ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ ಗುರುತಿನ ಚೀಟಿ ಕೇಳಿದ ಭದ್ರತಾ ಸಿಬ್ಬಂದಿ! ಆಗ ಖ್ಯಾತ ನಟಿ ಮಾಡಿದ್ದೇನು ಗೊತ್ತಾ?

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಲವು ಮಂದಿ ಇಬ್ಬರ ಸಮಯಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ.

ಪ್ರಕಾಶ್ ಪಡುಕೋಣೆ ಮತ್ತು ದೀಪಿಕಾ ಪಡುಕೋಣೆ

ಪ್ರಕಾಶ್ ಪಡುಕೋಣೆ ಮತ್ತು ದೀಪಿಕಾ ಪಡುಕೋಣೆ

  • News18
  • Last Updated :
  • Share this:

ನವದೆಹಲಿ:  ದೀಪಿಕಾ ಪಡುಕೋಣೆ ಸ್ಯಾಂಡಲ್​ವುಡ್​ನಿಂದ ಸಿನಿಮಾ ಜಗತ್ತಿಗೆ ಪರಿಚಯವಾದ ವಿಶ್ವದಾದ್ಯಂತ ಹೆಸರು, ಖ್ಯಾತಿ ಗಳಿಸಿರುವ ನಟಿ. ವಿದೇಶದಲ್ಲೂ ದೀಪಿಕಾಗೆ ಸಾವಿರಾರು ಅಭಿಮಾನಿಗಳು ಇದ್ದಾರೆ ಅಂದರೆ ಇನ್ನು ಭಾರತದಲ್ಲಿ ಕೇಳಬೇಕೆ. ಸದಾ ಸುದ್ದಿಯಲ್ಲಿರುವ ನಟಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಲು ಒಂದು ಕಾರಣವಿದೆ.ಪ್ರಖ್ಯಾತಿಯ ಉತ್ತುಂಗದಲ್ಲಿರುವ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣ ಪ್ರವೇಶಿಸುವಾಗ ಅಲ್ಲಿನ ಭದ್ರತಾ ಸಿಬ್ಬಂದಿ ದೀಪಿಕಾರ ಗುರುತಿನ ಚೀಟಿಯನ್ನು ಕೇಳುತ್ತಾರೆ. ಇದಕ್ಕೆ ದೀಪಿಕಾ ಕೊಡುವ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಶುಕ್ರವಾರ ಮುಂಬೈ ವಿಮಾನ ನಿಲ್ದಾಣಕ್ಕೆ ತಮ್ಮ ತಂದೆ ಪ್ರಕಾಶ್ ಪಡುಕೋಣೆ ಅವರೊಂದಿಗೆ ಬಂದ ದೀಪಿಕಾ ಪಡುಕೋಣೆ ಅವರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಮೇಡಂ ಐಡಿ ಕಾರ್ಡ್​ ಎಂದು ಕೇಳಿದ್ದಾರೆ. ಆಗಾಗಲೇ ಬಾಗಿಲಿನಿಂದ ಸ್ವಲ್ಪ ಒಳಹೋಗಿದ್ದ ದೀಪಿಕಾ ಮತ್ತೆ ಹಿಂದಿರುಗಿ ಬಂದು ತೋರಿಸಬೇಕಾ ಎಂದು ಪ್ರಶ್ನೆ ಮಾಡಿದಾಗ ಸಿಬ್ಬಂದಿ ಹೌದು ಎಂದು ಹೇಳುತ್ತಾರೆ. ಆಗ ದೀಪಿಕಾ ತಮ್ಮ ಬ್ಯಾಗಿನಿಂದ ಗುರುತಿನ ಚೀಟಿ ತೆಗೆದು ತೋರಿಸಿ, ಒಳಹೋಗುತ್ತಾರೆ.

 
View this post on Instagram
 

Thy shall always obey rules 👍 #deepikapadukone


A post shared by Viral Bhayani (@viralbhayani) on


ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಲವು ಮಂದಿ ಇಬ್ಬರ ಸಮಯಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ತಮ್ಮ ಕೆಲಸದಲ್ಲಿ ಎಂದಿಗೂ ರಾಜಿಯಾಗದೇ ವೃತ್ತಿಪರತೆ ಮೆರೆದಿರುವುದು ಮತ್ತು ಭದ್ರತಾ ಸಿಬ್ಬಂದಿ ಕೆಲಸಕ್ಕೆ ಹೆಸರಾಂತ ನಟಿ, ಸಹಕರಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


First published: