HOME » NEWS » National-international » DECREASED IN PETROL AND DIESEL PRICE GNR

ಪೆಟ್ರೋಲ್​​-ಡೀಸೆಲ್​​ ದರದಲ್ಲಿ ಮತ್ತೆ ಇಳಿಕೆ: ಒಂದು ಲೀಟರ್​​ಗೆ ಎಷ್ಟು ಗೊತ್ತೇ?

ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಗುರುವಾರ ಪೆಟ್ರೋಲ್‌ ಬೆಲೆ 10 ಪೈಸೆ ಇಳಿಕೆಯಾಗಿತ್ತು. ಹಾಗೆಯೇ ಡೀಸೆಲ್‌ ಬೆಲೆಯೂ 6 ಪೈಸೆ ಕಡಿಮೆಯಾಗಿತ್ತು.

news18
Updated:October 7, 2019, 5:02 PM IST
ಪೆಟ್ರೋಲ್​​-ಡೀಸೆಲ್​​ ದರದಲ್ಲಿ ಮತ್ತೆ ಇಳಿಕೆ: ಒಂದು ಲೀಟರ್​​ಗೆ ಎಷ್ಟು ಗೊತ್ತೇ?
ಪೆಟ್ರೋಲ್​​ ಬಂಕ್​​​
  • News18
  • Last Updated: October 7, 2019, 5:02 PM IST
  • Share this:
ಬೆಂಗಳೂರು(ಅ.07): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯಾಗಿದೆ. ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ಪೆಟ್ರೋಲ್​​​-ಡೀಸೆಲ್​​ ದರ 12 ಪೈಸೆ ಇಳಿಕೆಯಾಗಿದ್ದು, ವಾಹನ ಸವಾರರಿಗೆ ಮತ್ತಷ್ಟು ರಿಲೀಫ್​​ ಸಿಕ್ಕಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್​​ ಪೆಟ್ರೋಲ್​​ ಬೆಲೆ 73.76 ರೂ., ಡೀಸೆಲ್ ಬೆಲೆ ಲೀಟರ್​​ಗೆ 66.91 ರೂ. ಆಗಿದೆ.

ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್​​ ಲೀಟರ್​ ದರ 76.22 ರೂ, ಮತ್ತು ಪೆಟ್ರೋಲ್​​ಗೆ 69.14 ರೂ. ನಿಗದಿಯಾಗಿದೆ. ಸಿಎಂ ಮಮತಾ ಬ್ಯಾನರ್ಜಿ ನೇತತ್ವದ ಟಿಎಂಸಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್​​ ದರ 76.40 ರೂ.,  ಡೀಸೆಲ್​​​ 69.27 ರೂ. ಆಗಿದೆ. ಅಲ್ಲದೇ  ಮುಂಬೈನಲ್ಲಿ ಪೆಟ್ರೋಲ್​​ ಮತ್ತು ಡೀಸೆಲ್​​ ದರ ಲೀಟರ್​​ಗೆ  79.37 ರೂ. ಮತ್ತು  70.14 ರೂ. ಇದೆ.  ಹಾಗೆಯೇ ಚೆನ್ನೈನಲ್ಲಿ ಲೀಟರ್​​ ಪೆಟ್ರೋಲ್​​ಗೆ 76.62 ರೂ. ಮತ್ತು ಡೀಸೆಲ್​​ಗೆ 70.69 ರೂ. ಆಗಿದೆ.  ಹೈದರಾಬಾದ್​​ನಲ್ಲಿ ಪ್ರತಿ ಲೀಟರ್​​​ ಪೆಟ್ರೋಲ್​​ಗೆ 78.43 ರೂ., ಮತ್ತು ಡೀಸೆಲ್​​​ಗೆ 72.96 ರೂ. ಆಗಿದೆ.

ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಗುರುವಾರ ಪೆಟ್ರೋಲ್‌ ಬೆಲೆ 10 ಪೈಸೆ ಇಳಿಕೆಯಾಗಿತ್ತು. ಹಾಗೆಯೇ ಡೀಸೆಲ್‌ ಬೆಲೆಯೂ 6 ಪೈಸೆ ಕಡಿಮೆಯಾಗಿತ್ತು. ಸದ್ಯದ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಸಂಸ್ಥೆ ಮಾಹಿತಿ ಪ್ರಕಾರ, ಮುಂದಿನ ವಾರಗಳಲ್ಲಿಯೂ ಪೆಟ್ರೋಲ್​​-ಡೀಸೆಲ್​​ ಬೆಲೆ ಇನ್ನಷ್ಟು ಇಳಿಕೆಯಾಗಲಿದೆ ಎನ್ನಲಾಗುತ್ತಿದೆ.

ಈ ಹಿಂದೆ ಸೆಪ್ಟೆಂಬರ್​​ 14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್‌ ದಾಳಿ ನಡೆದಿತ್ತು. ಈ ಡ್ರೋನ್​​ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಿಢೀರ್​​ ಏರಿಕೆಯಾಗಿತ್ತು. ತೈಲ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡ ಕಾರಣದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಪರಿಣಾ ಬೀರಿತ್ತು. ಇದರಿಂದಲೇ ಬೆಲೆ ಏರಿಕೆ ಕಂಡಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ, ಹರಿಯಾಣದ ನಂತರ ಕರ್ನಾಟಕ ಕಾಂಗ್ರೆಸ್​ನೊಳಗೆ ಕದನ; ಸೋನಿಯಾ ಆಪ್ತರು VS ರಾಹುಲ್​ ಗಾಂಧಿ ಟೀಂ

ಇದೀಗ ಎಲ್ಲಾ ಸಮಸ್ಯೆಯೂ ಸರಿಪಡಿಸಲಾಗಿದೆ. ಕಚ್ಚಾ ತೈಲದ ಬೆಲೆಯೂ ತುಸು ಇಳಿಕೆಯಾಗಿದೆ. ಹಾಗಾಗಿ ಪೆಟ್ರೋಲ್‌ ಬೆಲೆಯೂ ಇಳಿಯುವ ನಿರೀಕ್ಷೆ ಹೆಚ್ಚಿದ ಎಂದು ಇಂಡಿಯನ್‌ ಆಯಿಲ್‌ನ ಅಧ್ಯಕ್ಷ ಸಂಜೀವ್‌ ಸಿಂಗ್‌ ಹೇಳಿದ್ದಾರೆ.

ಯಾಕೆ ಬೆಲೆ ಕಡಿಮೆ?: ಕಳೆದ ಐದು ದಿನಗಳಿಂದ ಪೆಟ್ರೋಲ್-ಡೀಸೆಲ್​​ ಬೆಲೆಗಳು ಇಳಿಕೆಯಾಗುತ್ತಿರವುದನ್ನು ನಾವು ಗಮನಿಸಬಹುದು. ಪೆಟ್ರೋಲ್ ಬೆಲೆ ಇಳಿಕೆಗೆ ಮಾಮೂಲಿಯಂತೆ ಕಾರಣವಾಗಿರುವುದು ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯಲ್ಲಿ ಆಗುತ್ತಿರುವ ಗಣನೀಯ ಇಳಿಕೆ. ಪ್ರಮುಖ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್​ನಲ್ಲಿ ಬ್ಯಾರೆಲ್ ತೈಲವು 59.23 ಡಾಲರ್​ಗೆ ಇಳಿಕೆಯಾಗಿದೆ. ಹಾಗೆಯೇ ಡಬ್ಲ್ಯೂಟಿಐ ಕ್ರೂಡ್​ನಲ್ಲಿನ ಬ್ಯಾರೆಲ್ ತೈಲವು 50.53 ಡಾಲರ್ ಆಗಿದೆ. ಮುಂದಿನ ಕೆಲ ದಿನಗಳವರೆಗೂ ಈ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.------------
First published: October 7, 2019, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading