• Home
  • »
  • News
  • »
  • national-international
  • »
  • Areca Nut: ಭೂತಾನ್ ದೇಶದಿಂದ ಹಸಿ ಅಡಿಕೆ ಆಮದು, ರಾಜ್ಯ ಅಡಿಕೆ ಬೆಳೆಗಾರರಲ್ಲಿ ಆತಂಕ

Areca Nut: ಭೂತಾನ್ ದೇಶದಿಂದ ಹಸಿ ಅಡಿಕೆ ಆಮದು, ರಾಜ್ಯ ಅಡಿಕೆ ಬೆಳೆಗಾರರಲ್ಲಿ ಆತಂಕ

Bhutan

Bhutan

ಚಿಕ್ಕಮಗಳೂರು(Chikkamagaluru), ಹಾಸನ (Hasan) ಮತ್ತು ಶಿವಮೊಗ್ಗ (Shivmogga) ಜಿಲ್ಲೆ ಸೇರಿದಂತೆ ಇತರೆ ಭಾಗಗಳಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುತ್ತಾರೆ ಮತ್ತು ಇಲ್ಲಿನ ರೈತರ ಮುಖ್ಯ ಆದಾಯ ಕೂಡ ಅಡಿಕೆಯಿಂದಲೇ ಬರುವಂತದ್ದು. ಹೀಗಾಗಿ ಇಲ್ಲಿನ ರೈತರು ತಮ್ಮ ಅಡಿಕೆ ಬಗ್ಗೆ ಆತಂಕ ಹೊರ ಹಾಕಿದ್ದು, ಅಡಿಕೆ ಒಕ್ಕೂಟವು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿವೆ.

ಮುಂದೆ ಓದಿ ...
  • Share this:

ನೆರೆಯ ಭೂತಾನ್ (Bhutan) ದೇಶದಿಂದ ಭಾರತಕ್ಕೆ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ( Central Govt) ನಿರ್ಧಾರಕ್ಕೆ ಕರ್ನಾಟಕದ ಹಲವು ಜಿಲ್ಲೆಗಳ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು(Chikkamagaluru), ಹಾಸನ (Hasan) ಮತ್ತು ಶಿವಮೊಗ್ಗ (Shivmogga) ಜಿಲ್ಲೆ ಸೇರಿದಂತೆ ಇತರೆ ಭಾಗಗಳಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುತ್ತಾರೆ ಮತ್ತು ಇಲ್ಲಿನ ರೈತರ ಮುಖ್ಯ ಆದಾಯ ಕೂಡ ಅಡಿಕೆಯಿಂದಲೇ ಬರುವಂತದ್ದು. ಹೀಗಾಗಿ ಇಲ್ಲಿನ ರೈತರು ತಮ್ಮ ಅಡಿಕೆ ಬಗ್ಗೆ ಆತಂಕ ಹೊರ ಹಾಕಿದ್ದು, ಅಡಿಕೆ ಒಕ್ಕೂಟವು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿವೆ.


ಕೇಂದ್ರದ ಕ್ರಮಕ್ಕೆ ಖಂಡನೆ
ವಿಶೇಷವಾಗಿ, ಡಿಜಿಎಫ್‌ಟಿ (ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್) ಸುತ್ತೋಲೆ ಪ್ರಕಾರ ಕನಿಷ್ಠ ಆಮದು ದರವನ್ನು ಅನ್ವಯಿಸದೆಯೇ ದೇಶಕ್ಕೆ ಅಡಿಕೆ ಆಮದು ಮಾಡುವುದು ರಾಜ್ಯದ ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತ ಆಗಿದೆ. ಈಗಾಗಲೇ ಅಡಿಕೆ ಮರಗಳಿಗೆ, ಬೆಳೆಗಳಿಗೆ ತಗುಲಿರುವ ರೋಗ ಅಡಿಕೆ ಕೃಷಿಯನ್ನು ಸಾಕಷ್ಟು ನಷ್ಟಕ್ಕೆ ಸಿಲುಕಿಸಿದೆ. ಇದರ ಮಧ್ಯೆ ಸರ್ಕಾರದ ಈ ಕ್ರಮ ನಿಜಕ್ಕೂ ಖಂಡನೀಯ ಎನ್ನುತ್ತಿದ್ದಾರೆ ರೈತರು.


ಇಳುವರಿ ಕುಸಿತದ ಬೆನ್ನಲ್ಲೇ ರಫ್ತು ಬರೆ
ಹಳದಿ ರೋಗ, ಚುಕ್ಕೆ ರೋಗ, ಅಡಿಕೆ ಕೊಳೆ, ಅಡಿಕೆ ಉದುರುವಿಕೆ ಸೇರಿ ಹಲವು ಸಮಸ್ಯೆಗಳನ್ನು ರೈತರು ಈಗಾಗ್ಲೇ ಅನುಭವಿಸುತ್ತಿದ್ದಾರೆ. ಸದ್ಯ ಕೇಂದ್ರದ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕೇಂದ್ರದ ವಿರುದ್ಧ ಶೃಂಗೇರಿ ತಾಲೂಕಿನಲ್ಲಿ ಅಡಿಕೆ ಬೆಳೆಗಾರರಾದ ಕೆ ಸುಂದ್ರೇಶ್ ಗೌಡ ಗುಡುಗಿದ್ದಾರೆ. ನಮ್ಮ 10 ಎಕರೆ ಅಡಿಕೆ ತೋಟದಲ್ಲಿ ನಾನು ಸಾಮಾನ್ಯವಾಗಿ, 120 ಕ್ವಿಂಟಾಲ್ ಇಳುವರಿ ತೆಗೆಯುತ್ತೇನೆ ಆದರೆ ಈ ಬಾರಿ ಹೊಸ ಹೊಸ ರೋಗಗಳಿಂದ ನಾನು ಸುಮಾರು 50 ಕ್ವಿಂಟಾಲ್‌ ಇಳುವರಿಯನ್ನು ಕಳೆದುಕೊಂಡಿದ್ದೇನೆ. ಮೊದಲೇ ಬೆಳೆ ಇಳುವರಿ ಕಡಿತ ಅನುಭವಿಸುತ್ತಿರುವ ನಮಗೆ ಇದು ದೊಡ್ಡ ಅನ್ಯಾಯ ಎಂದಿದ್ದಾರೆ.


ಇದನ್ನೂ ಓದಿ: ಯೋಗಿ ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಣೆ ಭರ್ಜರಿ ಸಿದ್ಧತೆ


"ಪರಿಸ್ಥಿತಿ ದುರ್ಬಳಕೆ ಆಗಬಾರದು"
ಮತ್ತೊಬ್ಬ ಅಡಿಕೆ ಕೃಷಿಕರಾದ ಕೆ.ವಿ.ಅರುಣ್ ಮಾತನಾಡಿ, ಅಧಿಕಾರಿಗಳು
ಆಮದು ಮಾಡಿದ ಬೆಳೆಗಳ ಹಕ್ಕು ದೇಶೀಯ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಈ ಪರಿಸ್ಥಿತಿಯನ್ನು ವ್ಯಾಪಾರಿಗಳು ಬೆಲೆಯನ್ನು ಕಡಿಮೆ ಮಾಡಲು ಬಳಸಿಕೊಳ್ಳುತ್ತಾರೆ. ಸರ್ಕಾರಕ್ಕೆ, ಅಧಿಕಾರಿಗಳಿಗೆ ನಮ್ಮ ಬಗ್ಗೆ ನಿಜವಾದ ಕಾಳಜಿ ಇದ್ದರೆ ವರ್ತಕರು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ಕ್ರಮಕೈಗೊಳ್ಳಬೇಕು. ಮತ್ತು ರೈತರಿಗೆ ನಿಜವಾಗಿಯೂ ಬೇಕಾಗಿರುವುದು ಬೆಳೆಗೆ ತಕ್ಕ ನ್ಯಾಯಯುತ ಬೆಲೆ, ಅದನ್ನು ಕೊಡಿಸಲು ಪ್ರಯತ್ನಿಸಬೇಕು ಎಂದು ಅರುಣ್ ಹೇಳಿದರು.


ಭಾರತದಲ್ಲಿ ಅಡಿಕೆ ಉತ್ಪಾದನೆ ವ್ಯಾಪಕವಾಗಿದ್ದರೂ, ಏಕೆ ಈ ಕ್ರಮ?
ರಾಜ್ಯದಲ್ಲಿ ಕೊಯ್ಲು ಮಾಡುವ ಅಡಿಕೆ ಪ್ರಮಾಣವು 2015 ಮತ್ತು 2020 ರ ನಡುವೆ 55% ಹೆಚ್ಚಾಗುವುದರ ಜೊತೆಗೆ ವಾಣಿಜ್ಯ ಬೆಳೆಗಳ ಅತಿದೊಡ್ಡ ಉತ್ಪಾದಕವಾಗಿ ಕರ್ನಾಟಕ ಹೊರಹೊಮ್ಮುತ್ತಿದೆ. ಇನ್ನೂ 2015-16ರಲ್ಲಿ ದೇಶದಲ್ಲಿ 7.1 ಲಕ್ಷ ಟನ್‌ನಷ್ಟು ಅಡಿಕೆ ಉತ್ಪಾದನೆ ಆಗಿದೆ. ಮತ್ತು 2019-20ರಲ್ಲಿ ಉತ್ಪಾದನೆ 11 ಲಕ್ಷ ಟನ್‌ಗೆ ಏರಿಕೆ ಕಂಡಿದೆ. ಭಾರತದಲ್ಲಿ ಅಡಿಕೆ ಬೆಳೆಗೆ ಯಾವುದೇ ಕೊರತೆ ಇಲ್ಲದ ಈ ಸಮಯದಲ್ಲಿ ಕೇಂದ್ರ ಏಕೆ ಭೂತಾನ್‌ನಿಂದ ಅಡಿಕರ ಬೆಳೆಯನ್ನು ರಫ್ತು ಮಾಡಿಕೊಳ್ಳುತ್ತಿದೆ ಎಂಬುವುದೇ ಸದ್ಯ ಇರುವ ದೊಡ್ಡ ಪ್ರಶ್ನೆ.
ಮಲೆನಾಡು ಭಾಗದ ಅಡಿಕೆ ಮಾರ್ಕೆಟಿಂಗ್ ಸಹಕಾರಿ ಸೊಸೈಟಿ ಉಪಾಧ್ಯಕ್ಷ
ಎಚ್.ವಿ.ಮಹೇಶ್ ಅವರು, ಕೇಂದ್ರ ಸರ್ಕಾರವು ರೈತರ ಹಿತ ಕಾಪಾಡಲು ಆದೇಶವನ್ನು ಹಿಂಪಡೆಯಬೇಕು. "ನಾನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ" ಎಂದು ಮಹೇಶ್ ಹೇಳಿದರು.


ಇದನ್ನೂ ಓದಿ: ಸೀರೆ ಉಟ್ಟ ಮಹಿಳೆಯರ ಮೇಲೆ ದಾಳಿ; ಅಮೆರಿಕದಲ್ಲಿ‌ ಹೆಚ್ಚಿದ ಹಿಂದೂ ವಿರೋಧಿ ಚಟುವಟಿಕೆ


ಕೇಂದ್ರದ ಕ್ರಮಕ್ಕೆ ವಿರೋಧ ಪಕ್ಷಗಳಿಂದ ಟೀಕೆ
ಭೂತಾನ್‌ನಿಂದ ಹಸಿರು ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಟುವಾಗಿ ಟೀಕಿಸಿದ್ದು, “ಇಚ್ಛಾಶಕ್ತಿಯ ನೀತಿಯಿಂದಾಗಿ ಅಡಿಕೆ ಬೆಳೆಗಾರರ ​​ಜೀವನವು ಅವನತಿ ಹೊಂದಲಿದೆ” ಎಂದು ಹೇಳಿದ್ದಾರೆ. ಬೆಳೆ ಹಾಗೂ ಅಡಿಕೆ ಮರಗಳಿಗೆ ನಾನಾ ರೋಗಗಳು ತಗುಲಿರುವುದರಿಂದ ಅಡಿಕೆ ಬೆಳೆಗಾರರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ದ್ರೋಹ ಬಗೆದಿದೆ ಎಂದರು.


ರೈತರು ಆತಂಕ ಪಡುವ ಅಗತ್ಯವಿಲ್ಲ - ಆರಗ ಜ್ಞಾನೇಂದ್ರ
ಇನ್ನೂ ಭೂತಾನ್ ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿ ಕೊಳ್ಳಲು ಅವಕಾಶ ನೀಡಿದ ಕೇಂದ್ರದ ನಿರ್ಧಾರದಿಂದ, ದೇಶಿಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

First published: