HR RameshHR Ramesh
|
news18-kannada Updated:January 10, 2020, 3:21 PM IST
ಸ್ಮೃತಿ ಇರಾನಿ ಮತ್ತು ದೀಪಿಕಾ ಪಡುಕೋಣೆ.
ಬೆಂಗಳೂರು: ಜೆಎನ್ಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ, ಜೊತೆಗೆ ಇರುವಾಗಿ ಭರವಸೆ ನೀಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರ ಸಚಿವ ಸ್ಮೃತಿ ಇರಾನಿ ಹರಿಹಾಯ್ದಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವೆ ಸ್ಮೃತಿ ಇರಾನಿ ತುಕ್ಡೆ ತುಕ್ಡೆ ಗ್ಯಾಂಗ್ ಉಲ್ಲೇಖಿಸಿ, ದೇಶವನ್ನು ನಾಶ ಮಾಡುವ ಜನರ ಪರವಾಗಿ ನಿಂತುಕೊಳ್ಳುವುದು ಅದು ದೀಪಿಕಾ ಅವರ ಸ್ವಾತಂತ್ರ ಎಂದು ಮಾರ್ಮಿಕವಾಗಿ ಹೇಳಿದರು.
ಸಿಆರ್ಪಿಎಫ್ ಯೋಧರು ಪ್ರತಿಬಾರಿ ಹತ್ಯೆಯಾದಾಗಲೂ ಸಂಭ್ರವಿಸುವ ಜನರೊಂದಿಗೆ ನೀವು ನಿಂತಿದ್ದಿರಾ. ಆಕೆಗೆ ಗೊತ್ತು, ತಾನು ಯಾವ ಜನರೊಂದಿಗೆ ನಿಂತಿದ್ದೇನೆ ಎಂಬುದು. ಇದು ನಮಗೆ ಅನಿರೀಕ್ಷಿತವೇನಲ್ಲ. ದೇಶದ ವಿನಾಶ ಬೇಕಿರುವ ಜನರೊಂದಿಗೆ ಅವರು ನಿಂತಿದ್ದಾರೆ. ಭಾರತ ತುಂಡಾಗಲಿ ಎಂದು ಹೇಳುವ ಜನರೊಂದಿಗೆ ಅವರು ನಿಂತಿದ್ದಾರೆ. ಆಕೆಯ ಹಕ್ಕನ್ನು ನಾನು ನಿರಾಕರಿಸುವುದಿಲ್ಲ. ಪಡುಕೋಣೆ ರಾಜಕೀಯವಾಗಿ ಏನನ್ನು ಅಪೇಕ್ಷಿಸುತ್ತಿದ್ದಾರೆ ಎಂಬುದು ನನಗೆ ತಿಳಿಯಬೇಕು. ದೀಪಿಕಾ ಪಡುಕೋಣೆ ಸುದ್ದಿಯನ್ನು ಯಾರೇ ಓದಿದರು, ಆಕೆ ಪ್ರತಿಭಟನಾಕಾರರ ಜೊತೆ ಏಕೆ ನಿಂತಿದ್ದಾರೆ ಎಂಬುದು ಗೊತ್ತಿದೆ. 2011ರಲ್ಲಿ ದೀಪಿಕಾ ಪಡುಕೋಣೆ ಕಾಂಗ್ರೆಸ್ಗೆ ಬೆಂಬಲ ನೀಡಿದಾಗಲೇ ಆಕೆಯ ರಾಜಕೀಯ ಸಂಬಂಧ ಏನು ಎಂಬುದನ್ನು ತೋರಿಸಿಕೊಟ್ಟಿದ್ದರು ಎಂದು ಸ್ಮೃತಿ ಇರಾನಿ ಹೇಳಿದರು.
ಇದನ್ನು ಓದಿ: ಜೆಎನ್ಯು ಉಪಕುಲಪತಿ ಎಂ ಜಗದೀಶ್ ಕೂಡಲೇ ರಾಜೀನಾಮೆ ನೀಡಬೇಕು: ಬಿಜೆಪಿ ಹಿರಿಯ ನಾಯಕ ಆಗ್ರಹ
ಭಾನುವಾರ ರಾತ್ರಿ ದೊಣ್ಣೆ, ಬಡಿಗೆ, ರಾಡ್ ಹಿಡಿದು ಮಾಸ್ಕ್ ಧರಿಸಿ ಜೆಎನ್ಯು ವಿವಿ ಆವರಣದೊಳಗೆ ನುಗ್ಗಿದ ದುಷ್ಕರ್ಮಿಗಳ ಗುಂಪು ಅಲ್ಲಿನ ವಿದ್ಯಾರ್ಥಿಗಳು ಹಾಗೂ ಬೋಧಕರ ಮೇಲೆ ಹಲ್ಲೆ ನಡೆಸಿತ್ತು. ಆರ್ಎಸ್ಎಸ್ನ ಯುವ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ದಾಳಿ ನಡೆಸಿದೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿಗಳು ಆರೋಪಿಸಿ, ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಸಂಜೆ ಪ್ರತಿಭಟನೆ ಸ್ಥಳಕ್ಕೆ ಬಂದ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳ ಪರವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದರು.
Published by:
HR Ramesh
First published:
January 10, 2020, 3:21 PM IST