಿ ಈ ಗೂಡಂಗಡಿಯನ್ನು ಮುಚ್ಚುವ ಕಠಿಣ ಪ್ರಸಂಗ ಬಂದೊದಗಿದ ಕಾರಣ ಕಾಂತಾ ಪ್ರಸಾದ್ ದಂಪತಿಗೆ ಎರಡು ಹೊತ್ತಿನ ಊಟ ಕೂಡ ಒಂದು ಗಂಭೀರ ಸಮಸ್ಯೆಯಾಗಿ ಕಾಡುತಿತ್ತು. ಅವರ ಗೋಳನ್ನು ಕಂಡ ಗೌರವ ಪ್ರಸಾದ್ ಇದರ ಬಗ್ಗೆ ಒಂದು ವಿಡಿಯೋ ಮಾಡಿದರು. ಕೊರೊನಾದಿಂದ ಬೀದಿ ಪಕ್ಕದ ತಮ್ಮ ಡಾಬಾ ಮುಚ್ಚಿಹೋದ ನಂತರ ತಾವು ಅನುಭವಿಸಿದ ನಷ್ಟ ಹಾಗೂ ತಮ್ಮ ಅಳಲನ್ನು ಈ ವಿಡಿಯೋದಲ್ಲಿ ಕಾಂತಾ ಪ್ರಸಾದ್ ತೋಡಿಕೊಂಡಿದ್ದರು. ಈ ವಿಡಿಯೋದಲ್ಲಿ ಕಾಂತಾ ಪ್ರಸಾದ್‌ ದಂಪತಿ ಜನರ ಸಹಾಯ ಕೋರಿದ್ದರು.

ಯೂಟ್ಯೂಬರ್ ಹಾಗೂ ಫುಡ್ ಬ್ಲಾಗರ್ ಆದ ಗೌರವ್ ವಾಸನ್‌ ಅವರು ಕಾಂತಾ ಪ್ರಸಾದರ ಕಣ್ಣೀರ ಕಥೆಯನ್ನು ಯೂಟ್ಯೂಬ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಜನರು ಸಾಮಾಜಿಕ ಕಳಕಳಿಯಿಂದ ಇದಕ್ಕೆ ಸ್ಪಂದಿಸಿದರು. ದೆಹಲಿಯ ಎಷ್ಟೋ ಜನರು ಕಾಂತಾ ಪ್ರಸಾದ್ ಅವರ ‘ಬಾಬಾ ಕಾ ಡಾಬಾ’ ಈ ಗೂಡಂಗಡಿಯಿಂದ ಊಟವನ್ನು ಖರೀದಿಸುವ ಮೂಲಕ ಅವರ ನೆರವಿಗೆ ಆಗಮಿಸಿದ್ದರು.​ಇದಾದ ಬಳಿಕ ಕೆಲ ದಿನಗಳ ಹಿಂದೆ ಮಾತನಾಡಿದ್ದ ಕಾಂತಾ ಪ್ರಸಾದ್​, ತಮಗೆ ಯಶಸ್ಸು ಕೊಟ್ಟ ಯೂಟ್ಯೂಬರ್ ಹಾಗೂ ಫುಡ್ ಬ್ಲಾಗರ್ ಆದ ಗೌರವ್‌ ವಾಸನ್​ , ಜನರು ತಮಗೆ ದಾನ ಮಾಡಿದ ಹಣವನ್ನು ‌ಕೊಳ್ಳೆ ಹೊಡೆದಿದ್ದರು ಎಂದು ಆಪಾದಿಸಿದ್ದರು. ಕಳೆದೆರಡು ದಿನಗಳ ಹಿಂದೆ ಸ್ಪಷ್ಟನೆ ನೀಡಿದ್ದ ಗೌರವ್​​ ವಾಸನ್​ ಅದಕ್ಕೆ ಸಂಬಂಧಿಸಿದ ದಾಖಲೆ ತೋರಿಸಿ ಇದಕ್ಕೆ ಸ್ಪಷ್ಟನೆ ನೀಡಿದ್ದರು. ಕಡೆಗೆ ಕಾಂತಾ ಪ್ರಸಾದ್​ ಈ ವಿವಾದಕ್ಕೆ ತೆರೆ ಎಳೆದಿದ್ದರು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 18, 2021, 5:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories