LIVE NOW

Delhi Assembly Election Results 2020 LIVE: ಮತ್ತೊಮ್ಮೆ ದೆಹಲಿ ಗದ್ದುಗೆಗೆ ಆಮ್ ಆದ್ಮಿ; ಇದು ದೆಹಲಿ ಜನರ ದಿಗ್ವಿಜಯ ಎಂದ ಕೇಜ್ರಿವಾಲ್

Delhi Assembly Election Results 2020 Live Updates: ದೆಹಲಿ ಚುನಾವಣೆ ಫಲಿತಾಂಶ - 70 ಕ್ಷೇತ್ರಗಳ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು 36 ಸ್ಥಾನಗಳ ಅಗತ್ಯವಿದೆ. ಕಣದಲ್ಲಿರುವ ವಿವಿಧ ಪಕ್ಷಗಳ ಪೈಕಿ ಆಮ್ ಆದ್ಮಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರಮುಖವಾಗಿವೆ.

Kannada.news18.com | February 11, 2020, 5:51 PM IST
facebook Twitter Linkedin
Last Updated February 11, 2020
auto-refresh
Delhi Assembly Election Results 2020 LIVE: ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಫೆ. 8ರಂದು ನಡೆದ ಚುನಾವಣೆಯ ಫಲಿತಾಂಶ ಇವತ್ತು ಪ್ರಕಟವಾಗುತ್ತಿದೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ. 62.59 ಮತದಾನವಾಗಿತ್ತು. ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಪ್ರಬಲ ಸವಾಲು ಮುಂದೊಡ್ಡಿದೆ. ಆಪ್​ಗಿಂತ ಮುನ್ನ 15 ವರ್ಷ ದೆಹಲಿಯ ಗದ್ದುಗೆ ಮೇಲಿದ್ದ ಕಾಂಗ್ರೆಸ್ ಪಕ್ಷ ಕೂಡ ಆಟದಲ್ಲಿದೆ. ಶುಕ್ರವಾರ ಸಂಜೆಯೇ ಬಿಡುಗಡೆಗೊಂಡ ವಿವಿಧ ಮತಗಟ್ಟೆ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷಕ್ಕೆ ಭರ್ಜರಿ ಗೆಲುವು ಸಿಗುತ್ತದೆಂದು ಅಂದಾಜಿಸಿವೆ. ಬಹುತೇಕ ಎಲ್ಲ ಸಮೀಕ್ಷೆಗಳೂ ಆಪ್ ಪಕ್ಷಕ್ಕೆ 45ಕ್ಕಿಂತ ಹೆಚ್ಚು ಸ್ಥಾನಗಳು ಸಿಗಬಹುದೆಂದು ನಿರೀಕ್ಷಿಸಿವೆ. ಇವತ್ತು ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗುತ್ತಿದ್ದು ಮಧ್ಯಾಹ್ನದ ವೇಳೆ ಬಹುತೇಕ ಫಲಿತಾಂಶಗಳು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿ ನ್ಯೂಸ್​18 ಕನ್ನಡ ಲೈವ್​ ಬ್ಲಾಗ್​ನಲ್ಲಿ. Read More
Load More