Bollywood Drugs Case: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್​ಗೆ ಸಮನ್ಸ್​ ಜಾರಿ

ದೀಪಿಕಾ ಪಡುಕೋಣೆ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಅವರನ್ನು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಅಧಿಕಾರಿಗಳು ನಿನ್ನೆ ವಿಚಾರಣೆ ನಡೆಸಿದ್ದರು. ರಿಯಾ ಚಕ್ರವರ್ತಿ ಜೊತೆಗೆ ಡ್ರಗ್ಸ್​ ಕುರಿತು ನಡೆಸಿದ ಸಂದೇಶದ ಆಧಾರದ ಮೇಲೆ ದಿಪೀಕಾ ಮ್ಯಾನೇಜರ್​ ಅವರ ವಿಚಾರಣೆ ನಡೆಸಲಾಗಿತ್ತು.

news18-kannada
Updated:September 23, 2020, 6:15 PM IST
Bollywood Drugs Case: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್​ಗೆ ಸಮನ್ಸ್​ ಜಾರಿ
ಬಾಲಿವುಡ್ ನಟಿಯರು
  • Share this:
ಸುಶಾಂತ್​ ಸಿಂಗ್​ ಸಾವಿನ ಪ್ರಕರಣದಲ್ಲಿ ಬೆಳಕಿಗೆ ಬಂದಿರುವ ಮಾದಕ ವಸ್ತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ಟಾಪ್​ ನಟಿ ದೀಪಿಕಾ ಪಡುಕೋಣೆಗೆ ಪೊಲೀಸರು ಸಮನ್ಸ್​ ನೀಡಿದ್ದಾರೆ. ಬಾಲಿವುಡ್​ನ ನಂ.1 ನಟಿಯಾಗಿರುವ ಪಡುಕೋಣೆ ಹೆಸರು ಡ್ರಗ್ಸ್​ ಜಾಲತಾಣದಲ್ಲಿ ಕೇಳಿ ಬಂದಿದ್ದು, ಈ ಹಿನ್ನೆಲೆ ಸಮನ್ಸ್​ ನೀಡಲಾಗಿದೆ. ಈ ಮೂಲಕ ಈ ಪ್ರಕರಣದಲ್ಲಿ ಅನೇಕ ಸ್ಟಾರ್​ ನಟ-ನಟಿಯರ ಹೆಸರು ಹೊರಬರುವ ಸಾಧ್ಯತೆ ಇದೆ. ಇದರ ಜೊತೆಗೆ ಶ್ರದ್ಧಾ ಕಪೂರ್​, ಸಾರಾ ಆಲಿಖಾನ್​, ರಿಯಾ ಚಕ್ರವರ್ತಿ ಜೊತೆ ವಾಟ್ಸಾಪ್​ ಸಂದೇಶ ನಡೆಸಿದ್ದ ಟಾಲಿವುಡ್​ನ ಬೇಡಿಕೆ ನಟಿ ರಕುಲ್​ ಪ್ರೀತ್​ ಸಿಂಗ್​ಗೂ ಸಮನ್ಸ್​ ಜಾರಿಯಾಗಿದೆ.  ಈ ಪ್ರಕರಣದಲ್ಲಿ ಮಾಧ್ಯಮಗಳು ತಮ್ಮ ಹೆಸರನ್ನು ವರದಿ ಮಾಡುತ್ತಿರುವುದರ ತಡೆ ಕೋರಿ ರಕುಲ್​ ಪದೆಹಲಿ ನ್ಯಾಯಾಲಯದ ಮೆಟ್ಟಿಲತ್ತಿದ್ದರು. ಇನ್ನು ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ.

ಇನ್ನು  ನಟಿಯರಿಗೆ ಮೂರು ದಿನದೊಳಗೆ ಹಾಜರಾಗಿ ವಿವರಣೆ ನೀಡುವಂತೆ ನಾರ್ಕೋಟಿಕ್ಸ್​ ಕಂಟ್ರೋಲ್​ ​ಬ್ಯೂರೋ ಅಧಿಕಾರಿಗಳು ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಅವರನ್ನು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಅಧಿಕಾರಿಗಳು ನಿನ್ನೆ ವಿಚಾರಣೆ ನಡೆಸಿದ್ದರು. ರಿಯಾ ಚಕ್ರವರ್ತಿ ಜೊತೆಗೆ ಡ್ರಗ್ಸ್​ ಕುರಿತು ನಡೆಸಿದ ಸಂದೇಶದ ಆಧಾರದ ಮೇಲೆ ದಿಪೀಕಾ ಮ್ಯಾನೇಜರ್​ ಅವರ ವಿಚಾರಣೆ ನಡೆಸಲಾಗಿತ್ತು.

ನಟಿ ದೀಪಿಕಾ ವಿಚಾರಣೆ ಬಳಿಕ ಬಾಲಿವುಡ್​ನ ಸಾಕಷ್ಟು ಹೈ ಪ್ರೊಫೈಲ್​ ನಟರು ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಸಾಧ್ಯತೆ ಇದ್ದು, ವಿಚಾರಣೆ ಬಳಿಕ ಇದರ ಬಗ್ಗೆ ಸ್ಪಷ್ಟವಾಗಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ​ ನಟಿ ಶ್ರದ್ಧಾ ಕಪೂರ್​ ಹಾಗೂ ಸಾರಾ ಆಲಿಖಾನ್ ಅವರನ್ನು ವಿಚಾರಣೆಗೆ ಕರೆದು ಸಮನ್ಸ್​ ಜಾರಿ ಮಾಡಲಾಗಿದೆ. ನಟನಿಗೆ ಡ್ರಗ್ಸ್​ ನೀಡಲಾಗುತ್ತಿತ್ತು ಎಂಬ ಆರೋಪದಲ್ಲಿ ಈಗಾಗಲೇ ನಟಿ ರಿಯಾ ಚಕ್ರವರ್ತಿ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಸೈಫ್​ ಆಲಿಖಾನ್​ ಪುತ್ರಿ ನಟಿ ಸಾರಾ ಆಲಿಖಾನ್ ​ಕೂಡ ಡ್ರಗ್ಸ್​ ಪೆಡ್ಲರ್​ ಜೊತೆ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆ ಆಕೆಯನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಈ ನಡುವೆ ಬಾಲಿವುಡ್​ನ ಖ್ಯಾತ ಖಳನಟ ಶಕ್ತಿ ಕಪೂರ್​ ಮಗಳು ನಟಿ ಶ್ರದ್ಧಾ ಕಪೂರ್​ ಹೆಸರು ಕೂಡ ಈ ಡ್ರಗ್ಸ್​ ಜಾಲದಲ್ಲಿ ಕೇಳಿಬಂದಿದೆ.
Published by: Seema R
First published: September 23, 2020, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading