Lottery Surprise: ವಿಪರೀತ ಸಾಲ, ಮನೆ ಮಾರುವ ಬರೀ 2 ಗಂಟೆ ಮುನ್ನ ಹೊಡೆಯಿತು ಕೋಟಿ ಲಾಟರಿ!

Lottery News: ಕೇರಳದ ಆ ಕುಟುಂಬ ಸಾಲದಲ್ಲಿ ಸಿಕ್ಕಿ ಅಕ್ಷರಶಃ ನರಳುತ್ತಿತ್ತು. ಇನ್ನು ಬೇರೆ ದಾರಿಯೇ ಇಲ್ಲ ಎನ್ನುವ ಸ್ಥಿತಿಗೆ ತಲುಪಿದ್ದ ಕುಟುಂಬ ಮನೆ ಮಾರಾಟ ಮಾಡಲು ನಿರ್ಧಾರ ಮಾಡಿತ್ತು. ಇನ್ನೇನು ಮನೆ ಮಾರಿಬಿಟ್ಟರು ಎನ್ನುವಷ್ಟರಲ್ಲಿ 1 ಕೋಟಿ ರುಪಾಯಿಯ ಲಾಟರಿ ಹೊಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಿರುವನಂತಪುರಂ(ಜು.26): ಭಾರತದಲ್ಲಿ ಮಧ್ಯಮ ವರ್ಗದ ಜನ ಹಾಗೂ ಬಡ ಜನರ ಸಂಖ್ಯೆ ಹೆಚ್ಚಿದೆ. ಎಷ್ಟೇ ಕಷ್ಟಪಟ್ಟು ದುಡಿದರೂ ದುಬಾರಿ ದುನಿಯಾದಲ್ಲಿ ಬದುಕುವುದು ದೊಡ್ಡ ಸವಾಲು. ಇನ್ನು ಮಧ್ಯ ವರ್ಗದ ಕುಟುಂಬಗಳ ಪಾಡು ಹೇಳ ತೀರದ್ದು. ಶಿಕ್ಷಣ, ಔಷಧ, ಆಹಾರದಂತಹ ಅಗತ್ಯಗಳಿಗಾಗಿ ಬಹಳಷ್ಟು ಕಷ್ಟಪಡಬೇಕಾಗುತ್ತದೆ. ಕೇರಳದಲ್ಲಿ ಕುಟುಂಬವೊಂದು ಕಷ್ಟಗಳಿಂದ ನರಳುತ್ತಿತ್ತು. ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡ ಕುಟುಂಬ ಹೇಗಾದರೂ ಸರಿ ಸಾಲನ ಸುಳಿಯಿಂದ ತಪ್ಪಿಸಿಕೊಂಡು ಬದುಕಬೇಕೆಂದು ಸ್ವಂತ ಮನೆಯನ್ನೇ ಮಾರಾಟ ಮಾಡಲು ನಿರ್ಧಾರ ಮಾಡಿತ್ತು. ಆದರೆ ಅವರ ಪಾಲಿಗೆ ವಿಧಿ ಇನ್ನೂ ಚೆನ್ನಾಗಿರುವುದನ್ನೇ ಕಾಯ್ದಿರಿಸಿತ್ತು. ಪ್ರೀತಿಯ ಮನೆಯನ್ನು ಮಾರಾಟ ಮಾಡಿ ಅದು ಪರರ ಪಾಲಾಗಲು ಬರೀ 2 ಗಂಟೆ ಬಾಕಿ ಇತ್ತು. ಆದರೆ ಅಷ್ಟು ಹೊತ್ತಿಗೆ ಈ ಕುಟುಂಬಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿಯ ಲಾಟರಿ ಹೊಡೆದಿದೆ.


ಇದು ಕೇಳುವುದಕ್ಕೆ ಅಚ್ಚರಿಯಾದರೂ ಕೇರಳದಲ್ಲಿ ನಡೆದ ನಿಜ ಘಟನೆ ಇದು. ಕೆಲವೊಮ್ಮೆ ದೇವರು ನಾವು ಬಯಸ್ಸಿದ್ದಂಕಿತಲೂ ಸ್ವಲ್ಪ ಉತ್ತಮವಾದುದನ್ನೇ ಕೊಡುತ್ತಾನೆ ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಈ ಕುಟುಂಬದ ಪಾಲಿಗೆ ಈ ಮಾತು ಸತ್ಯವಾಗಿದೆ.

1 ಕೋಟಿ ಲಾಟರಿ ಬಹುಮಾನ

ಸಾಲದ ಸುಳಿಯಲ್ಲಿ ಸಿಲುಕಿದ್ದ ಕಾಸರಗೋಡಿನ ಪೇಂಟರ್‌ಗೆ ಮಂಜೇಶ್ವರದಲ್ಲಿ ತಾನು ಹೊಸದಾಗಿ ನಿರ್ಮಿಸಿದ ಮನೆಗೆ ಮಾರಾಟ ಮಾಡಲು ಟೋಕನ್ ಹಣ ಪಡೆಯುವ ಎರಡು ಗಂಟೆಗಳ ಮೊದಲು 1 ಕೋಟಿ ರೂಪಾಯಿ ಲಾಟರಿ ಬಹುಮಾನ ಲಭಿಸಿದೆ. ನಾನು ನಮ್ಮ ಮನೆಯನ್ನು ಉಳಿಸಬಲ್ಲೆ. ನನಗೆ ಈಗಲೂ ಇದನ್ನು ನಂಬಲಾಗುತ್ತಿಲ್ಲ’ ಎಂದು ಮಂಜೇಶ್ವರದ ಪಾವೂರು ನಿವಾಸಿ ಮೊಹಮ್ಮದ್ ಬಾವ (50) ಹೇಳಿದರು.

ಕಷ್ಟಪಟ್ಟು ಕಟ್ಟಿದ ಮನೆಯೇ ಕೈತಪ್ಪುತ್ತಿತ್ತು

ಭಾರೀ ಸಾಲದ ಸುಳಿಯಲ್ಲಿ ತತ್ತರಿಸಿರುವ ಬಾವ ಮತ್ತು ಅವರ ಪತ್ನಿ ಅಮಿನಾ (45) ಎಂಟು ತಿಂಗಳ ಹಿಂದೆ ನಿರ್ಮಿಸಿದ 2,000 ಚದರ ಅಡಿಯ ತಮ್ಮ ಮನೆಯನ್ನು ಬ್ಲಾಕ್‌ನಲ್ಲಿ ಇರಿಸಿದ್ದಾರೆ.

ಇಬ್ಬರು ಹೆಣ್ಮಕ್ಕಳೊಂದಿಗೆ ಬಾಡಿಗೆ ಮನೆಗೆ ಹೋದ ದಂಪತಿ

ಭಾನುವಾರ ಸಂಜೆ 5 ಗಂಟೆಗೆ, ಮನೆಯನ್ನು ಕೊಳ್ಳಲು ಒಪ್ಪಂದವನ್ನು ಮಾಡಿ ಟೋಕನ್ ಮೊತ್ತದೊಂದಿಗೆ ಮನೆಗೆ ಬರಲು ಒಪ್ಪಿಕೊಂಡಿತ್ತು. ನಮಗೆ 45 ಲಕ್ಷ ರೂಪಾಯಿ ಸಾಲ ಇರುವುದರಿಂದ ಮನೆಗೆ 45 ಲಕ್ಷ ರೂಪಾಯಿ ಬೇಕಿತ್ತು. ಆದರೆ ಬ್ರೋಕರ್ ಮತ್ತು ಪಕ್ಷ 40 ಲಕ್ಷ ರೂ ಎಂದಿದ್ದರು. ಆದರೆ ದಂಪತಿ ಯಾವುದೇ ಬೆಲೆಗೆ ಆ ರಾತ್ರಿ ಮನೆ ಬಿಡಲು ಒಪ್ಪಿಕೊಂಡರು. ಅವರ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಗೆ ತೆರಳಿದರು.

ಇದನ್ನೂ ಓದಿ: ಅಬ್ಬಬ್ಬಾ ಜಾಕ್‍ಪಾಟ್! ನೀವು ಲಕ್ಕಿಯಾಗಿದ್ರೆ 25 ಕೋಟಿ ಗೆಲ್ಲಬಹುದು!

ಅಮೀನಾ 10 ಲಕ್ಷ ರೂಪಾಯಿ ಬ್ಯಾಂಕ್ ಸಾಲ ಪಡೆದಿದ್ದರು. ದಂಪತಿಗಳು ಮನೆ ಕಟ್ಟಲು ಸಂಬಂಧಿಕರಿಂದ ಇನ್ನೂ 20 ಲಕ್ಷ ರೂಪಾಯಿ ಸಾಲ ಮಾಡಿದ್ದರು. "ಅದರ ನಂತರ, ನಾವು ನಮ್ಮ ಎರಡನೇ ಮಗಳ ಮದುವೆಯನ್ನು ಮಾಡಬೇಕಾಗಿತ್ತು. ನಾವು ಹೆಚ್ಚು ಸಾಲವನ್ನು ಹೊಂದಿದ್ದೇವೆ" ಎಂದು ಬಾವಾ ಹೇಳಿದರು.

Daily wager wins once crore lottery in west bengala
ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ನಿವಾಸಿಯಾಗಿರೋ ದಿನಗೂಲಿ ನೌಕರ , ಪ್ರತಿದಿನ ತಾನು ದುಡಿದ ಹಣದಲ್ಲಿ ಒಂದು ಲಾಟರಿ ಖರೀದಿಸುತ್ತಿದ್ದನು. ಈತನನ್ನು ಕಂಡ ಜನರು ಲಾಟರಿ ಹುಚ್ಚ ಎಂದು ಕರೆಯುತ್ತಿದ್ದರು. (ಸಾಂದರ್ಭಿಕ ಚಿತ್ರ)


ಹೆಣ್ಣುಮಕ್ಕಳ ಮದುವೆ ಖರ್ಚು

ದಂಪತಿಗೆ ಐದು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದರು. ಇಬ್ಬರು ಹಿರಿಯ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಅವರ ಮಗ ನಿಜಾಮುದ್ದೀನ್ (22) ಮೂರು ವಾರಗಳ ಹಿಂದೆ ಕತಾರ್‌ನ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಕಂಡುಕೊಂಡರು.

ಇದನ್ನೂ ಓದಿ: Lottery: ಕೊನೆಗೂ ಸಿಕ್ಕೇಬಿಟ್ರು ಕೇರಳದ ಬಂಪರ್‌ ಲಾಟರಿಯ ಜಾಕ್‌ಪಾಟ್‌ ವಿನ್ನರ್! 10 ಕೋಟಿ ಕೈಗೆ ಸಿಕ್ಕಿದ್ದೇ ಪವಾಡ

ಅವರ ಇಬ್ಬರು ಕಿರಿಯ ಹೆಣ್ಣುಮಕ್ಕಳು 12ನೇ ತರಗತಿಯಲ್ಲಿ ಓದುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ನಾವೆಲ್ಲರೂ ತುಂಬಾ ಒತ್ತಡದಲ್ಲಿದ್ದೇವೆ. ನಮ್ಮ ಆದಾಯ ತೀರಾ ಕಡಿಮೆ ಇರುವುದರಿಂದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಾವ ಹೇಳಿದರು.

ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕುಟುಂಬವು ತಮ್ಮ ಮನೆಯ  ಖರೀದಿದಾರರಿಗಾಗಿ ಕಾಯುತ್ತಿರುವಾಗ, ಬಾವ ಅಲ್ಲಿಂದ ಹೊರಟು ಪಟ್ಟಣಕ್ಕೆ ಹೋದರು. ಕೇರಳ ಸರ್ಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿಯ ನಾಲ್ಕು ಟಿಕೆಟ್‌ಗಳನ್ನು ಖರೀದಿಸಿದರು. ನಾನು ಕಳೆದ ನಾಲ್ಕು ತಿಂಗಳಿಂದ ಲಾಟರಿಯನ್ನು ಖರೀದಿಸುತ್ತಿದ್ದೇನೆ, ಅದೃಷ್ಟವು ನನ್ನ ದುಃಖವನ್ನು ಕೊನೆಗೊಳಿಸುತ್ತದೆ ಎಂದು ಅವರು ಹೇಳಿದರು.

ಮನೆ ಮಾರಾಟಕ್ಕಿಲ್ಲ

ಮಧ್ಯಾಹ್ನ 3 ಗಂಟೆಗೆ ಲಾಟರಿ ಡ್ರಾ ಆಗಿದ್ದು ಬಾವನಿಗೆ ಜಾಕ್ ಪಾಟ್ ಹೊಡೆದಿರುವುದು ಗೊತ್ತಾಗಿದೆ. ತೆರಿಗೆಯ ನಂತರ ಸುಮಾರು 63 ಲಕ್ಷ ರೂ ಕುಟುಂಬದ ಕೈ ಸೇರಲಿದೆ. ಸಂಜೆ 5 ಗಂಟೆಗೆ ರಿಯಲ್ ಎಸ್ಟೇಟ್ ದಲ್ಲಾಳಿಯೊಬ್ಬರು ಮನೆ ಖರೀದಿದಾರರೊಂದಿಗೆ  ಮನೆಗೆ ಬರಲಿದ್ದರೆ, ಆದರೆ ಬಾವಾ ಮನೆ ಈಗ ಮಾರಾಟಕ್ಕಿಲ್ಲ.
Published by:Divya D
First published: