HOME » NEWS » National-international » DELHI ASSEMBLY PASSES RESOLUTION AGAINST NPR AND NRC RH

ಎನ್​ಆರ್​ಸಿ, ಎನ್​ಪಿಆರ್ ವಿರುದ್ಧ ನಿರ್ಣಯ ಅಂಗೀಕರಿಸಿದ ದೆಹಲಿ ವಿಧಾನಸಭೆ; 70 ಶಾಸಕರಲ್ಲಿ ಕೇವಲ 9 ಜನರ ಬಳಿ ಜನನ ಪ್ರಮಾಣಪತ್ರ

ನಾಗರಿಕತ್ವ ಸಾಬೀತು ಮಾಡಲು ನನ್ನ ಬಳಿಯಾಗಲಿ, ನನ್ನ ಹೆಂಡತಿ ಬಳಿಯಾಗಲಿ ಮತ್ತು ಇಡೀ ನನ್ನ ಸಂಪುಟದಲ್ಲಿನ ಒಬ್ಬರೇ ಒಬ್ಬರ ಬಳಿ ಜನನ ಪ್ರಮಾಣಪತ್ರ ಇಲ್ಲ. ಹಾಗಾದರೆ ನಮ್ಮನ್ನು ನಿರಾಶ್ರಿತ ಶಿಬಿರಗಳಿಗೆ ಕಳಿಸುತ್ತಿರಾ? ಎಂದು ಸಿಎಂ ಕೇಜ್ರಿವಾಲ್ ಪ್ರಶ್ನಿಸಿದರು.

news18-kannada
Updated:March 13, 2020, 7:06 PM IST
ಎನ್​ಆರ್​ಸಿ, ಎನ್​ಪಿಆರ್ ವಿರುದ್ಧ ನಿರ್ಣಯ ಅಂಗೀಕರಿಸಿದ ದೆಹಲಿ ವಿಧಾನಸಭೆ; 70 ಶಾಸಕರಲ್ಲಿ ಕೇವಲ 9 ಜನರ ಬಳಿ ಜನನ ಪ್ರಮಾಣಪತ್ರ
ಸಿಎಂ ಅರವಿಂದ್ ಕೇಜ್ರಿವಾಲ್.
  • Share this:
ನವದೆಹಲಿ: ದೆಹಲಿ ವಿಧಾನಸಭೆ ಶುಕ್ರವಾರ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್​ಆರ್​ಸಿ) ವಿರುದ್ಧ  ನಿರ್ಣಯ ಅಂಗೀಕರಿಸಿದೆ.

ಎನ್​ಆರ್​ಸಿ ಮತ್ತು ಎನ್​ಪಿಆರ್​ ಕಾಯ್ದೆಗಳ ಮೇಲಿನ ಚರ್ಚೆಗಾಗಿ ಒಂದು ದಿನದ ವಿಶೇಷ ಅಧಿವೇಶನ ನಡೆಸಲಾಗಿತ್ತು. ಈ ವೇಳೆ ಈ ಎರಡು ಕಾಯ್ದೆಗಳನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ನಾಗರಿಕತ್ವ ಸಾಬೀತು ಮಾಡಲು ನನ್ನ ಬಳಿಯಾಗಲಿ, ನನ್ನ ಹೆಂಡತಿ ಬಳಿಯಾಗಲಿ ಮತ್ತು ಇಡೀ ನನ್ನ ಸಂಪುಟದಲ್ಲಿನ ಒಬ್ಬರೇ ಒಬ್ಬರ ಬಳಿ ಜನನ ಪ್ರಮಾಣಪತ್ರ ಇಲ್ಲ. ಹಾಗಾದರೆ ನಮ್ಮನ್ನು ನಿರಾಶ್ರಿತ ಶಿಬಿರಗಳಿಗೆ ಕಳಿಸುತ್ತಿರಾ? ಎಂದು ಸಿಎಂ ಕೇಜ್ರಿವಾಲ್ ಪ್ರಶ್ನಿಸಿದರು.

ಸರ್ಕಾರದಿಂದ ನೀಡಿದ ಜನನ ಪ್ರಮಾಣಪತ್ರವನ್ನು ತೋರಿಸುವಂತೆ ಸಿಎಂ ಕೇಜ್ರಿವಾಲ್ ಕೇಂದ್ರದ ಎಲ್ಲ ಸಚಿವರಿಗೆ ಸವಾಲು ಹಾಕಿದರು.

ಇದನ್ನು ಓದಿ: ಮಧ್ಯಪ್ರದೇಶ ರಾಜಕೀಯ ಮೇಲಾಟ; ಇಂದು ಸಂಜೆ ಬೆಂಗಳೂರು ರೆಸಾರ್ಟ್​ನಿಂದ 19 ರೆಬೆಲ್ ಶಾಸಕರು ಭೋಪಾಲ್​ಗೆ ಸ್ಥಳಾಂತರ

ಇಲ್ಲಿ ಇರುವ ಯಾರ ಬಳಿ ಜನನ ಪ್ರಮಾಣಪತ್ರ ಇದೆ. ಅವರು ಕೈ ಎತ್ತಿ ಎಂದು ಕೇಜ್ರಿವಾಲ್​ ಕೇಳಿದರು. ಆಗ 70 ಶಾಸಕರಲ್ಲಿ ಕೇವಲ 9 ಮಂದಿ ಶಾಸಕರು ಮಾತ್ರ ಕೈ ಮೇಲೆ ಎತ್ತಿದರು. ಆಗ ಇಲ್ಲಿ 61 ಶಾಸಕರ ಬಳಿ ಜನನ ಪ್ರಮಾಣಪತ್ರ ಇಲ್ಲ. ಹಾಗಾದರೆ ಅವರನ್ನೆಲ್ಲಾ ನಿರಾಶ್ರಿತರ ಶಿಬಿರಕ್ಕೆ ಕಳಿಸುತ್ತಿರಾ? ಎಂದು ಪ್ರಶ್ನೆ ಮಾಡಿದರು.
First published: March 13, 2020, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories