HOME » NEWS » National-international » DELHI AIR CONTINUES TO BE POLLUTED DBDEL SNVS

ದೆಹಲಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ಪಟಾಕಿ ನಿಷೇಧಿಸಿದ್ದರೂ ಕೆಟ್ಟ ಗಾಳಿಗೆ ಏನು ಕಾರಣ?

ನೆರೆಯ ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಬಂಪರ್ ಬೆಳೆ ಬಂದು ರೈತರು ತಮ್ಮ ಬೆಳೆ ತ್ಯಾಜ್ಯವನ್ನು ಸುಟ್ಟಿರುವ ಪರಿಣಾಮ ದೆಹಲಿಯಲ್ಲಿ ಗಾಳಿ ಕಲುಷಿತಗೊಂಡಿದೆ. ಇಲ್ಲಿ ಪಟಾಕಿ ನಿಷೇಧಿಸಿದ್ದರೂ ವಾಯು ಮಾಲಿನ್ಯ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.

news18-kannada
Updated:December 2, 2020, 9:26 AM IST
ದೆಹಲಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ಪಟಾಕಿ ನಿಷೇಧಿಸಿದ್ದರೂ ಕೆಟ್ಟ ಗಾಳಿಗೆ ಏನು ಕಾರಣ?
ದೆಹಲಿ ವಾಯುಮಾಲಿನ್ಯ (ಸಾಂದರ್ಭಿಕ ಚಿತ್ರ)
  • Share this:
ನವದೆಹಲಿ(ಡಿ. 2): ಸಾಮಾನ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಬಹಳ ಜಾಸ್ತಿಯಾಗುತ್ತದೆ. ಹಾಗೆ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಆದರೆ ಈ ಬಾರಿ ದೀಪಾವಳಿ ಕಳೆದ 15 ದಿನವಾದರೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ಅಪಾಯಕಾರಿ ಹಂತ ತಲುಪಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಮಾಹಿತಿ ಪ್ರಕಾರ ಸರಾಸರಿ 24 ಗಂಟೆಗಳ ವಾಯು ಗುಣಮಟ್ಟದ ಸೂಚ್ಯಂಕ ಬುಧವಾರ ಬೆಳಿಗ್ಗೆ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಈ ರೀತಿ ಇದೆ:

ದೆಹಲಿ ವಿಶ್ವ ವಿದ್ಯಾಲಯ ಪ್ರದೇಶದಲ್ಲಿ 377, ನೋಯ್ಡಾ ಸುತ್ತ ಮುತ್ತ 417, ಪೂಸಾ ಪ್ರದೇಶದ ವ್ಯಾಪ್ತಿಯಲ್ಲಿ 366, ದೆಹಲಿ ಐಐಟಿ ಪ್ರದೇಶಗಳಲ್ಲಿ 336 ಅಂಕಗಳಷ್ಟು ವಾಯುಮಾಲಿನ್ಯ ಇದೆ. ಗಾಳಿಯ ಗುಣಮಟ್ಟವು 301-400 ಅಂಕದ ನಡುವೆ ಇದ್ದರೆ ಅದನ್ನು 'ಅತ್ಯಂತ ಕಳಪೆ' ಎಂದು ವ್ಯಾಖ್ಯಾನಿಸಲಾಗುತ್ತದೆ. ಜೊತೆಗೆ ಅದನ್ನು 'ಉಸಿರಾಡಲು ಅನರ್ಹ' ಎಂದೂ ಹೇಳಲಾಗುತ್ತದೆ. ಹಾಗಾಗಿಯೇ ಬುಧವಾರ ದೆಹಲಿಯಲ್ಲಿ ಸರಾಸರಿ ಏರ್ ಕ್ವಾಲಿಟಿ ಇಂಡೆಕ್ಸ್ 356 ಆಗಿರುವುದರಿಂದ ಜನ ಆತಂಕಕ್ಕೀಡಾಗಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ದೆಹಲಿಯ ಸುತ್ತ ಇರುವ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡಲಾಗುತ್ತದೆ. ಅದರ ಹೊಗೆ ದೆಹಲಿಯತ್ತ ಬರುತ್ತದೆ.‌ ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಪರೀತ ಪಟಾಕಿ ಸಿಡಿಸಲಾಗುತ್ತದೆ. ಜೊತೆಗೆ ಈ ಸಂದರ್ಭದಲ್ಲಿ ಗಾಳಿಯ ವೇಗ ಕೂಡ ಕಡಿಮೆ ಆಗಲಿದೆ. ಈ ಎಲ್ಲಾ ಕಾರಣಗಳಿಂದ ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದು ಸಾಮಾನ್ಯ.

ಇದನ್ನೂ ಓದಿ: Petrol Price: ಒಂದು ವಾರದಲ್ಲಿ‌ 4ನೇ ಬಾರಿ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ; ಇಂದಿನ ದರವೆಷ್ಟು?

ಆದರೆ ಈ ಬಾರಿ ದೆಹಲಿಯಲ್ಲಿ ಬೆಳೆ ತ್ಯಾಜ್ಯ ಸುಡುವುದನ್ನು ನಿಲ್ಲಿಸಲಾಗಿದೆ. ಅದಕ್ಕೆ ಬದಲಾಗಿ ತಾಜ್ಯದ ಮೇಲೆ ಕೆಮಿಕಲ್ ಸಿಂಪಡಿಸಲಾಗಿದೆ. ಇದಲ್ಲದೆ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಇಷ್ಟೆಲ್ಲವನ್ನೂ ಮಾಡಿದ್ದರೂ ಮತ್ತು ದೀಪಾವಳಿ ಆಗಿ ವಾರ ಕಳೆದಿದ್ದರೂ ವಾಯುಮಾಲಿನ್ಯ ನಿಯಂತ್ರಣ ಆಗಿಲ್ಲದಿರುವುದರಿಂದ ಆತಂಕವನ್ನು ಸೃಷ್ಟಿಸಿದೆ.

ಕೇಂದ್ರ ಸರ್ಕಾರದ ಹೊಸ ಕಾನೂನಿನ ಪ್ರಕಾರ ಗಾಳಿಯನ್ನು ಮಲಿನಗೊಳಿಸುವ ಯಾವುದೇ ಚಟುವಟಿಕೆಗಳನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಕಾನೂನನ್ನು ಉಲ್ಲಂಘಿಸಿದವರಿಗೆ ದಂಡ ಹಾಗೂ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆದರೆ ಇವೆಲ್ಲವೂ ಕಾಗದದ ಮೇಲಿವೆಯೇ ಹೊರತು ವಾಸ್ತವವಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುದು ದೆಹಲಿಯ ವಾಯು ಮಾಲಿನ್ಯದಿಂದ ಸ್ಪಷ್ಟವಾಗುತ್ತದೆ.

ವರದಿ: ಧರಣೀಶ್ ಬೂಕನಕೆರೆ
Published by: Vijayasarthy SN
First published: December 2, 2020, 9:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories