ಫೇಸ್​ಬುಕ್ ಡಿಲೀಟ್ ಮಾಡಿ, ಇಲ್ಲವೇ ಸೇನೆಗೆ ರಾಜೀನಾಮೆ ನೀಡಿ; ಹಿರಿಯ ಅಧಿಕಾರಿಗೆ ಕೋರ್ಟ್ ಸೂಚನೆ

ಜೂನ್​6ರಂದು ಭಾರತೀಯ ಸೇನೆ ಹೊಸ ಆದೇಶ ಹೊರಡಿಸಿತ್ತು. ಈ ಆದೇಶದ ಅಡಿಯಲ್ಲಿ ಫೇಸ್​ಬುಕ್​ ಸೇರಿ 87 ಆ್ಯಪ್​​ಗಳಲ್ಲಿ ಅವರ ಖಾತೆಗಳನ್ನು ಡಿಲೀಟ್​ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು.

Facebook

Facebook

 • Share this:
  ನವದೆಹಲಿ (ಜು.15): ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಫೇಸ್​ಬುಕ್​ ಸೇರಿ ಇತರ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವದರ ಮೇಲೆ ನಿಷೇಧ ಹೇರಲಾಗಿದೆ. ಈ ಕ್ರಮವನ್ನು ಸೇನೆಯ ಹಿರಿಯ ಅಧಿಕಾರಿಯೊಬ್ಬರು ದೆಹಲಿ ಹೈಕೋರ್ಟ್​​ನಲ್ಲಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತಿರಿಸಿರುವ ಕೋರ್ಟ್​, ಕೆಲಸಕ್ಕೆ ರಾಜೀನಾಮೆ ನೀಡಿ ಇಲ್ಲವೆ ಫೇಸ್​ಬುಕ್​ ಡಿಲೀಟ್​ ಮಾಡಿ ಎಂದು ಸೂಚಿಸಿದೆ.

  ರಾಜೀವ್​ ಸಹೈ ಮತ್ತು ಆಶಾ ಮೆನನ್​ ಅವರನ್ನೊಳಗೊಂಡ ಪೀಠ ಈ ಅರ್ಜಿಯನ್ನು ತಿರಸ್ಕರಿಸಿದೆ. ಭದ್ರತಾ ದೃಷ್ಟಿಯಿಂ ಭಾರತೀಯ ಸೇನೆ ಈ ರೀತಿಯ ಆದೇಶ ಹೊರಡಿಸಿದೆ. ಹೀಗಾಗಿ, ಈ ಬಗ್ಗೆ ನಾವು ಮಧ್ಯಂತರ ಆದೇಶ ಹೊರಡಿಸಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳನ್ನು ಅವರು ಮುಂದಿನ ದಿನಗಳಲ್ಲಿ ಕೂಡ ಬಳಕೆ ಮಾಡಬಹುದು ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

  ಈ ವೇಳೆ ಮಾತನಾಡಿದ ಅರ್ಜಿದಾರ ಲೆಫ್ಟಿನಂಟ್​ ಕರ್ನಲ್​ ಪಿಕೆ ಚೌಧರಿ ಪರ ವಕೀಲ, "ಒಂದೊಮ್ಮೆ ನಾವು ಫೇಸ್​ಬುಕ್​ ಡಿಲೀಟ್​ ಮಾಡಿದರೆ ಅದರಲ್ಲಿರುವ ಗೆಳೆಯರ ಜೊತೆಗಿನ ಸಂಪರ್ಕ ಸಂಪೂರ್ಣವಾಗಿ ತಪ್ಪಿ ಹೋಗುತ್ತದೆ," ಎಂದರು.

  ಇದಕ್ಕೆ ಉತ್ತರಿಸಿದ ರಾಜೀವ್​, “ಕ್ಷಮಿಸಿ, ನೀವು ಮುಂದಿನ ದಿನದಲ್ಲಿ ಬೇಕಿದ್ದರೆ ಹೊಸ ಫೇಸ್​ಬುಕ್​ ಖಾತೆಯನ್ನು ಆರಂಭಿಸಬಹುದು. ಒಂದು ಆರ್ಗನೈಸೇಷನ್​ ಅಡಿಯಲ್ಲಿದ್ದೀರಿ ಎಂದಾದರೆ ನೀವು ಅವರು ಹಾಕುವ ನಿಯಮಗಳನ್ನು ಪಾಲಿಸಬೇಕು. ಒಂದೊಮ್ಮೆ ನಿಮಗೆ ಫೇಸ್​ಬುಕ್​ ಬಳಕೆ ಮಾಡಲೇಬೇಕು ಎಂದಿದ್ದರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನೀವು ತೆರಳಬಹುದು. ನಿಮಗೆ ಆಯ್ಕೆಗಳಿವೆ," ಎಂದರು.

  ಜೂನ್​6ರಂದು ಭಾರತೀಯ ಸೇನೆ ಹೊಸ ಆದೇಶ ಹೊರಡಿಸಿತ್ತು. ಈ ಆದೇಶದ ಅಡಿಯಲ್ಲಿ ಫೇಸ್​ಬುಕ್​ ಸೇರಿ 87 ಆ್ಯಪ್​​ಗಳಲ್ಲಿ ಅವರ ಖಾತೆಗಳನ್ನು ಡಿಲೀಟ್​ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಇದರಲ್ಲಿ ಫೇಸ್​ಬುಕ್​, ಇನ್ಸ್​ಟಾಗ್ರಾಂ ಕೂಡ ಸೇರಿಕೊಂಡಿದೆ. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಭಾರತೀಯ ಸೇನೆ ಹೇಳಿತ್ತು.
  Published by:Rajesh Duggumane
  First published: