ದೇಬಂಜೇನ್ ದೇಬ್ - ಈ ಹೆಸರು ಇತ್ತೀಚೆಗೆ ದೇಶದಲ್ಲಿ, ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಸದ್ದು ಮಾಡಿತು. ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ ಈತ ಸಾಮಾಜಿಕ ಮಾಧ್ಯಮದಲ್ಲಿ ಪಶ್ಚಿಮ ಬಂಗಾಳದ ಗಣ್ಯರೊಂದಿಗೆ ಅನೇಕ ಫೋಟೋಗಳಿಗೂ ಪೋಸ್ ಕೊಟ್ಟಿದ್ದಾನೆ. ಇತ್ತೀಚೆಗೆ ಕೋಲ್ಕತಾದ ಲೈಬ್ರೆರಿಯೊಂದರಲ್ಲಿ ರವೀಂದ್ರನಾಥ್ ಟ್ಯಾಗೋರ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದ ವೇಳೆ ಇವರೂ ಸಹ ಗಣ್ಯರ ಸಾಲಿನಲ್ಲಿದ್ದರು. ಪಶ್ಚಿಮ ಬಂಗಾಳದ ಜಂಟಿ ಕಾರ್ಯದರ್ಶಿ ಎಂದು ಹೇಳಿಕೊಂಡಿರುವ ಇವರ ಹೆಸರನ್ನು ಕೆತ್ತಲಾಗಿತ್ತು. ಕೋಲ್ಕತ್ತಾದ ಟಾಕಿ ಹೌಸ್ ಸ್ಕೂಲ್‌ನಲ್ಲಿ ಓದಿರುವ ಇವರ ಸಹಪಾಠಿಗಳು ಇವರ ಬಗ್ಗೆ ತೀವ್ರ ಹರ್ಷ ವ್ಯಕ್ತಪಡಿಸುತ್ತಿದ್ದರು. ಆದರೆ, ಈತ ನಕಲಿ ಐಎಎಸ್ ಅಧಿಕಾರಿ ಮತ್ತು ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಶನ್‌ನ ಉನ್ನತ ಅಧಿಕಾರಿ ಎಂದು ನಂಬುವಂತೆ ಜನರನ್ನು ಮೋಸಗೊಳಿಸಿದ್ದರು ಎಮಬ ಬಗ್ಗೆ ಮಾದ್ಯಮಗಳಲ್ಲಿ ವರದಿ ಬಂದ ನಂತರ ಈತನ ಸ್ನೇಹಿತರು ಮತ್ತು ನೆರೆಹೊರೆಯವರು ದಿಗ್ಭ್ರಮೆಗೊಂಡಿದ್ದಾರೆ.
ಮಾಧ್ಯಮಗಳಲ್ಲಿ ವರದಿ ಬೆಳಕಿಗೆ ಬಂದ ನಂತರ ಈತನೊಂದಿಗೆ ಫೋಟೋಗೆ ಪೋಸ್ ನೀಡಿರುವ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಆತನಿಂದ ದೂರ ಹೋಗಲು ಪ್ರಾರಂಭಿಸಿದ್ದಾರೆ. ಇನ್ನು, ದೇಬಂಜೇನ್ ದೇಬ್ ನಕಲಿ ಐಎಎಸ್ ಅಧಿಕಾರಿ, ಸರಕಾರಿ ಅಧಿಕಾರಿಯಲ್ಲ ಎಂಬುದು ಬಯಲಾದ ಬಳಿಕ ಅವನ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಗೆ ಹೆಸರು ಹೇಳಲು ಇಚ್ಛಿಸದ ಸಹಪಾಠಿಯೊಬ್ಬರು ವಿವರಿಸಿರುವುದು ಹೀಗೆ.. ನಾವು ದೇಬಂಜನ್‌ರನ್ನು ದೇಬು ಎಂದು ಕರೆಯುತ್ತಿದ್ದೆವು. ಅವನು ತುಂಬಾ ಸಾಧಾರಣ ವಿದ್ಯಾರ್ಥಿಯಾಗಿದ್ದ. ಯಾವುದೇ ಕಿಡಿಗೇಡಿತನಕ್ಕೆ ಸಿಲುಕದ ಒಬ್ಬ ಅಂಜುಬುರುಕ ಹುಡುಗ. ಅವನು ಜೀವನದಲ್ಲಿ ಮೇಲಕ್ಕೇರಿದ್ದ ಎಂದು ನಾವು ಕೇಳಿದಾಗ, ನಾವು ಆತನ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದೆವು ಎಂದು ಆತನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಕನಸಿನಂತೆ ಭಾಸವಾಗುತ್ತಿದೆ ಮತ್ತು ದುಃಸ್ವಪ್ನವಾಗಿ ಮಾರ್ಪಟ್ಟಿದೆ ಎಂದೂ ಅವರು ಹೇಳಿದರು.
ಜತೆಗೆ, ಈಗ ಅವನ ಸ್ನೇಹಿತರು ಅಥವಾ ನೆರೆಹೊರೆಯವರು ಯಾರೂ ಅವನಿಗೆ ಹತ್ತಿರವಾಗಲು ಬಯಸುವುದಿಲ್ಲ. ಅವನು ನಮ್ಮನ್ನು ಹಾಗೂ ನಮ್ಮ ಶಾಲೆಯನ್ನು ನಾಚಿಕೆಗೇಡು ಮಾಡಿದ್ದಾನೆ, ನಮಗೆ ತಿಳಿದಿರುವ ಯಾರಿಗಾದರೂ ಇದನ್ನು ಹೇಳುವುದರ ಬಗ್ಗೆ ನಮಗೆ ಬೇಸರವಾಗುತ್ತದೆ ಎಂದೂ ಹೇಳಿಕೊಂಡಿದ್ದಾರೆ ಎಂದು ಸ್ನೇಹಿತನೊಬ್ಬ ಹೇಳಿದರು.
ಇಷ್ಟೇ ಅಲ್ಲ, ರಾಜ್ಯ ಅಬಕಾರಿ ಇಲಾಖೆಯ ನಿವೃತ್ತ ಡೆಪ್ಯುಟಿ ಕಲೆಕ್ಟರ್ ಆಗಿರುವ ದೇಬಂಜೇನ್ ದೇಬ್ ಅವರ ತಂದೆ ಮನೋರಂಜನ್ ದೇಬ್ ಸಹ ಈ ವಿಚಾರ ತಿಳಿದು ಆಘಾತದಿಂದ ಮನೆಯಲ್ಲೇ ಮಲಗಿದ್ದಾರೆ ಮತ್ತು ಯಾರನ್ನೂ ಭೇಟಿಯಾಗಲು ನಿರಾಕರಿಸುತ್ತಿದ್ದಾರೆ. ಇನ್ನು, ಅವರ ನೆರೆಹೊರೆಯವರು ಕುಟುಂಬವನ್ನು ಬಹಿಷ್ಕರಿಸಿದ್ದಾರೆ. ದೇಬಂಜೇನ್ ದೇಬ್ ಚಾರುಚಂದ್ರ ಕಾಲೇಜಿನಿಂದ ಪ್ರಾಣಿಶಾಸ್ತ್ರದಲ್ಲಿ ಪದವಿ ಮುಗಿಸಿದ, ನಂತರ ಕೋಲ್ಕತಾ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದರು.
ತನ್ನ ತರಬೇತಿಗಾಗಿ ಮುಸ್ಸೂರಿಗೆ ಪ್ರಯಾಣಿಸುವ ಬದಲು, ದೇಬ್ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಲು ಹೋದರು ಮತ್ತು 2017 ರಲ್ಲಿ ತರಬೇತಿ ಮುಗಿದಿದೆ, ರಾಜ್ಯ ಕಾರ್ಯದರ್ಶಿಯಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಆತ ಪೋಷಕರಿಗೆ ತಿಳಿಸಿದ್ದೇನೆ. ಕಳೆದ ವರ್ಷ, ಸಾಂಕ್ರಾಮಿಕ ರೋಗ ಹರಡಿದ ನಂತರ, ನಕಲಿ ಐಎಎಸ್ ಅಧಿಕಾರಿಯಾದ ಈತ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್, ಕೈಗವಸುಗಳನ್ನು ಖರೀದಿಸಲು ಪ್ರಾರಂಭಿಸಿದರು ಮತ್ತು ತಮ್ಮ ವ್ಯವಹಾರವನ್ನು ನಡೆಸಲು ಟಲ್ತಲಾದ ಕ್ಲಬ್‌ನಲ್ಲಿ ಕೆಲವು ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದ.
ಜತೆಗೆ, ಆತ ಹಲವಾರು ಪೊಲೀಸ್ ಠಾಣೆಗಳು, ಕೆಲವು ರಾಜಕಾರಣಿಗಳು ಮತ್ತು ಇತರ ಪ್ರಭಾವಿ ವ್ಯಕ್ತಿಗಳ ಅಧಿಕಾರಿಗಳನ್ನು ಭೇಟಿ ಮಾಡಲು ಪ್ರಾರಂಭಿಸಿದ ಎಂದು ಪೊಲೀಸ್ ಅಧಿಕಾರಿ ಹೇಳಿದರು. ರಾಜಕಾರಣಿಗಳು ಮತ್ತು ಉನ್ನತ ಕಾರ್ಯಕರ್ತರೊಂದಿಗೆ ಒಡನಾಟ ಬೆಳೆಸಲು ಆತ ಮಾಸ್ಕ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್‌ಗಳನ್ನು ಸ್ಥಳೀಯ ನಾಯಕರ ಸಮ್ಮುಖದಲ್ಲಿ ದಾನ ಮಾಡಲು ಪ್ರಾರಂಭಿಸಿದ. ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಪೊಲೀಸರಿಗೆ ತಾನು ಒಬ್ಬ ಸಾಮಾಜಿಕ ಕಾರ್ಯಕರ್ತ ಎಂದು ಹೇಳುತ್ತಿದ್ದ. ಸಾಮಾಜಿಕ ಜಾಲತಾಣಗಳು ಈ ಫೋಟೋಗಳು ರಾರಾಜಿಸುತ್ತಿವೆ.
ನಕಲಿ ಕೆಎಂಸಿ ಲೋಗೊಗಳನ್ನು ಹೊಂದಿರುವ ಹಲವಾರು ದಾಖಲೆಗಳನ್ನು ಮುದ್ರಿಸಿದ್ದಲ್ಲದೆ, ರಾಜ್ಯ ಸರ್ಕಾರದ ಬಿಸ್ವಾ ಬಾಂಗ್ಲಾ ಲೋಗೊ ಮತ್ತು ನಾಗರಿಕ ಸಂಸ್ಥೆಯ ಹೋಲೋಗ್ರಾಮ್‌ಗಳನ್ನು ಹೊಂದಿರುವ ಬರವಣಿಗೆಯ ಪ್ಯಾಡ್ ಅನ್ನು ತಯಾರಿಸಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಇದನ್ನೂ ಓದಿ: Corporator Murder: ಇಂಟರ್ವ್ಯೂ ಮಾಡಿ, ಕ್ರೈಂ ರೇಟ್ ನೋಡಿ ಹಂತಕರನ್ನು ಸೆಲೆಕ್ಟ್ ಮಾಡಿದ್ದ ಆರೋಪಿ ಮಾಲಾ
ಸಿಕ್ಕಿಬಿದ್ದಿದ್ದು ಹೇಗೆ..?
ಉಚಿತ ವ್ಯಾಕ್ಸಿನೇಷನ್ ಕ್ಯಾಂಪ್‌ವೊಂದಕ್ಕೆ ನಟಿ ಹಾಗೂ ಟಿಎಂಸೆ ಸಂಸದೆಯಾಗಿರುವ ಮಿಮಿ ಚಕ್ರವರ್ತಿಯನ್ನು ಆಹ್ವಾನಿಸಿದ್ದ. ಈ ವೇಳೆ ಸಂಸದೆ ಆ ಕ್ಯಾಂಪ್‌ವೊಂದರಲ್ಲಿ ಲಸಿಕೆ ಹಾಕಿಸಿಕೊಂಡಿದ್ದರು. ಬಳಿಕ ಇದು ನಕಲಿ ಎಂಬ ಶಂಕೆ ಬಂದ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಆತ ಮೋಸಗಾರನೆಂಬುದು ಬಯಲಾಗಿದ್ದು, ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ