ದೀಪಿಕಾ ಪಡುಕೋಣೆಗೆ ನನ್ನಂತಹ ಉತ್ತಮ ಸಲಹೆಗಾರರ ಅಗತ್ಯವಿದೆ; ಯೋಗ ಗುರು ಬಾಬಾ ರಾಮದೇವ್

ಜೆಎನ್​ಯು ವಿಚಾರದಲ್ಲಿ ದೀಪಿಕಾ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೋಗ ಗುರು ಬಾಬಾ ರಾಮದೇವ್ ದೀಪಿಕಾ ಪಡುಕೋಣೆ ದೇಶದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದಿದ್ದಾರೆ.

Sushma Chakre | news18-kannada
Updated:January 14, 2020, 12:37 PM IST
ದೀಪಿಕಾ ಪಡುಕೋಣೆಗೆ ನನ್ನಂತಹ ಉತ್ತಮ ಸಲಹೆಗಾರರ ಅಗತ್ಯವಿದೆ; ಯೋಗ ಗುರು ಬಾಬಾ ರಾಮದೇವ್
ಬಾಬಾ ರಾಮದೇವ್- ದೀಪಿಕಾ ಪಡುಕೋಣೆ
  • Share this:
ನವದೆಹಲಿ (ಜ. 14): ದೆಹಲಿಯ ಜೆಎನ್​ಯು ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡೆಗೆ ದೇಶಾದ್ಯಂತ ವಿರೋಧ ಕೇಳಿಬಂದಿತ್ತು. ಅದೇ ವಾರ ರಿಲೀಸ್ ಆದ 'ಚಪಾಕ್' ಸಿನಿಮಾ ಮೇಲೂ ಇದು ಪರಿಣಾಮ ಬೀರಿತ್ತು.

ಜೆಎನ್​ಯು ವಿಚಾರದಲ್ಲಿ ದೀಪಿಕಾ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೋಗ ಗುರು ಬಾಬಾ ರಾಮದೇವ್ 'ದೀಪಿಕಾ ಪಡುಕೋಣೆ ದೇಶದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವಿಷಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು. ಇದಕ್ಕಾಗಿ ನನ್ನ ರೀತಿಯ ಉತ್ತಮ ಸಲಹೆಗಾರರನ್ನು ನೇಮಿಸಿಕೊಳ್ಳುವುದು ಒಳಿತು' ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯಿದೆ. ಆಕೆ ಉತ್ತಮ ನಟಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಆಕೆಗೆ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ ತಿಳುವಳಿಕೆ ಕಡಿಮೆ. ಈ ಬಗ್ಗೆ ಆಕೆಗೆ ಗೊತ್ತಿಲ್ಲ ಎಂದರೆ ನನ್ನ ರೀತಿಯ ತಿಳುವಳಿಕೆ ಇರುವವರ ಮಾರ್ಗದರ್ಶನ ಪಡೆಯುವುದು ಒಳ್ಳೆಯದು ಎಂದು ಬಾಬಾ ರಾಮದೇವ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ನಿರ್ಭಯಾ ಗಲ್ಲು ಶಿಕ್ಷೆ ಪ್ರಕರಣ; ಇಬ್ಬರ ಮೇಲ್ಮನವಿ ಅರ್ಜಿ ಇಂದು ವಿಚಾರಣೆ; ಕಾನೂನಿನ ಕಟ್ಟಕಡೆಯ ಮೆಟ್ಟಿಲಲ್ಲಿ ಅತ್ಯಾಚಾರಿಗಳು

ದೆಹಲಿಯ ಜೆಎನ್​ಯು ಆವರಣದೊಳಗೆ ನುಗ್ಗಿದ್ದ ಗೂಂಡಾಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದಕ್ಕೆ ದೇಶದ ಹಲವೆಡೆ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದೀಪಿಕಾ ಜೆಎನ್​ಯುಗೆ ತೆರಳಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದಕ್ಕೆ ಬಲಪಂಥೀಯರು ವಿರೋಧ ವ್ಯಕ್ತಪಡಿಸಿ, ಚಪಾಕ್ ಸಿನಿಮಾ ಬಾಯ್​ಕಟ್ ಮಾಡಲು ಕರೆನೀಡಿದ್ದರು. ಇದರಿಂದ ಚಪಾಕ್ ಸಿನಿಮಾ ಕಲೆಕ್ಷನ್ ಮೇಲೂ ಹೊಡೆತ ಬಿದ್ದಿತ್ತು. ದೀಪಿಕಾಗೆ ವಿರೋಧ ವ್ಯಕ್ತವಾದಂತೆ ಅನೇಕ ಸೆಲೆಬ್ರಿಟಿಗಳಿಂದ ಬೆಂಬಲವೂ ದೊರಕಿತ್ತು.
Published by: Sushma Chakre
First published: January 14, 2020, 12:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading