ಎಲ್ಲಾ ನೌಕರರಿಗೆ ದೀಪಾವಳಿ ಬಂಪರ್​ ಗಿಫ್ಟ್​: ತುಟ್ಟಿ ಭತ್ಯೆ ಮೂರು ಪಟ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ

Diwali Gift For Govt. Employees: ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ಸರ್ಕಾರದ ನಿರ್ಧಾರವನ್ನು ಬುಧವಾರ ನವದೆಹಲಿಯಲ್ಲಿ ಪ್ರಕಟಿಸಿದ್ದಾರೆ. ಒಟ್ಟೂ 50 ಲಕ್ಷ ಸರ್ಕಾರಿ ನೌಕರರು ಮತ್ತು 62 ಲಕ್ಷ ಪಿಂಚಣಿದಾರರು ಫಲಾನುಭವಿಗಳಾಗಲಿದ್ದಾರೆ. 

Sharath Sharma Kalagaru | news18-kannada
Updated:October 9, 2019, 3:30 PM IST
ಎಲ್ಲಾ ನೌಕರರಿಗೆ ದೀಪಾವಳಿ ಬಂಪರ್​ ಗಿಫ್ಟ್​: ತುಟ್ಟಿ ಭತ್ಯೆ ಮೂರು ಪಟ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ
ಪ್ರಕಾಶ್ ಜಾವ್ಡೇಕರ್​
  • Share this:
ನವದೆಹಲಿ: ಹಬ್ಬದ ಸೀಸನ್​ ಆರಂಭವಾದ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಕೇಂದ್ರ ಬಂಪರ್​ ಆಫರ್​ ನೀಡಿದೆ. ಇಷ್ಟು ದಿನಗಳ ಕಾಲ ಇದ್ದ 5% ತುಟ್ಟಿ ಭತ್ಯೆಯನ್ನು 17%ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ಮೂರು ಪಟ್ಟಿಗೂ ಹೆಚ್ಚು ಭತ್ಯೆ ಸಿಗಲಿದೆ. ಈ ಮೂಲಕ ದೀಪಾವಳಿ ಹಬ್ಬಕ್ಕೂ ಮುನ್ನ ಸರ್ಕಾರಿ ನೌಕರರಿಗೆ ಕೇಂದ್ರ ಖುಷಿಯ ಸುದ್ದಿಯನ್ನು ನೀಡಿದೆ. 

ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​ ಸರ್ಕಾರದ ನಿರ್ಧಾರವನ್ನು ಬುಧವಾರ ನವದೆಹಲಿಯಲ್ಲಿ ಪ್ರಕಟಿಸಿದ್ದಾರೆ. ಒಟ್ಟೂ 50 ಲಕ್ಷ ಸರ್ಕಾರಿ ನೌಕರರು ಮತ್ತು 62 ಲಕ್ಷ ಪಿಂಚಣಿದಾರರು ಫಲಾನುಭವಿಗಳಾಗಲಿದ್ದಾರೆ.

ಈ ಹಿಂದೆ ತುಟ್ಟಿ ಭತ್ಯೆ (ಡಿಎ) 5% ನೀಡಲಾಗುತ್ತಿತ್ತು. ಆದರೀಗ 12% ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ತುಟ್ಟಿ ಭತ್ಯೆ 17% ಆಗಲಿದೆ. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್​ ಜಾವ್ಡೇಕರ್​ ಸರ್ಕಾರದ ನಿರ್ಧಾರವನ್ನು "ದೀಪಾವಳಿ ಉಡುಗೊರೆ" ಎಂದು ಕರೆದಿದ್ದಾರೆ. ಜತೆಗೆ ಡಿ.ಎ. ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 16,000 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ ಎಂದೂ ಮಾಹಿತಿ ನೀಡಿದರು.

ಲಂಡನ್ನಲ್ಲಿ ಭಾರತದ ನಾರಿ ಶಕ್ತಿ, ಯುವ ಶಕ್ತಿ, ಕ್ರೀಡಾ ಶಕ್ತಿ ಜಾಹೀರುಪಡಿಸಿದ ನೀತಾ ಅಂಬಾನಿ

ತುಟ್ಟಿ ಭತ್ಯೆ ಅಥವಾ ಡಿಯರ್​ನೆಸ್​ ಅಲೋಯನ್ಸ್​ (ಡಿಎ) ಎಂದರೆ ಸರ್ಕಾರಿ ನೌಕರರಿಗೆ, ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ನೌಕರರು ಮತ್ತು ಪಿಂಚಣಿದಾರರಿಗೆ ನೀಡುವ ಭತ್ಯೆ. ಆರ್ಥಿಕ ಕುಸಿತದ ತೀವ್ರತೆಯನ್ನು ತಡೆಯಲು ಸಾಧ್ಯವಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಭತ್ಯೆಯನ್ನು ಸರ್ಕಾರಿ ನೌಕರರಿಗೆ ನೀಡುತ್ತದೆ. ಮೂಲ ಸಂಬಳದಲ್ಲಿನ 5% ಈ ಹಿಂದೆ ಡಿ.ಎ. ಆಗಿ ನೀಡಲಾಗುತ್ತಿತ್ತು. ಆದರೆ ಈ ಬಾರಿಯ ಜಾಗತಿಕ ಆರ್ಥಿಕ ಕುಸಿತದ ಹೊಡೆತ ಭಾರತಕ್ಕೂ ಜೋರಾಗಿಯೇ ತಗುಲಿದೆ. ಈ ಹಿನ್ನೆಲೆಯಲ್ಲಿ ಭತ್ಯೆಯನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ನಿರ್ಧಾರ ತಾಳಿರುವುದು ಸ್ವಾಗತಾರ್ಹ.

ಜಾಗತಿಕ ಮಂದ ಆರ್ಥಿಕತೆ ಭಾರತದಂತಹ ಉದಯೋನ್ಮುಖ ದೇಶಗಳನ್ನು ಮತ್ತಷ್ಟು ಕಾಡಲಿದೆ; ಎಚ್ಚರಿಕೆ ನೀಡಿದ ಐಎಮ್ಎಫ್

ಜತೆಗೆ ಪ್ರಧಾನ ಮಂತ್ರಿ ಕಿಸಾನ್​ ಸಮ್ಮಾನ ನಿಧಿಯ ಲಾಭ ಪಡೆಯಲು ರೈತರು ಆಧಾರ್​ ಲಿಂಕ್​ ಮಾಡಲು ಹೆಚ್ಚಿನ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಜಾವ್ಡೇಕರ್​ ಹೇಳಿದರು. ಈ ಬಗ್ಗೆ ಕೇಂದ್ರ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದ್ದು ನವೆಂಬರ್​ 30ರ ವರೆಗೂ ಆಧಾರ್​ ಲಿಂಕ್​ ಮಾಡಲು ಹೆಚ್ಚುವರಿ ಕಾಲಾವಕಾಶ ಕಲ್ಪಿಸಲಾಗಿದೆ.
First published: October 9, 2019, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading