ಮಳೆಯಲ್ಲಿ ಕೊಚ್ಚಿ ಹೋಯ್ತು ಕೇರಳ ಜನರ ಬದುಕು..!: 324 ಮಂದಿ ಸಾವು, 3 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತ..!


Updated:August 17, 2018, 9:58 PM IST
ಮಳೆಯಲ್ಲಿ ಕೊಚ್ಚಿ ಹೋಯ್ತು ಕೇರಳ ಜನರ ಬದುಕು..!: 324 ಮಂದಿ ಸಾವು, 3 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತ..!

Updated: August 17, 2018, 9:58 PM IST
ಹನುಮಂತ ಜೋಳದಾಳ್, ನ್ಯೂಸ್ 18 ಕನ್ನಡ

ತಿರುವನಂತಪುರಂ(ಆ.17): ನಿರಂತರವಾಗಿ ಸುರಿತ್ತಿರುವ ಮಳೆಗೆ ದೇವರನಾಡು ಕೇರಳ ತತ್ತರಿಸಿ ಹೋಗಿದೆ. ಜಲಸ್ಫೋಟದಿಂದ ಅಕ್ಷರಶ: ಮುಳುಗಿರೋ ಕೇರಳದ 14 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಮುಂದುವರಿಸಲಾಗಿದೆ. ಮರಣ ಮಳೆ ಈವರೆಗೂ 324 ಜನರನ್ನ ಬಲಿ ಪಡೆದಿದೆ . ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಸುರಕ್ಷಿತ ಸ್ಥಳಕ್ಕೆ ಶಿಪ್ಟ್‌ ಮಾಡಲಾಗುತ್ತಿದೆ.

ನಿರಂತರವಾಗಿ ಎಡೆಬಿಡದೆ ಸುರೀತಿರೋ ಕುಂಭದ್ರೋಣ ಮಳೆಗೆ ಕೇರಳ ಜನರ ಬದುಕು ಕೊಚ್ಚಿ ಹೋಗಿದೆ. ಭಾರೀ ಪ್ರವಾಹದಲ್ಲಿ ಸಿಲುಕಿರೋ ಸಂತ್ರಸ್ಥರನ್ನು ರಕ್ಷಣೆ ಮಾಡಲು ಸೇನಾಪಡೆಯ 11 ಹೆಲಿಕಾಪ್ಟರ್​ಗಳು ಹಾಗೂ ಸೇನಾಪಡೆಯ ಮೋಟರ್ ​ಬೋಟ್‌ಗಳು ರಕ್ಷಣಾ​ ಕಾರ್ಯಾಚರಣೆ ನಡೆಸುತ್ತಿವೆ.. 6 ಜಿಲ್ಲೆಗಳ ವಿವಿಧ ಕಡೆ ಗುಡ್ಡ ಕುಸಿತ ಸೇರಿದಂತೆ ಅಪಾರ ಹಾನಿ ಸಂಭವಿಸಿದ್ದು, 14 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್‌ ಮುಂದುವರಿಸಲಾಗಿದೆ. ಇಲ್ಲೀವರೆಗೂ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದ್ದು, ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಚಾಲಕ್ಕುಡಿ ಸಮೀಪ ಮನೆಯೊಂದರ ಮೇಲೆ ಮರ ಉರುಳಿ ಬಿದ್ದ ಪರಿಣಾಮ ವಯಸ್ಸಾದ ಮಹಿಳೆ ಹಾಗೂ ಆಕೆಯ ಮಗ ಸಾವನ್ನಪ್ಪಿದ್ದಾರೆ. ಪಳಿಯೆಕ್ಕರ ಟೋಲ್ ಪ್ಲಾಜಾ ನೀರಿನಿಂದ ಮುಳಿಗಿ ಹೋಗಿದೆ.. ಮುರಿಂಗೂರು ಸೇತುವೆ ಮುಳುಗಿದೆ. ತ್ರಿಶ್ಶೂರ್ ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಸಂಕಷ್ಟ ಸ್ಥಿತಿಯಲ್ಲಿದೆ. ಚಾಲಕ್ಕುಡಿಯಲ್ಲಿ ನಿರಾಶ್ರಿತ ಶಿಬಿರದೊಳಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಲಾಗಿದೆ. ಶೋರ್ನೂರ್- ಒಟ್ಟಪಲಂ ಮಾರ್ಗ ಸಂಪರ್ಕ ಕಡಿದುಕೊಂಡಿದೆ.

ಇನ್ನೂ ಕೊಟ್ಟಾಯಂ, ವೈಕೋಂನಲ್ಲಿನ ಪರಿಸ್ಥಿತಿ ಭೀಕರವಾಗಿದೆ. ನಲವತ್ತೆಂಟು ಸಂತ್ರಸ್ತರ ಶಿಬಿರಗಳನ್ನು ತೆರೆದಿದ್ದು, ಶಿಬಿರಗಳು ಜನರಿಂದ ತುಂಬಿ ತುಳುಕುತ್ತಿವೆ. ಪಾಲಂ- ಕೊಟ್ಟಾಯಂ, ಪಾಲಂ- ಪೋಣ್ ಕುನ್ನಮ್, ಪಾಲಂ- ಎರಟ್ಟುಪೆಟ್ಟ ಮಾರ್ಗದಲ್ಲಿ ಸತತ ಮೂರನೇ ದಿನವೂ ಸಂಚಾರ ಸ್ಥಗಿತ ಆಗಿದೆ.

ಕೊಚ್ಚಿಯ ಏರ್​ಪೋರ್ಟ್​​ ಪಕ್ಕದ ನೆದುಂಬಸ್ಸಾರಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಗರ್ಭಿಣಿಯನ್ನ ರಕ್ಷಣೆ ಮಾಡಲಾಗಿದೆ. ಗರ್ಭಿಣಿ ತುಂಬಾ ಸುಸ್ತಾಗಿದ್ದರಿಂದ ವೈದ್ಯರು ಹೆಲಿಕಾಪ್ಟರ್​ನಿಂದ ಕೆಳಗಿಳಿದು ಪ್ರವಾಹದ ಮಧ್ಯೆಯೇ ಚಿಕಿತ್ಸೆ ನೀಡಿ, ಬಳಿಕ ಹೆಲಿಕಾಫ್ಟರ್​ ಮೂಲಕ ಮೆಲೆತ್ತಿ ಆಸ್ಪತ್ರೆಗೆ ಸೇರಿದ್ರು, ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕೇರಳದಲ್ಲಿ ಈವರೆಗೆ ಪ್ರವಾಹಕ್ಕೆ ಸಿಲುಕಿ 167 ಜನರ ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಕೂಡಾ ಕೇರಳಕ್ಕೆ ಭೇಟಿ ನೀಡಿ ಪ್ರವಾಹ ಸ್ಥಿತಿಯನ್ನು ಅವಲೋಕಿಸಲಿದ್ದಾರೆ ಅನ್ನೋ ಮಾಹಿತಿ ಇದೆ.
Loading...

ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಸ್ಟ್ 26ರವರೆಗೆ ಬಂದ್ ಮಾಡಲಾಗಿದೆ. ತ್ರಿವೆಂಡ್ರಮ್‌ ಹಾಗೂ ಕ್ಯಾಲಿಕಟ್‌ನಿಂದ ಹೆಚ್ಚುವರಿ ವಿಮಾನ ವ್ಯವಸ್ಥೆ ಮಾಡಲಾಗಿದೆ. ಏರ್‌ ಏಷಿಯಾ, ಗಲ್ಫ್‌ ಏರ್‌, ಕುವೈತ್‌ ಏರ್‌ಲೈನ್ಸ್‌, ಮಲಿಂಡೊ, ಸಿಲ್ಕ್ ಏರ್‌ ವಿಮಾನಗಳ ಕೊಚ್ಚಿನ್‌ ಸಂಪರ್ಕ ಕಡಿತಗೊಳಿಸಲಾಗಿದೆ. 6 ಸಾವಿರ ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ ಮಾಡಿ ಹಣ ಹಿಂದುರಿಗಿಸಲಾಗಿದೆ.

ಕೇರಳಕ್ಕೆ ಒಡಿಶಾ ಸರ್ಕಾರ 5 ಕೋಟಿ, ಕರ್ನಾಟಕ ಸರ್ಕಾರ 10 ಕೋಟಿ ರೂಪಾಯಿ ನೆರವು ನೀಡಿದೆ. ಸಿನಿಮಾ ಸ್ಟಾರ್‌ಗಳಾದ ಕಾರ್ತಿಕ್‌ ಸೇರಿದಂತೆ ಹಲವರು ಸಹಾಯದ ಹಸ್ತ ಚಾಚಿದ್ದಾರೆ. ಜಿಯೋ ತನ್ನೆಲ್ಲಾ ಗ್ರಾಹಕರಿಗೆ 7 ದಿನಗಳ ಕಾಲ ಇಂಟರ್​ನೆಟ್​ ಹಾಗೂ ಕರೆಯನ್ನು ಉಚಿತವಾಗಿ ನೀಡ್ತಿದೆ. ಸಂತ್ರಸ್ಥರ ರಕ್ಷಣೆಗಾಗಿ ನ್ಯೂಸ್​18 ಕೇರಳ ಸಹಾಯವಾಣಿ ಆರಂಭಿಸಿದೆ.

ಈಗಾಗಲೇ ಸಾವಿನ ಸರಣಿ ಪ್ರವಾಹಕ್ಕೆ ಬೆಚ್ಚಿಬಿದ್ದಿರೋ ಕೇರಳ ಜನರಿಗೆ ಹವಮಾನ ಇಲಾಖೆ ಮತ್ತೊಂದು ಶಾಕ್​ ನೀಡಿದ್ದು, ಆಗಸ್ಟ್‌ 19 ರಿಂದ ಭಾರೀ ಮಳೆಯಾಗೋ ಮುನ್ಸೂಚನೆ ನೀಡಿದೆ. ಈ ನಡುವೆ ಮುಲ್ಲ ಪೆರಿಯಾರ್ ಅಣೆಕಟ್ಟಿನ ನೀರಿನ ಸಂಗ್ರಹ 142 ಅಡಿಯಿಂದ 139 ಅಡಿಗೆ ಇಳಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ