‘ನಾಳೆ ಮಧ್ಯಾಹ್ನದೊಳಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿ‘: ಬಿಜೆಪಿಗೆ ಸಿಎಂ ಅರವಿಂದ ಕೇಜ್ರಿವಾಲ್ ಸವಾಲ್​​

ಬಿಜೆಪಿಗೆ ವೋಟ್​​ ಮಾಡಬೇಕಾದರೆ ದೆಹಲಿಗರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಗೊತ್ತಾಗಬೇಕಿದೆ. ಫಲಿತಾಂಶದ ಪ್ರಕಟವಾದ ಬಳಿಕ ಅಸಮರ್ಥ ರಾಜಕಾರಣಿಯನ್ನು ಮುಖ್ಯಮಂತ್ರಿ ಮಾಡಿದರೆ ದೆಹಲಿ ಜನತೆಗೆ ಬಗೆದ ದ್ರೋಹವಾಗುತ್ತದೆ- ಅರವಿಂದ್​ ಕೇಜ್ರಿವಾಲ್​​

ಸಿಎಂ ಅರವಿಂದ ಕೇಜ್ರಿವಾಲ್

ಸಿಎಂ ಅರವಿಂದ ಕೇಜ್ರಿವಾಲ್

 • Share this:
  ನವದೆಹಲಿ(ಫೆ.04): ದೆಹಲಿ ವಿಧಾನಸಭಾ ಚುನಾವಣೆಗೆ ಮೂರು ದಿನ ಬಾಕಿಯಿರುವ ಹೊತ್ತಲ್ಲೇ ಬಿಜೆಪಿಗೆ ತಾಕತ್ತಿದ್ದರೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲಿ ಎಂದು ಸಿಎಂ ಅರವಿಂದ್​​​ ಕೇಜ್ರಿವಾಲ್​​ ಸವಾಲ್​​ ಎಸೆದಿದ್ದಾರೆ. ಯಾರನ್ನಾದರೂ ಸರಿಯೇ ನಾಳೆ ಮಧ್ಯಾಹ್ನ 1 ಗಂಟೆಯೊಳಗೆ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ. ಒಂದು ವೇಳೆ ಬಿಜೆಪಿ ನನ್ನ ಸವಾಲು ಸ್ವೀಕರಿಸದಿದ್ದರೆ ಮತ್ತೊಂದು ಸುದ್ದಿಗೋಷ್ಠಿ ಕರೆಯುತ್ತೇನೆ. ಈ ವಿಚಾರದ ಕುರಿತಂತೆ ಯಾರೊಂದಿಗೆ ಬೇಕಾದರೂ ಚರ್ಚಿಸಲು ಸಿದ್ದನಿದ್ದೇನೆ ಎಂದರು.

  ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಅರವಿಂದ್​ ಕೇಜ್ರಿವಾಲ್​, ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದ್ದಾರೆ. ಆದರೀಗ ಬಿಜೆಪಿಗೆ ವೋಟ್​​ ಮಾಡಬೇಕಾದರೆ ದೆಹಲಿಗರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಗೊತ್ತಾಗಬೇಕಿದೆ. ಫಲಿತಾಂಶದ ಪ್ರಕಟವಾದ ಬಳಿಕ ಅಸಮರ್ಥ ರಾಜಕಾರಣಿಯನ್ನು ಮುಖ್ಯಮಂತ್ರಿ ಮಾಡಿದರೆ ದೆಹಲಿ ಜನತೆಗೆ ಬಗೆದ ದ್ರೋಹವಾಗುತ್ತದೆ. ಹಾಗಾಗಿ ನಾಳೆ ಮಧ್ಯಾಹ್ನದ ವೇಳೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಅಮಿತ್​​ ಶಾ ಘೋಷಿದಲಿ ಎಂದರು.

  ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಲ್ಲೇ ದೆಹಲಿ ವಿಧಾನಸಭಾ ಚುನಾವಣೆ ದಿನಗಣನೆ ಶುರುವಾಗಿದೆ. ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​​​​ ನೇತೃತ್ವದ ಆಪ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್​ ಸೇರಿದಂತೆ ಬಿಜೆಪಿ ಭಾರೀ ಸರ್ಕಸ್​​ ನಡೆಸುತ್ತಿವೆ. ಈಗಾಗಲೇ ಆಪ್​​ ವಿರುದ್ಧ ಸಮರ ಸಾರಲು ಬಿರುಸಿನ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನವೂ ಬಿಜೆಪಿ ಪರ ಮತಬೇಟೆ ಮುಂದುವರಿಸಿದ್ದಾರೆ.

  ಇದನ್ನೂ ಓದಿ: ಫೆ.17ಕ್ಕೆ ವಿಧಾನ ಪರಿಷತ್ ಚುನಾವಣೆ: ನಾಳೆ ಡಿಸಿಎಂ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆ

  ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಬಿಜೆಪಿ, ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂಬಂತೆ ಆಯಿತು. ಬಳಿಕ ಜಾರ್ಖಂಡ್​ನಲ್ಲಿ ಇದ್ದ ಅಧಿಕಾರ ಮರೀಚಿಕೆಯಾದ ಬಳಿಕ ಬಿಜೆಪಿಗೆ ಈಗ ಗೆಲುವು ಅನಿವಾರ್ಯವಾಗಿದೆ. ದೆಹಲಿಯಲ್ಲಿ ಗೆದ್ದು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ತಕ್ಕ ಉತ್ತರ ನೀಡಬೇಕು. ಜನ ಈ ಕಾಯ್ದೆಗಳ ಪರ ಇದ್ದಾರೆ ಎಂದು ಬಿಂಬಿಸಬೇಕು ಎಂಬುದು ಬಿಜೆಪಿ ಲೆಕ್ಕಾಚಾರ. ಹಾಗಾಗಿ ದೆಹಲಿ ಚುನಾವಣೆ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದೆ.

  ಇದಲ್ಲದೆ ಆಡಳಿತರೂಢ ಆಮ್ ಆದ್ಮಿ ಪಕ್ಷದ ವಿರುದ್ಧ ಸೆಣಸಿ ಗೆಲ್ಲುವುದು ಕಷ್ಟ. ಆಮ್ ಆದ್ಮಿ ಪಕ್ಷದ ಸರ್ಕಾರ ಮಾಡಿರುವ ಕೆಲಸಗಳ ಮುಂದೆ, ಆ ಪಕ್ಷದ ಸಂಘಟನೆ ಮುಂದೆ ತಮ್ಮ ಪಕ್ಷದ ಸಾಧನೆ ಮತ್ತು ಸಂಘಟನೆ ಸಣ್ಣವು. ಅರವಿಂದ ಕೇಜ್ರಿವಾಲ್ ಅವರನ್ನು ಎದುರಿಸಬಲ್ಲ ಸಮರ್ಥ ನಾಯಕತ್ವ ತಮ್ಮ ಪಕ್ಷದಲ್ಲಿ ಇಲ್ಲ ಎಂಬ ಸಂಗತಿಗಳು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದಲೇ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ನರೇಂದ್ರ ಮೋದಿ ಅವರನ್ನೇ ಚುನಾವಣಾ ಪ್ರಚಾರಕ್ಕಿಳಿಸಿದೆ. ಈ ಮಧ್ಯೆ ಸಿಎಂ ಅರವಿಂದ್​​ ಕೇಜ್ರಿವಾಲ್​​ ಮಾತ್ರ ದೆಹಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿ ಎನ್ನುತ್ತಾ ಅಮಿತ್​​ ಶಾ ಮತ್ತು ಪ್ರಧಾ ಮೋದಿಯವರ ಕಾಲೆಳೆಯುವ ಕೆಲಸ ಮಾಡುತ್ತಿದ್ಧಾರೆ.
  First published: