• Home
  • »
  • News
  • »
  • national-international
  • »
  • Deepavali 2022: ನಾಳೆ ದೀಪೋತ್ಸವಕ್ಕೆ ಮೋದಿ ಚಾಲನೆ, 14 ಲಕ್ಷ ಹಣತೆಗಳಿಂದ ಬೆಳಗಲಿದೆ ಅಯೋಧ್ಯೆ!

Deepavali 2022: ನಾಳೆ ದೀಪೋತ್ಸವಕ್ಕೆ ಮೋದಿ ಚಾಲನೆ, 14 ಲಕ್ಷ ಹಣತೆಗಳಿಂದ ಬೆಳಗಲಿದೆ ಅಯೋಧ್ಯೆ!

ಅಯೋಧ್ಯೆಯಲ್ಲಿ ದೀಪಾವಳಿ ತಯಾರಿ

ಅಯೋಧ್ಯೆಯಲ್ಲಿ ದೀಪಾವಳಿ ತಯಾರಿ

ನಾಳೆಯಿಂದ ನಾಲ್ಕು ದಿನಗಳ ಕಾಲ ಸರಯೂ ನದಿ ತೀರದಲ್ಲಿ ದೀಪೋತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ 14.5 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಲು ತಯಾರಿ ನಡೆದಿದೆ.

  • News18 Kannada
  • Last Updated :
  • Ayodhya, India
  • Share this:

ಅಯೋಧ್ಯೆ, ಉತ್ತರ ಪ್ರದೇಶ: ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಬೆಳಕಿನ ಹಬ್ಬ ದೀಪಾವಳಿ (Diwali) ಸಂಭ್ರಮ ಗರಿಗೆದರಿದೆ. ಭಾನುವಾರ ದೀಪಾವಳಿಯ ಮುನ್ನಾದಿನದಂದು ಅಯೋಧ್ಯೆಯಲ್ಲಿ 'ದೀಪೋತ್ಸವ'ವನ್ನ  (Deepotsava) ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಲಿದ್ದಾರೆ. ಅವರು ನಾಳೆ ಸಂಜೆ 5 ಗಂಟೆ ಸುಮಾರಿಗೆ ರಾಮ ಜನ್ಮಭೂಮಿಯಲ್ಲಿ (Ram Janmabhoomi) ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ಮುಂಬರುವ ರಾಮಮಂದಿರ (Ram Mandir) ನಿರ್ಮಾಣವನ್ನು ಪರಿಶೀಲಿಸಲಿದ್ದಾರೆ. ನಂತರ ಸರಯೂ ನದಿ (Sarayu River) ಘಾಟ್‌ನಲ್ಲಿ ನಡೆಯುವ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆಯಿಂದ ನಾಲ್ಕು ದಿನಗಳ ಕಾಲ ಸರಯೂ ನದಿ ತೀರದಲ್ಲಿ ದೀಪೋತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ 14.5 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನಿಸ್ ರೆಕಾರ್ಡ್ (Guinness record) ಮಾಡಲು ತಯಾರಿ ನಡೆದಿದೆ. ಈಗಾಗಲೇ ಅಯೋಧ್ಯೆಯ ಕೇಂದ್ರ ಬಿಂದು ರಾಮ್ ಪೌಡಿಯಲ್ಲಿ 9 ಲಕ್ಷ ಮತ್ತು ರಾಮ ಜನ್ಮಭೂಮಿ ಸಂಕೀರ್ಣ ಸೇರಿ ನಗರದ ಬೇರೆ ಬೇರೆ ಭಾಗದಲ್ಲಿ ಲಕ್ಷಾಂತರ ದೀಪಗಳು ಬೆಳಗಲಿದ್ದು ಇದು ಹೊಸ ದಾಖಲೆಯಾಗಲಿದೆ.


 ಈ ಬಾರಿ ದಾಖಲೆಯ ದೀಪೋತ್ಸವ


ಈ ಬಾರಿ ಅಯೋಧ್ಯೆಯಲ್ಲಿ ದೀಪೋತ್ಸವವು ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ಸೇರಲಿದೆ. ಈಗಾಗಲೇ ಗಿನ್ನಿಸ್ ರೆಕಾರ್ಡ್‌ ತಂಡ ಅಯೋಧ್ಯೆಯ ತಲುಪಿದ್ದು, ಹಣತೆಗಳ ಎಣಿಕೆ ಶುರು ಮಾಡಿದೆ. ನಾಳೆ ಈ ಎಲ್ಲ ದೀಪಗಳು ಬೆಳಗಲಿದ್ದು, ಬಳಿಕ ಅಯೋಧ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಲಿದೆ. ಈ ಹಿಂದೆ 2017 ರಲ್ಲಿ 1,80,000, 2018 ರಲ್ಲಿ 3,01,152, 2019 ರಲ್ಲಿ 5,50,000, 2020 ರಲ್ಲಿ 5,51000 ದೀಪಗಳನ್ನು ಬೆಳಗಲಾಗಿತ್ತು.  ಇದೀಗ 14.5 ಲಕ್ಷದಷ್ಟು ಹಣತೆ ಬೆಳಗಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.


ಅಯೋಧ್ಯೆಯಲ್ಲಿ ತಯಾರಿ (ಕೃಪೆ: ANI)


ನಾಳೆ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ


ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಅಯೋಧ್ಯೆ ತಲುಪಿದ ಬಳಿಕ ಪ್ರಧಾನಿ ಮಾತಾ ಸರಯೂ ನದಿಯಲ್ಲಿ ಪೂಜೆಯನ್ನೂ ಮಾಡಲಿದ್ದಾರೆ. ಸರಯೂ ಪೂಜೆಗಾಗಿ  ವಿಶೇಷ ತಯಾರಿ ಕೂಡ ಮಾಡಲಾಗಿದೆ. 8 ಮಂದಿ ವೈದಿಕ ಬ್ರಾಹ್ಮಣರ ನೇತೃತ್ವದಲ್ಲಿ ಪ್ರಧಾನಿ ಸರಯು ಪೂಜೆ ಮಾಡಲಿದ್ದಾರೆ. ನಾಳೆ ಸಂಜೆ 6:25ಕ್ಕೆ ಪ್ರಧಾನಿಯವರು ಸರಯುವಿನ ಆರತಿಯನ್ನು ನೆರವೇರಿಸಲಿದ್ದಾರೆ. 5100 ದೀಪಗಳ ವಿಶೇಷ ಆರತಿಯೊಂದಿಗೆ ಪ್ರಧಾನಿ ಮಾತಾ ಸರಯುವಿನ ಆರತಿಯನ್ನು ನೆರವೇರಿಸಲಿದ್ದಾರೆ.


ಮಹಾದ್ವಾರಗಳ ನಿರ್ಮಾಣ (ಕೃಪೆ: ANI)


ಇದನ್ನೂ ಓದಿ: President: ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ! ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ


ಕಾರ್ಯಕ್ರಮಕ್ಕೆ ಗಣ್ಯರಿಗೆ ಮಾತ್ರ ಆಹ್ವಾನ


ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸರಯು ಆರತಿ ಸಮಯದಲ್ಲಿ ಪ್ರಧಾನಿ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಇದಲ್ಲದೇ ಪ್ರಧಾನಿ ಕಾರ್ಯಾಲಯದಿಂದ ಆಯ್ಕೆಯಾದ ವ್ಯಕ್ತಿಗಳು ಮಾತ್ರ ಸರಯು ಆರತಿ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ.


ಅಯೋಧ್ದೆಯಲ್ಲಿ ಸಂಭ್ರಮ (ಕೃಪೆ: ANI)


ಅಯೋಧ್ಯೆಲ್ಲಿ ತ್ರೇತಾಯುಗದ ಮರುಸೃಷ್ಟಿ


ಇನ್ನು ರಾಮಾಯಣದ ಪ್ರಕಾರ ಶ್ರೀರಾಮ ವನವಾಸ ಮುಗಿಸಿ ಅಯೋಧ್ಯೆಗೆ ವಾಪಸ್ಸಾಗುವ ಸಂದರ್ಭದಲ್ಲಿ ಈ ಹಬ್ಬದ ಆಚರಣೆ ನಡೆದಿತ್ತು. ಇದೀಗ ಪುರಾಣಗಳಲ್ಲಿ ವರ್ಣಿಸಿರುವ ರೀತಿಯಲ್ಲೇ ಅಯೋಧ್ಯೆಯನ್ನು ಭವ್ಯವಾಗಿ ಸಿಂಗರಿಸಲಾಗುತ್ತಿದ್ದು, ತ್ರೇತಾಯುಗದ ಮರು ಸೃಷ್ಟಿ ಮಾಡಲಾಗುತ್ತಿದೆ..! ಇದಕ್ಕಾಗಿ ಅಯೋಧ್ಯಾ ಜಿಲ್ಲಾಡಳಿತ ಹಗಲಿರುಳೂ ಶ್ರಮಿಸುತ್ತಿದೆ.


ನವ ವಧುವಿನಂತೆ ಸಿಂಗಾರಗೊಂಡ ನಗರ (ಕೃಪೆ: ANI)


ಇದನ್ನೂ ಓದಿ: Solar Eclipse 2022: 27 ವರ್ಷದ ಬಳಿಕ ಮುರಿಯಲಿದೆ ಕಾಶಿ ವಿಶ್ವನಾಥ ಧಾಮದ ಈ ಪ್ರಮುಖ ಪರಂಪರೆ!


ವಿಭಿನ್ನ ಹೆಸರಿನ 30 ದ್ವಾರಗಳ ನಿರ್ಮಾಣ


ಅಯೋಧ್ಯೆ ಹೆದ್ದಾರಿಯಿಂದ ನಯಾ ಘಾಟ್‌ವರೆಗೆ 30 ವಿಭಿನ್ನ ದ್ವಾರಗಳನ್ನು ನಿರ್ಮಿಸಲಾಗಿದೆ. ಈ ದ್ವಾರಗಳಿಗೆ ವಿಭಿನ್ನ ಹೆಸರುಗಳನ್ನು ಇಡಲಾಗಿದೆ. ದೀಪೋತ್ಸವಕ್ಕೆ ಸಮಯ ಸನ್ನಿಹಿತವಾಗುತ್ತಿದ್ದಂತೆಯೇ ಸಿದ್ದತೆ ಕೂಡಾ ಚುರುಕಾಗುತ್ತಿದೆ. ಅಯೋಧ್ಯೆಗೆ ಪ್ರವೇಶ ಪಡೆಯುವ ವೇಳೆ ಹೆದ್ದಾರಿಯಲ್ಲಿ ಕಾಣ ಸಿಗುವ ರಾಮ ಸೇತು ದ್ವಾರ, ಭಾರತ ದ್ವಾರ ಸೇರಿದಂತೆ ಹಲವು ದ್ವಾರಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ರಾಮ, ಸೀತೆ, ಶಬರಿ, ಅಹಲ್ಯೆ, ಜಟಾಯು, ಹನುಮಂತ, ಲವ ಕುಶ ಸೇರಿದಂತೆ ರಾಮಾಯಣ ಕಾಲ ಘಟ್ಟದ ಹಲವು ಹೆಸರುಗಳನ್ನು ಈ ದ್ವಾರಗಳಿಗೆ ಇಡಲಾಗಿದೆ.

Published by:Annappa Achari
First published: