• Home
  • »
  • News
  • »
  • national-international
  • »
  • Shocking: 40 ವರ್ಷದ ಮಹಿಳೆ ಮೇಲೆ ಐವರು ಪುರುಷರಿಂದ 2 ದಿನ ಗ್ಯಾಂಗ್ ರೇಪ್

Shocking: 40 ವರ್ಷದ ಮಹಿಳೆ ಮೇಲೆ ಐವರು ಪುರುಷರಿಂದ 2 ದಿನ ಗ್ಯಾಂಗ್ ರೇಪ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳೆ ರಕ್ತದ ಮಡುವಿನಲ್ಲಿ ತುಂಬಾ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ದೇಹದೊಳಗೆ ಇನ್ನೂ ಕಬ್ಬಿಣದ ರಾಡ್ ಇತ್ತು. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.​

  • Share this:

ದೆಹಲಿ: 40 ವರ್ಷದ ಮಹಿಳೆಯನ್ನು ಗಾಜಿಯಾಬಾದ್‌ನಲ್ಲಿ ಐವರು ಪುರುಷರು ಅಪಹರಿಸಿ ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ (Gang Rape) ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸರು (Delhi Police) ಬುಧವಾರ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಸ್ಥಿತಿ ತುಂಬಾ ಗಂಭೀರವಾಗಿದೆ. ಆಕೆಯ ದೇಹದಲ್ಲಿ ತೂರಿಸಲಾದ ಕಬ್ಬಿಣದ ರಾಡ್ ಇನ್ನೂ ಹಾಗೇ ಇದೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.


ದೆಹಲಿಗೆ ಸಂಪರ್ಕಿಸುವ ಆಶ್ರಮ ರಸ್ತೆಯ ಬಳಿ ಮಹಿಳೆಯೊಬ್ಬರು ಮಲಗಿರುವ ಬಗ್ಗೆ ಗಾಜಿಯಾಬಾದ್ ಪೊಲೀಸರು ಮಂಗಳವಾರ ಮಾಹಿತಿ ಸ್ವೀಕರಿಸಿದ್ದಾರೆ. ನಂತರ ಆ ಸ್ಥಳಕ್ಕೆ ತೆರಳಿದ ಪೊಲೀಸರು ಅಲ್ಲಿದ್ದ ಸಂತೃಸ್ತೆಯನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ದು ದೂರು ದಾಖಲಿಸಿಕೊಂಡಿದ್ದಾರೆ.


ಹುಟ್ಟುಹಬ್ಬದ ಪಾರ್ಟಿ ಮುಗಿಸಿ ತೆರಳುತ್ತಿದ್ದ ಮಹಿಳೆ ಮೇಲೆ ರೇಪ್
ಪೊಲೀಸರ ಪ್ರಕಾರ ಸಂತೃಸ್ತ ಮಹಿಳೆಯು ಗಾಜಿಯಾಬಾದ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ದೆಹಲಿಗೆ ಹಿಂತಿರುಗುತ್ತಿದ್ದಳು. ಆಕೆಯ ಸಹೋದರನ ಜೊತೆ ಬಸ್ ನಿಲ್ದಾಣದಲ್ಲಿ ಇಳಿಸಲಾಗಿತ್ತು. ಆಕೆ ಬಸ್‌ಗಾಗಿ ಕಾಯುತ್ತಿದ್ದಾಗ, ಕಾರೊಂದು ಮಹಿಳೆಯ ಬಳಿಗೆ ಬಂದಿತು. ಆ ಕಾರಿನಲ್ಲಿದ್ದ ಐವರು ಪುರುಷರು ಅವಳನ್ನು ಎಳೆದೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Jayalalitha Death Case: ಜಯಾ ಸಾವಿಗೆ ಶಶಿಕಲಾ ಕಾರಣವೇ? ತಮಿಳುನಾಡು ಸರ್ಕಾರಕ್ಕೆ ಸ್ಫೋಟಕ ವರದಿ


ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ
ಸಂತೃಸ್ತೆಯನ್ನು  ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಸಂತೃಸ್ತೆ ಮತ್ತು ಆರೋಪಿಗಳ ನಡುವೆ ಆಸ್ತಿ ವಿವಾದವಿದೆ ಎಂದು ಹೇಳಲಾಗುತ್ತಿದೆ ಎಂದು ಘಾಜಿಯಾಬಾದ್ ಪೊಲೀಸ್ ವರಿಷ್ಠಾಧಿಕಾರಿ ನಿಪುನ್ ಅಗರ್ವಾಲ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.


ದೆಹಲಿ ಮಹಿಳಾ ಆಯೋಗವು ಗಾಜಿಯಾಬಾದ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಆರೋಪಿಯ ವಿವರಗಳನ್ನು ಕೇಳಿ ನೋಟಿಸ್ ನೀಡಿದೆ. ಮಹಿಳೆ ರಕ್ತದ ಮಡುವಿನಲ್ಲಿ ತುಂಬಾ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ದೇಹದೊಳಗೆ ಇನ್ನೂ ಕಬ್ಬಿಣದ ರಾಡ್ ಇತ್ತು. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.​


ಪ್ರತಿದಿನ 10-15 ಗ್ರಾಹಕರಿಂದ ಅತ್ಯಾಚಾರ, ಸ್ಪಾ ರಿಸೆಪ್ಶನಿಸ್ಟ್​ನಿಂದ ಗಂಭೀರ ಆರೋಪ!


ಗುರುಗ್ರಾಮದ ಮಾಲ್‌ನ ಹೊರಗಿನ ಸ್ಪಾವೊಂದರಲ್ಲಿ ರಿಸೆಪ್ಶನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದ ಹದಿಹರೆಯದ ಬಾಲಕಿ ಪ್ರತಿದಿನ 10-15 ಗ್ರಾಹಕರು ತನ್ನ ಮೇಲೆ ಅತ್ಯಾಚಾರ ಮಾಡುತ್ತಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಅಲ್ಲಿ ಕೆಲಸ ಮಾಡುತ್ತಿರುವ ಈ ಸ್ಪಾವನ್ನು ವೇಶ್ಯಾವಾಟಿಕೆ ಕೇಂದ್ರದಂತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ಭಾರೀ ಸಂಚಲನ ಮೂಡಿಸಿದ್ದು, ಪೊಲೀಸರು ಇದರ ಹಿಂದಿನ ಸತ್ಯಾಸತ್ಯತೆ ತಿಳಿದುಕೊಳ್ಳಲು ತನಿಖೆ ಆರಂಭಿಸಿದ್ದಾರೆ.


ಇದನ್ನೂ ಓದಿ: Son Killed Mother: ಅಮ್ಮ ಮಾಡಿದ ಸೋರೆಕಾಯಿ ಸಾರು ತಿನ್ನದೇ ತಾಯಿಯನ್ನೇ ಕೊಂದ ಮಗ


ಗುರುಗ್ರಾಮ್‌ನ ಮಾಲ್‌ನ ಹೊರಗಿನ ಸ್ಪಾವೊಂದರಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ಬಾಲಕಿಯೊಬ್ಬಳು ಪ್ರತಿದಿನ 10-15 ಗ್ರಾಹಕರು ತನ್ನ ಮೇಲೆ ಅತ್ಯಾಚಾರ ಮಾಡುತ್ತಾರೆ ಎಂದು ಸಂವೇದನಾಶೀಲ ಆರೋಪ ಮಾಡಿದ್ದಾರೆ. ತನ್ನ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಅಲ್ಲಿ ಕೆಲಸ ಮಾಡುತ್ತಿರುವ ಬಾಲಕಿ, ಈ ಸ್ಪಾವನ್ನು ವೇಶ್ಯಾಗೃಹದಂತೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ಸುದ್ದಿಯ ಪ್ರಕಾರ, ರಿಕ್ಷಾ ಚಾಲಕನ ಮಗಳು ಶುಕ್ರವಾರ ಪತ್ರಿಕೆಗೆ ಪ್ರತಿಕ್ರಿಯಿಸಿದ್ದು 'ಈ ಸಮಯದಲ್ಲಿ ನನಗೆ ನೆಮ್ಮದಿಯೇ ಇಲ್ಲ. ಒಬ್ಬ ವ್ಯಕ್ತಿಯು ಕೋಣೆಯಿಂದ ಹೊರಬಂದಾಗ, ಇನ್ನೊಬ್ಬನು ಕೋಣೆಗೆ ಪ್ರವೇಶಿಸುತ್ತಾನೆ ಎಂದಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: