ಬಾಲಿವುಡ್ ಡ್ರಗ್ಸ್ ಜಾಲದ ತನಿಖೆ; ಸತತ 6 ಗಂಟೆ ಕಾಲ ವಿಚಾರಣೆಗೆ ಹಾಜರಾಗಿ ತೆರಳಿದ ನಟಿ ದೀಪಿಕಾ ಪಡುಕೋಣೆ
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈ ಮನೆಯಲ್ಲಿ ಶವವಾಗಿ ಪತ್ತೆಯಾದ ಮೂರು ತಿಂಗಳ ನಂತರ, ನಟ ರಿಯಾ ಚಕ್ರವರ್ತಿಯವರ ಪ್ರಶ್ನೆಯೊಂದಿಗೆ ಬಾಲಿವುಡ್ನ ಡ್ರಗ್ಸ್ ಲಿಂಕ್ಗಳ ಜಾಲ ತೆರೆದುಕೊಳ್ಳುತ್ತಾ ಹೋಯಿತು. ಇದೀಗ ಈ ಪ್ರಕರಣ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಅನೇಕ ಏಜೆನ್ಸಿಗಳು ಈ ಪ್ರಕರಣ ತನಿಖೆಯ ಬೆನ್ನುಬಿದ್ದಿವೆ.
news18-kannada Updated:September 26, 2020, 5:10 PM IST

ದೀಪಿಕಾ ಪಡುಕೋಣೆ.
- News18 Kannada
- Last Updated: September 26, 2020, 5:10 PM IST
ಮುಂಬೈ (ಸೆಪ್ಟೆಂಬರ್ 26) ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಈ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪರಿಣಾಮ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ನಿರ್ವಹಿಸಲು ಗ್ರೀನ್ ಸಿಗ್ನಲ್ ನೀಡಿತ್ತು. ಈ ಪ್ರಕರಣದ ಬೆನ್ನಿಗೆ ಡ್ರಗ್ಸ್ ಜಾಲದ ಜೊತೆಗೆ ಬಾಲಿವುಡ್ ಸಿನಿ ಇಂಡಸ್ಟ್ರಿ ಹೆಸರು ಥಳಕು ಹಾಕಿಕೊಂಡಿತ್ತು. ಸುಶಾಂತ್ ಸಿಂಗ್ ಸಾವಿಗೂ ಸಹ ಈ ಡ್ರಗ್ಸ್ ಜಾಲವೇ ಕಾರಣ ಎನ್ನಲಾಗಿತ್ತು. ಪರಿಣಾಮ ಮಾದಕ ವಸ್ತು ವಿರೋಧಿ ಸಂಸ್ಥೆ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಸಹ ಈ ಪ್ರಕರಣದ ತನಿಖೆಗೆ ಎಂಟ್ರಿ ಪಡೆದಿತ್ತು. ಪ್ರಕರಣದ ತನಿಖೆ ಆರಂಭಿಸುತ್ತಲೇ ಖ್ಯಾತ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಂಹೋದರನನ್ನು ಬಂಧಿಸಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಅನೇಕರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಸಹ ನೀಡಿತ್ತು. ಹೀಗಾಗಿ ಇಂದು ಮಧ್ಯಾಹ್ನದ ವೇಳೆಗೆ ವಿಚಾರಣೆಗೆ ಹಾಜರಾಗಲೆಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಚೇರಿಗೆ ಆಗಮಿಸಿದ್ದ ನಟಿ ದೀಪಿಕಾ ಪಡುಕೋಣೆ ಸತತ 6 ಗಂಟೆಯ ವಿಚಾರಣೆ ಮುಗಿಸಿ ಇದೀಗ ಹೊರಟಿದ್ದಾರೆ ಎನ್ನಲಾಗುತ್ತಿದೆ.
ಮುಂಬೈನ ಕೊಲಾಬಾದ ಎವೆಲಿನ್ ಅತಿಥಿ ಗೃಹದಲ್ಲಿ ನೆಲೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಿಶೇಷ ತನಿಖಾ ತಂಡವು ಇಂದು ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಮತ್ತು ದೀಪಿಕಾ ಪಡುಕೋಣೆ ಮೂವರನ್ನೂ ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ. ಈ ನಡುವೆ ನಟಿ ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಅವರನ್ನು ಸತತ ಎರಡನೇ ದಿನವೂ ಪ್ರಶ್ನಿಸಲಾಗುತ್ತಿದೆ. ಅವರು ಇಂದು ಬೆಳಿಗ್ಗೆ ಎನ್ಸಿಬಿ ಕಚೇರಿಗೆ ತಲುಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಮಥುರಾ ಶ್ರೀಕೃಷ್ಣ ದೇವಾಲಯದ ಸಂಕೀರ್ಣದಲ್ಲಿರುವ ಮಸೀದಿಯ ಕೆಳಗೆ ಕೃಷ್ಣನ ಜನ್ಮಸ್ಥಾನವಿದೆ; ಮೊಕದ್ದಮೆ ದಾಖಲು
ಕಳೆದ ಶುಕ್ರವಾರವೇ ಎನ್ಸಿಬಿ ಅಧಿಕಾರಿಗಳು ಕರಿಷ್ಮಾ ಪ್ರಕಾಶ್ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ನಡುವಿನ ವಾಟ್ಸಾಪ್ ಚಾಟ್ಗೆ ಸಂಬಂಧಿಸಿದ ವಿಚಾರಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದ್ದರು. ಈ ವಾಟ್ಸಾಪ್ ಚಾಟಿಂಗ್ನಲ್ಲಿ ಗಾಂಜಾವನ್ನು ಬಳಕೆಗಾಗಿ ಖರೀದಿಸಿರುವ ವಿಚಾರವೂ ಸ್ಪಷ್ಟವಾಗಿತ್ತು. ಹೀಗಾಗಿ ನಾಲ್ಕು ಗಂಟೆಗಳಿಗೆಗೂ ಹೆಚ್ಚು ಕಾಲ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ರಾಕುಲ್ ಪ್ರೀತ್ ಸಿಂಗ್ ಅವರನ್ನು ಬಿಟ್ಟು ಕಳಿಸಲಾಗಿದ್ದರೂ ಸಹ ಕರಿಷ್ಮಾ ಪ್ರಕಾಶ್ ಅವರ ವಿಚಾರಣೆ ಇನ್ನೂ ಮುಂದುವರೆಸಲಾಗಿತ್ತು.
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈ ಮನೆಯಲ್ಲಿ ಶವವಾಗಿ ಪತ್ತೆಯಾದ ಮೂರು ತಿಂಗಳ ನಂತರ, ನಟ ರಿಯಾ ಚಕ್ರವರ್ತಿಯವರ ಪ್ರಶ್ನೆಯೊಂದಿಗೆ ಬಾಲಿವುಡ್ನ ಡ್ರಗ್ಸ್ ಲಿಂಕ್ಗಳ ಜಾಲ ತೆರೆದುಕೊಳ್ಳುತ್ತಾ ಹೋಯಿತು. ಇದೀಗ ಈ ಪ್ರಕರಣ ಇಡೀ ರಾಷ್ಟ್ರದ ಗಮನ ಸೆಳೆದಿದ್ದು, ಅನೇಕ ಏಜೆನ್ಸಿಗಳು ಈ ಪ್ರಕರಣ ತನಿಖೆಯ ಬೆನ್ನುಬಿದ್ದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಹೆಸರುಗಳು ಈ ಡ್ರಗ್ಸ್ ಜಾಲದಲ್ಲಿ ಕೇಳಿ ಬರಲಿವೆ ಎಂದು ಹೇಳಲಾಗುತ್ತಿದೆ.
ಮುಂಬೈನ ಕೊಲಾಬಾದ ಎವೆಲಿನ್ ಅತಿಥಿ ಗೃಹದಲ್ಲಿ ನೆಲೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಿಶೇಷ ತನಿಖಾ ತಂಡವು ಇಂದು ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಮತ್ತು ದೀಪಿಕಾ ಪಡುಕೋಣೆ ಮೂವರನ್ನೂ ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದುಬಂದಿದೆ.