ಇಂಡೋನೇಷ್ಯಾ ಭೂಕಂಪ, ಸುನಾಮಿ: ಸಾವಿನ ಸಂಖ್ಯೆ 832ಕ್ಕೇರಿಕೆ; 1 ಸಾವಿರ ಗಡಿದಾಟುವ ಭೀತಿ

ದೊಂಗ್ಗಲಾದಲ್ಲಿ ಈವರೆಗೆ 11 ಜನರು ಮೃತಪಟ್ಟಿರುವ ಬಗ್ಗೆಯಷ್ಟೇ ಮಾಹಿತಿ ಬಂದಿದೆ. ಒಂದು ಅಂದಾಜಿನ ಪ್ರಕಾರ, ಪಲುಗಿಂತಲೂ ದೊಂಗ್ಗಲಾದಲ್ಲಿ ಹೆಚ್ಚು ಜನರು ಮೃತಪಟ್ಟಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು ಮೃತರ ಸಂಖ್ಯೆ 1.5 ಲಕ್ಷ ದಾಟಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.


Updated:September 30, 2018, 2:38 PM IST
ಇಂಡೋನೇಷ್ಯಾ ಭೂಕಂಪ, ಸುನಾಮಿ: ಸಾವಿನ ಸಂಖ್ಯೆ 832ಕ್ಕೇರಿಕೆ; 1 ಸಾವಿರ ಗಡಿದಾಟುವ ಭೀತಿ
ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ

Updated: September 30, 2018, 2:38 PM IST
- ನ್ಯೂಸ್18 ಕನ್ನಡ

ಜಕಾರ್ತ(ಸೆ. 30): ಮೊನ್ನೆ ಸಂಭವಿಸಿದ ಭೀಕರ ಭೂಕಂಪ ಮತ್ತು ಸುನಾಮಿಯಿಂದ ಇಂಡೋನೇಷ್ಯಾದ ಕೆಲ ಭಾಗಗಳು ತತ್ತರಿಸಿಹೋಗಿವೆ. ಅಧಿಕೃತವಾಗಿ ಪ್ರಕಟಗೊಂಡಿರುವ ಮಾಹಿತಿ ಪ್ರಕಾರ ಈವರೆಗೂ 832 ಜನರು ಈ ಪ್ರಾಕೃತಿಕ ದುರಂತಕ್ಕೆ ಬಲಿಯಾಗಿದ್ದಾರೆ. ಸುಲಾವೇಸಿ ದ್ವೀಪದ ನಾಲ್ಕು ಜಿಲ್ಲೆಗಳು ದುರಂತದಿಂದ ಘಾಸಿಗೊಂಡಿವೆ. ಬಹುತೇಕ ಸಾವಿನ ಸಂಖ್ಯೆಯ ಮಾಹಿತಿ ಬಂದಿರುವುದು 3.5 ಲಕ್ಷ ಜನಸಂಖ್ಯೆಯ ಪಲು ಜಿಲ್ಲೆಯಲ್ಲಿ ಮಾತ್ರವೇ. ಪಲುವಿನ ಉತ್ತರಕ್ಕಿರುವ ದೊಂಗ್ಗಲಾ ಜಿಲ್ಲೆಯ ಸಮೀಪ ಭೂಕಂಪದ ಕೇಂದ್ರ ಬಿಂದು ಇತ್ತು. ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯ ಭೂಕಂಪದಿಂದ ಪಲುವಿನಲ್ಲಿ 20 ಅಡಿಗೂ ಹೆಚ್ಚು ದೈತ್ಯ ಅಲೆಗಳು ಸಾಗರ ತೀರವನ್ನು ಅಪ್ಪಳಿಸಿದ್ದವು. ಪಲುವಿನಲ್ಲಿ ಯಾವುದೋ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ನೂರಾರು ಜನರು ಸಮುದ್ರತೀರದಲ್ಲಿ ನೆರೆದಿದ್ದರು. ಅಷ್ಟೂ ಜನರು ಸುನಾಯಿಗೆ ಕೊಚ್ಚಿಹೋಗಿರುವ ಶಂಕೆ ಇದೆ.

3 ಲಕ್ಷ ಜನಸಂಖ್ಯೆ ಇರುವ ದೊಂಗ್ಗಲಾದಲ್ಲಿ ಹೆಚ್ಚು ದುರಂತ ಸಂಭವಿಸಿರುವ ಸಾಧ್ಯತೆ ಇದೆ. ಆದರೆ, ಇಲ್ಲಿ ಇನ್ನೂ ಸರಿಯಾದ ಅಂಕಿ ಅಂಶಗಳು ಬಂದಿಲ್ಲ. ದೊಂಗ್ಗಲಾದಲ್ಲಿ ಈವರೆಗೆ 11 ಜನರು ಮೃತಪಟ್ಟಿರುವ ಬಗ್ಗೆಯಷ್ಟೇ ಮಾಹಿತಿ ಬಂದಿದೆ. ಒಂದು ಅಂದಾಜಿನ ಪ್ರಕಾರ, ಪಲುಗಿಂತಲೂ ದೊಂಗ್ಗಲಾದಲ್ಲಿ ಹೆಚ್ಚು ಜನರು ಮೃತಪಟ್ಟಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು ಮೃತರ ಸಂಖ್ಯೆ 1.5 ಲಕ್ಷ ದಾಟಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇಂಡೋನೇಷ್ಯಾದಲ್ಲಿ ಭೂಕಂಪ ಮತ್ತು ಸುನಾಮಿಗೆ ತುತ್ತಾದ ಪ್ರದೇಶಗಳು


ವಿಕೋಪಕ್ಕೆ ತುತ್ತಾದ ಪ್ರದೇಶಗಳಲ್ಲೀಗ ರಕ್ಷಣಾ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಇಂಡೋನೇಷ್ಯಾದ ಸೈನಿಕರನ್ನು ಈ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಸೀಮಿತ ಸಂಪನ್ಮೂಲಗಳಿಂದಾಗಿ ಕಾರ್ಯಾಚರಣೆ ಕ್ಲಿಷ್ಟಗೊಂಡಿದೆ. ಮನೆ, ಮಠ, ಆಸ್ತಿ ಎಲ್ಲಾ ಕಳೆದುಕೊಂಡ ಕೆಲ ಜನರು ಬದುಕುವುದಕ್ಕಾಗಿ ಸಿಕ್ಕಸಿಕ್ಕಿದ್ದನ್ನು ದೋಚಲು ಪ್ರಾರಂಭಿಸಿರುವ ಸುದ್ದಿ ಬಂದಿದೆ. ಇವರನ್ನು ಸಂಭಾಳಿಸುವ ಕೆಲಸವೂ ದೊಡ್ಡ ತಲೆನೋವು ತಂದಿದೆ. ಪಶ್ಚಾತ್ ಕಂಪನಗಳು ಸಂಭವಿಸುವ ಭೀತಿಯಲ್ಲಿರುವ ಸಂತ್ರಸ್ತರ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಅಲಗಿನ ಮನೆಗಳನ್ನ ನಿರ್ಮಿಸಿಕೊಳ್ಳುತ್ತಿದ್ದಾರೆ.

ಭೂಮಿಯ ಮೇಲಿರುವ ಅತೀ ತೀವ್ರ ಭೂಕಂಪ ಸೂಕ್ಷ್ಮ ಪ್ರದೇಶಗಳಲ್ಲಿ ಇಂಡೋನೇಷ್ಯಾ ಕೂಡ ಒಂದು. ಭೂಮಿಯೊಳಗಿರುವ ಗಟ್ಟಿತೆರಳೆಯ ತಗಡುಗಳು (ಟೆಕ್ಟೋನಿಕ್ ಪ್ಲೇಟ್ಸ್) ಪರಸ್ಪರ ಘರ್ಷಣೆಗೊಳ್ಲುವ ಅತ್ಯಂತ ಅಪಾಯಕಾರಿ ಸ್ಥಿತಿ ಇಲ್ಲಿದೆ. ಈ ಘರ್ಷಣೆಯಿಂದಾಗಿಯೇ ಅತೀ ಹೆಚ್ಚು ಜ್ವಾಲಾಮುಖಿ, ಭೂಕಂಪಗಳು ಇಲ್ಲಿ ಸಂಭವಿಸುತ್ತವೆ.

ಆರೇಳು ತಿಂಗಳ ಹಿಂದಷ್ಟೇ ಸುಲಾವೇಸಿಯ ಪಕ್ಕದ ಲಂಬೋಕ್ ಮತ್ತು ಸುಂಬಾವದಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿ 550ಕ್ಕೂ ಹೆಚ್ಚು ಜನರು ಅಸುನೀಗಿದ್ದರು.
Loading...

2004ರಲ್ಲಿ ತಮಿಳುನಾಡು, ಶ್ರೀಲಂಕಾದಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಸುನಾಯಿಯು ಸೃಷ್ಟಿಯಾಗಿದ್ದೇ ಇಂಡೋನೇಷ್ಯಾದ ಸುಮಾತ್ರದಲ್ಲಿ ಸಂಭವಿಸಿದ್ದ 9.1 ತೀವ್ರತೆಯ ಭಾರೀ ಭೂಕಂಪದಿಂದೆಯೇ. ಆ ದುರಂತದಲ್ಲಿ ಒಟ್ಟಾರೆ 2 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಇಂಡೋನೇಷ್ಯಾ ದೇಶವೊಂದರಲ್ಲೇ 1.68 ಲಕ್ಷ ಜನರು ಭೂಕಂಪ ಮತ್ತು ಸುನಾಮಿಗೆ ಜೀವ ಕಳೆದುಕೊಂಡಿದ್ದರು.
First published:September 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...