ಜಯಲಲಿತಾ ವಾಸವಾಗಿದ್ದ ಪೋಯಸ್​ ಗಾರ್ಡನ್​ ನಿವಾಸ ಪಡೆದ ಸೊಸೆ ದೀಪಾ ಜಯಕುಮಾರ್​

ಜಯಲಲಿತಾ ಸಾವಿನ ಬೆನ್ನಲ್ಲೇ ಅವರ ಸೊಸೆ ದೀಪಾ ಜಯಕುಮಾರ್​ ಹೆಸರು ತಮಿಳು ರಾಜಕೀಯದಲ್ಲಿ ಸಂಚಲನ ಮೂಡಿಸಿತು.

ಪೋಯಸ್​ ಗಾರ್ಡನ್​ ನಿವಾಸದಲ್ಲಿ ದೀಪಾ ಜಯಕುಮಾರ್​​

ಪೋಯಸ್​ ಗಾರ್ಡನ್​ ನಿವಾಸದಲ್ಲಿ ದೀಪಾ ಜಯಕುಮಾರ್​​

 • Share this:
  ಚೆನ್ನೈ (ಡಿ. 11):  ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ (J Jayalalita)  ಅವರು ವಾಸವಾಗಿದ್ದ ಪೋಯಸ್​ ಗಾರ್ಡನ್​ನ (Poes Garden residence) ಅವರ ನಿವಾಸವನ್ನು ಅವರ ಸೊಸೆಗೆ ಹಸ್ತಾಂತರಿಸಿ ನ್ಯಾಯಾಲಯ ಆದೇಶ ನೀಡಿದೆ. ಜೆ ಜಯಲಲಿತಾ ಅವರ ನಿವಾಸವನ್ನು ಸಂಬಂಧಿಗಳಿಗೆ ಹಸ್ತಾಂತರಿಸದೇ ಸ್ಮಾರಕ ಮಾಡಿದ ಸರ್ಕಾರದ ನಿರ್ಣಯ ಖಂಡಿಸಿ ಜೆ ಜಯಲಲಿತಾ ಅವರ ಅಣ್ಣನ ಮಗಳಾದ ದೀಪಾ ಜಯಕುಮಾರ್ (Deepa Jayakumar)​​ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಪ್ರಕರಣ ವಿಚಾರ ನಡೆಸಿದ ನ್ಯಾಯಾಲಯ ಜಯಲಲಿತಾ ವಾಸವಾಗಿದ್ದ ವೇದಾ ನಿಲಯಂ ಮನೆಯ ಕೀಲಿಗಳನ್ನು ದೀಪಾ ಜಯಕುಮಾರ್​ಗೆ ಒಪ್ಪಿಸುವಂತೆ ಚೆನ್ನೈ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.

  ಈ ಪ್ರಕರಣ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್​​​ ಏಕ ಸದಸ್ಯ ಪೀಠ ನ, 24ರಂದು ಈ ಮನೆಯ ಹಕ್ಕನ್ನು ದೀಪಾ ಜಯಕುಮಾರ್​ ಅವರಿಗೆ ನೀಡಿ ಆದೇಶಿಸಿತ್ತು. ಈ ಮೂಲಕ ದೀಪಾ ಜಯಕುಮಾರ್​ ಎಐಎಡಿಎಂಕೆ ಸರ್ಕಾರದ ವಿರುದ್ಧದ ಕಾನೂನು ಹೋರಾಟದಲ್ಲಿ ಜಯ ಪಡೆದರು.

  ಜಯಲಲಿತಾ ನಿವಾಸಲ್ಲೇ ಬದುಕುವ ಇರಾದೆ

  ಜಯಲಲಿತಾ ಮನೆಯನ್ನು ಸುಪರ್ದಿಗೆ ಪಡೆಯುವಲ್ಲಿ ಯಶಸ್ವಿಯಾದ ದೀಪಾ ಜಯಕುಮಾರ್​​ ಇಂದು ಪೋಯಾಸ್​ ಗಾರ್ಡನ್ ನಿವಾಸಕ್ಕೆ ಭೇಟಿ ನೀಡಿದರು. ಇದಕ್ಕೂ ಮುನ್ನ ಪ್ರಕರಣದಲ್ಲಿ ಜಯಿಸಿದ ಅವರು ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪುಷ್ಪ ಗೌರವ ನಮನ ಸಲ್ಲಿಸಿದರು.

  ಇದನ್ನು ಓದಿ: 5 ಗಂಟೆಗಳ ಕಾಲ ಎಲ್ಲಾ SBI ಸೇವೆಗಳು ಬಂದ್; ನೆಟ್ ಬ್ಯಾಂಕಿಂಗ್ ಕೂಡ ಸ್ಥಗಿತ; ತುರ್ತು ಕೆಲಸಗಳಿದ್ರೆ ಬೇಗ ಮಾಡ್ಕೊಳ್ಳಿ

  ಈ ವೇಳೆ ಮಾತನಾಡಿದ ಅವರು, ತಮ್ಮ ಆಂಟಿ ಇಲ್ಲದ ಮನೆ ಖಾಲಿ ಎಂಬಂತೆ ಬಾಸವಾಗುತ್ತಿದೆ. ಅವರಿಲ್ಲದ ವೇಳೆ ಮೊದಲ ಬಾರಿ ನಾನು ಈ ಮನೆಗೆ ಭೇಟಿ ನೀಡುತ್ತಿದ್ದೇವೆ. ಅವರು ಬಳಕೆ ಮಾಡುತ್ತಿದ್ದ ಪಿಠೋಪಕರಣಗಳನ್ನು ತೆಗೆದು ಹಾಕಲಾಗಿದೆ ಎಂದ ಅವರು ಇದೇ ನಿವಾಸದಲ್ಲಿ ವಾಸಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.

  ಮರೀನಾ ಸ್ಮಾರಕಕ್ಕಿಂತ ಸ್ಪೂರ್ತಿದಾಯಕವೇ ಈ ಮನೆ

  ಹಿಂದಿನ ಎಐಎಡಿಎಂಕೆ ಸರ್ಕಾರವು ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಶ್ರೀಮತಿ ದೀಪಾ ಮತ್ತು ಅವರ ಸಹೋದರ ದೀಪಕ್ ಸಲ್ಲಿಸಿದ ಅರ್ಜಿಗಳ ನಂತರ ನ್ಯಾಯಾಲಯ ನಿರ್ಧಾರ ಪ್ರಕಟಿಸಿತು. ಜಯಲಲಿತಾ ಅವರ ಆಸ್ತಿ ಅವರಿಗೆ ಸೇರಬೇಕು ಎಂದು ತೀರ್ಪು ನೀಡಿತು. ಇದೇ ವೇಳೆ ಈಗಾಗಲೇ ಮರೀನಾ ಕಡಲ ತೀರದ ಉದ್ದಕಕೂ ಜಯಲಲಿತಾ ಅವರ ನೆನಪನ್ನು ಜೀವಂತ ವಾಗಿರಿಸಲು 80 ಕೋಟಿ ವೆಚ್ಚದ ಸ್ಮಾರಕ ಇದೆ. ಈ ಮನೆಯ ಬಗ್ಗೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಕಡಲ ತೀರದಲ್ಲಿರುವ ಇರುವ ಜಯಲಲಿತಾ ಸ್ಮಾರಕಕ್ಕಿಂತ ಸ್ಪೂರ್ತಿದಾಯಕ ಕಥೆಯನ್ನು ಈ ಮನೆ ನೀಡುತ್ತದೆಯೇ ಎಂದು ಪೀಠ ಪ್ರಶ್ನಿಸಿತು

  ಇದನ್ನು ಓದಿ: ಚುನಾವಣೆ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಸರಯೂ ಕಾಲುವೆ ಯೋಜನೆ ಉದ್ಘಾಟಿಸಿದ ಪ್ರಧಾನಿ

  ಜಯಲಲಿತಾ ಸಾವಿನ ಬೆನ್ನಲ್ಲೇ ಮುನ್ನಲೆಗೆ ಬಂದಿದ್ದ ದೀಪಾ

  ಜಯಲಲಿತಾ ಸಾವಿನ ಬೆನ್ನಲ್ಲೇ ಅವರ ಸೊಸೆ ದೀಪಾ ಜಯಕುಮಾರ್​ ಹೆಸರು ತಮಿಳು ರಾಜಕೀಯದಲ್ಲಿ ಸಂಚಲನ ಮೂಡಿಸಿತು. ನೋಡಲು ಜಯಲಲಿತಾ ಅವರಂತೆ ಭಾಸವಾಗುತ್ತಿದ್ದ ಅವರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಕೂಡ ಇಳಿದಿದ್ದರು. ಇದಕ್ಕಾಗಿ ಎಂಜಿಆರ್​ ಅಮ್ಮಾ ದೀಪಾ ಫೋಂ ಅನ್ನು ಕಟ್ಟಿ, ಚುನಾವಣ ಕಣಕ್ಕೆ ಇಳಿದರು. ಆದರೆ, ರಾಜಕೀಯದಲ್ಲಿ ಎದುರು ಬಂದ ಸವಾಲುಗಳನ್ನು ಜಯಲಲಿತಾ ಎದುರಿಸಿದ ರೀತಿ ಎದುರಿಸುವಲ್ಲಿ ದೀಪಾ ವಿಫಲರಾದರು. ಅವರ ವಿರುದ್ಧ ಕೇಳಿ ಬಂದ ನಿಂದನೆಗಳು, ಸೋಲಿನ ಹಿನ್ನಲೆ ಅವರು ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಆ ಮೂಲಕ ಜಯಲಲಿತಾ ಉಸ್ತುವಾರಿಯಾಗಲು ಮುಂದಾಗಿದ್ದ ಅವರು ಮುನ್ನಲೆಗೆ ಬಂದಷ್ಟೇ ವೇಗದಲ್ಲಿ ಹಿಂದೆ ಸರಿದರು.
  Published by:Seema R
  First published: