ಅ.2ರೊಳಗೆ ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸದಿದ್ದರೆ ಜಲ ಸಮಾಧಿಯಾಗುತ್ತೇನೆ; ಪರಮಹಂಸ ಆಚಾರ್ಯ

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೆ ರಾಜಕೀಯ ಪಕ್ಷಗಳು ಅದಕ್ಕಾಗಿ ಸಜ್ಜಾಗುತ್ತಿದ್ದು, ಈ ಸಮಯದಲ್ಲಿ ಪರಮಹಂಸ ಆಚಾರ್ಯ ಅವರ ಹೇಳಿಕೆಗಳು ಹೊರ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪರಮಹಂಸ ಆಚಾರ್ಯ.

ಪರಮಹಂಸ ಆಚಾರ್ಯ.

 • Share this:
  ನವ ದೆಹಲಿ; ಮಹಾತ್ಮ ಗಾಂಧೀಜಿಯವರ (Mahatma Gandhi) ಜನ್ಮ ದಿನಾಚರಣೆಯ ದಿನವಾದ ಅಕ್ಟೋಬರ್ 2 ರೊಳಗೆ ಭಾರತವನ್ನು 'ಹಿಂದೂ ರಾಷ್ಟ್ರ' (Hindu Rashtra) ಎಂದು ಘೋಷಿಸುವಂತೆ, ಜಗದ್ಗುರು ಪರಮಹಂಸ ಆಚಾರ್ಯ ಮಹಾರಾಜ್ (Paramhans Acharya Maharaj) ಅವರು ಒಕ್ಕೂಟ ಸರ್ಕಾರವನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮಂಗಳವಾರ ಒತ್ತಾಯಿಸಿದ್ದಾರೆ. ಅಲ್ಲದೆ, ಒಂದು ವೇಳೆ ಕೇಂದ್ರ ಸರ್ಕಾರ (Central Government) ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಸರಯೂ ನದಿಯಲ್ಲಿ (Sarayu River) 'ಜಲ ಸಮಾಧಿ' ಆಗುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. "ಅಕ್ಟೋಬರ್ 2 ರೊಳಗೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು. ಇಲ್ಲವಾದಲ್ಲಿ ನಾನು ಸರಯು ನದಿಯಲ್ಲಿ ಜಲ ಸಮಾಧಿ ಆಗುತ್ತೇನೆ" ಎಂದು ಅವರು ಹೇಳಿದ್ದಾರೆ.  ಇಷ್ಟೆ ಅಲ್ಲದೆ, ಭಾರತದಲ್ಲಿ ವಾಸಿಸುತ್ತಿರುವ ಎಲ್ಲಾ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ರಾಷ್ಟ್ರೀಯತೆಯನ್ನು ಅಧೀಕೃತವಾಗಿ ಕೊನೆಗೊಳಿಸಬೇಕು ಎಂದು ಅವರು ಒಕ್ಕೂಟ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.

  ಪರಮಹಂಸ ಆಚಾರ್ಯ ಅವರ ಬೇಡಿಕೆಯನ್ನು ಬೆಂಬಲಿಸಿ, ‘ಹಿಂದೂ ಸನಾತನ ಧರ್ಮ ಸಂಸದ್’ ಅನ್ನು ಸಂಘಟಿಸುವುದಾಗಿ ಅಯೋಧ್ಯೆಯ ಸ್ವಾಮೀಜಿಗಳ ಸಮುದಾಯ ಹೇಳಿದೆ. ಪರಮಹಂಸ ಆಚಾರ್ಯ ಅವರು ಈ ಹಿಂದೆ ಕೂಡಾ 15 ದಿನಗಳ ಕಾಲ ಆಮರಣಾಂತ ಉಪವಾಸವನ್ನು ಕೈಗೊಂಡಿದ್ದರು. ನಂತರ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ತೆರಳಿ ಅವರಿಗೆ ಭರವಸೆ ನೀಡಿದ ನಂತರ ಉಪವಾಸವನ್ನು ಕೊನೆಗೊಳಿಸಿದ್ದರು.

  ಇದನ್ನೂ ಓದಿ: Punjab Politics| ಪಂಜಾಬ್ ಬಿಕ್ಕಟ್ಟು; ನವಜೋತ್ ಸಿಂಗ್ ಸಿಧು ಮನವರಿಕೆಗೆ ಮುಂದಾಗದ ಸಿಎಂ ಚರಣಜೀತ್ ಸಿಂಗ್ ಚನ್ನಿ!

  ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೆ ರಾಜಕೀಯ ಪಕ್ಷಗಳು ಅದಕ್ಕಾಗಿ ಸಜ್ಜಾಗುತ್ತಿದ್ದು, ಈ ಸಮಯದಲ್ಲಿ ಪರಮಹಂಸ ಆಚಾರ್ಯ ಅವರ ಹೇಳಿಕೆಗಳು ಹೊರ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.
  Published by:MAshok Kumar
  First published: