ನವದೆಹಲಿ: ರಾಜ್ಯಸಭಾ ಸಂಸದ ಮತ್ತು ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ (Ranjan Gogoi) ವಿರುದ್ಧ 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ (Defamation Suit) ಮತ್ತು ಅವರ ಆತ್ಮಕಥೆಗೆ ತಡೆಯಾಜ್ಞೆ ಕೋರಿ ಅಸ್ಸಾಂ ಲೋಕೋಪಯೋಗಿ (ಎಪಿಡಬ್ಲ್ಯು) ಅಧ್ಯಕ್ಷ ಅಭಿಜೀತ್ ಶರ್ಮಾ (Abhijit Sharma) ಅವರು ನ್ಯಾಯಾಲಯದಲ್ಲಿ ಹೂಡಿದ್ದಾರೆ.
ʻಜಸ್ಟೀಸ್ ಫಾರ್ ಎ ಜಡ್ಜ್'ಗೆ ಅಪಸ್ವರ
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ 'ಜಸ್ಟೀಸ್ ಫಾರ್ ಎ ಜಡ್ಜ್' ಎಂಬ ಆತ್ಮಚರಿತ್ರೆ ಬರೆದು ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ತಮ್ಮ ವಿರುದ್ಧ ತಪ್ಪು ದಾರಿಗೆಳೆಯುವ ಮತ್ತು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ ಎಂದು ದೂರಿರುವ ಅಭಿಜೀತ್ ಶರ್ಮಾ ಪುಸ್ತಕ ಪ್ರಕಟಣೆ ಮತ್ತು ಗೊಗೊಯ್ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ.
ಪುಸ್ತಕಕ್ಕೆ ತಡೆಯಾಜ್ಞೆ ಕೋರಿ ಅರ್ಜಿ
ಹೀಗಾಗಿ ಗೊಗೊಯ್ ಮತ್ತು ಅವರ ಪ್ರಕಾಶಕರು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಮತ್ತು ಆರೋಪಗಳನ್ನು ಹೊಂದಿರುವ ಯಾವುದೇ ಪುಸ್ತಕವನ್ನು ಮುಂದೆ ಪ್ರಕಟಿಸುವುದು, ವಿತರಿಸುವುದು ಅಥವಾ ಮಾರಾಟ ಮಾಡುವುದನ್ನು ತಡೆಯುವ ಮಧ್ಯಂತರ ತಡೆಯಾಜ್ಞೆಯನ್ನು ಕೋರಿ ಅಭಿಜೀತ್ ಶರ್ಮಾ ಅರ್ಜಿಯನ್ನು ಸಲ್ಲಿಸಿದ್ದಾರೆ.
ತಮ್ಮ ಕುರಿತು ಬರೆದಿರುವ ಅಂಶಗಳನ್ನು ಮತ್ತೆ ಪ್ರಕಟಿಸದಂತೆ ಶಾಶ್ವತ ತಡೆ ನೀಡುವಂತೆ ಅಥವಾ ಪುಸ್ತಕದಲ್ಲಿನ ಆ ಅಂಶಗಳನ್ನು ತೆಗೆದುಹಾಕುವಂತೆ ಕೋರಿದ್ದಾರೆ. ಇಲ್ಲಿನ ಕಾಮ್ರೂಪ್ ಮೆಟ್ರೋ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಮತ್ತು ತಡೆಯಾಜ್ಞೆಗೆ ಅಭಿಜೀತ್ ಶರ್ಮಾ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: IPS Praveen Sood: ನೂತನ ಸಿಬಿಐ ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ನೇಮಕ
ನ್ಯಾಯಾಲಯ ಹೇಳಿದ್ದೇನು?
ಅಭಿಜಿತ್ ಶರ್ಮಾ ಸಲ್ಲಿಸಿದ ಅರ್ಜಿ ಕುರಿತಾಗಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಲಯವು, ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ಬುಧವಾರದ ತನ್ನ ತೀರ್ಪಿನಲ್ಲಿ 'ಕಾನೂನು ಮತ್ತು ತೀರ್ಪು ನೀಡಬೇಕಾದ ಸಂಗತಿಗಳೆರಡರಲ್ಲೂ ಗಣನೀಯ ಪ್ರಶ್ನೆ ಇದೆ' ಎಂದು ಕಂಡುಬಂದಿದೆ.
ತಡೆಯಾಜ್ಞೆ ಪ್ರಕರಣದಲ್ಲಿ, ನ್ಯಾಯಾಧೀಶರು ವಿರುದ್ಧ ಕಕ್ಷಿದಾರರನ್ನು ಕೇಳದೆ ಯಾವುದೇ ಮಾಜಿ-ಪಕ್ಷದ ಆದೇಶವನ್ನು ನೀಡುವ ಸ್ವಭಾವದಲ್ಲಿ ಈ ವಿಷಯವು ಹೊರಹೊಮ್ಮಿಲ್ಲ ಎಂದು ಕಂಡುಬಂದಿದೆ ಎಂದು ಅಭಿಪ್ರಾಯ ಪಟ್ಟಿದೆ.
ಮುಂದಿನ ವಿಚಾರಣೆ ಜೂನ್ 3ಕ್ಕೆ
ನಂತರ ಅರ್ಜಿದಾರರು ಮತ್ತು ಪ್ರತಿವಾದಿಗಳಿಬ್ಬರಿಗೂ ಸಮನ್ಸ್ ಜಾರಿಗೊಳಿಸಲು ಸೂಚಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಅಭಿಜಿತ್ ಉಲ್ಲೇಖಿಸಿದ್ದೇನು?
ಪುಸ್ತಕದಲ್ಲಿ ತನ್ನ ವಿರುದ್ಧದ ಆರೋಪಗಳು "ಅಂತರ್ಗತವಾಗಿ ಸುಳ್ಳು ಮತ್ತು ದುರುದ್ದೇಶಪೂರಿತ" ಮತ್ತು "ತನಗೆ ಮಾನಹಾನಿ ಮಾಡುವ ಸ್ಪಷ್ಟ ಉದ್ದೇಶದಿಂದ" ಮಾಡಲಾಗಿದೆ ಎಂದು ಶರ್ಮಾ ಆರೋಪಿಸಿದ್ದಾರೆ.
ಶರ್ಮಾ ಅವರು, "ನಾನು ಇಲ್ಲಿಯವರೆಗೆ ಯಾವುದೇ ಕಳಂಕವಿಲ್ಲದೆ ಬದುಕಿದವನು. ಆದರೆ ಗೊಗೊಯ್ ಅವರ ಆತ್ಮಚರಿತ್ರೆಯಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳಿವೆ. ಸ್ನೇಹಿತರು ಮತ್ತು ಕುಟುಂಬದ ದೃಷ್ಟಿಯಲ್ಲಿ ನನ್ನ ಇಮೇಜ್ ಕುಗ್ಗಿ ಹೋಗಿದೆ. ಹಾನಿಕಾರಕ ಮತ್ತು ಸರಪಡಿಸಲಾಗದಂತ ಸ್ಥಿತಿಯಲ್ಲಿ ನನ್ನ ಖ್ಯಾತಿಯನ್ನು ಬಿಂಬಿಸಿದ್ದಾರೆ. ಇದು ಮಾನಸಿಕವಾಗಿ ನನಗೆ ನೋವುಂಟು ಮಾಡಿದರ ಜೊತೆಗೆ ನನ್ನನ್ನು ಕುಗ್ಗಿಸಿದೆ" ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Fake Liquor: ವಿಷಕಾರಿ ನಕಲಿ ಮದ್ಯ ಸೇವಿಸಿ ಎಂಟು ಮಂದಿ ಸಾವು, 30 ಮಂದಿ ಗಂಭೀರ!
ಗೊಗೊಯ್ ಅವರು ಭಾರತದ ಅತ್ಯುನ್ನತ ನ್ಯಾಯಾಧೀಶರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ನಾನು ಅವರ ಮೇಲೆ ಯಾವುದೇ ವೈಯಕ್ತಿಕ ದಾಳಿಯನ್ನು ಮಾಡಿಲ್ಲ ಎಂದು ಕೂಡ ಎಪಿಡಬ್ಲ್ಯೂ ಅಧ್ಯಕ್ಷರು ತಮ್ಮ ಅರ್ಜಿಯಲ್ಲಿ ಗಮನಸೆಳೆದಿದ್ದಾರೆ. ಗೊಗೊಯ್ ಅವರು 2018 ರಿಂದ 19ರವರೆಗೆ ಭಾರತದ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಅವರ ತಂದೆ ಕೇಶವ ಚಂದ್ರ ಗೊಗೊಯ್ 1982 ರಲ್ಲಿ ಅಸ್ಸಾಂ ರಾಜ್ಯದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಡಳಿತದಡಿಯಲ್ಲಿ ಮುಖ್ಯಮಂತ್ರಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ಜೂನ್ 3ಕ್ಕೆ ನಡೆಯಲಿದ್ದು, ಕೋರ್ಟ್ ಏನು ತೀರ್ಪು ನೀಡುತ್ತದೆಯೋ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ