ಮದುವೆಮನೆ ದುರಂತ; ಸಪ್ತಪದಿ ತುಳಿಯೋ ಜಾಗದಲ್ಲೇ ಬಿತ್ತು ಮದುಮಗನ ಹೆಣ!

Crime News: ಮದುವೆ ಮುಹೂರ್ತಕ್ಕೆ ಕೆಲವೇ ನಿಮಿಷ ಇರುವಾಗ ಸಾಫ್ಟ್​ವೇರ್ ಇಂಜಿನಿಯರ್ ಕಲ್ಯಾಣಮಂಟಪದಲ್ಲಿಯೇ ನೇಣಿಗೆ ಶರಣಾದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಹೈದರಾಬಾದ್‍ನ ದಿಲ್ಖುಶ್‍ ನಗರದ ಎನ್. ಸಾಯಿ ಸಂದೀಪ್ ಎಂಬ ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

news18-kannada
Updated:November 11, 2019, 9:36 AM IST
ಮದುವೆಮನೆ ದುರಂತ; ಸಪ್ತಪದಿ ತುಳಿಯೋ ಜಾಗದಲ್ಲೇ ಬಿತ್ತು ಮದುಮಗನ ಹೆಣ!
ಮೃತ ಸಾಫ್ಟ್​ವೇರ್ ಉದ್ಯೋಗಿ ಸಂದೀಪ್
  • Share this:
ಹೈದರಾಬಾದ್ (ನ. 11): ಗಂಡು-ಹೆಣ್ಣಿನ ಮನೆಯವರು ಸೇರಿ ನಿಶ್ಚಯಿಸಿದ ಮದುವೆ ಅದು. ಎರಡೂ ಕುಟುಂಬದ ನೆಂಟರು, ಆಪ್ತರು ಮದುವೆಯನ್ನು ಕಣ್ತುಂಬಿಕೊಳ್ಳಲು ತಯಾರಾಗಿ ಮದುವೆ ಮಂಟಪದ ಮುಂದೆ ಕುಳಿತಿದ್ದರು. ಇನ್ನು ಅರ್ಧ ಗಂಟೆಯಲ್ಲಿ ತಾಳಿ ಕಟ್ಟಲು ಮುಹೂರ್ತ ನಿಗದಿಯಾಗಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು. ವಧುವಿಗೆ ತಾಳಿ ಕಟ್ಟಬೇಕಾಗಿದ್ದ ಮದುಮಗ ಇನ್ನೂ ರೂಮಿನಿಂದ ಬರಲಿಲ್ಲವಲ್ಲ ಎಂದು ಬಾಗಿಲು ತೆರೆದು ನೋಡಿದವರಿಗೆ ಆಘಾತ ಕಾದಿತ್ತು!

ಮದುವೆ ಮುಹೂರ್ತಕ್ಕೆ ಕೆಲವೇ ನಿಮಿಷ ಇರುವಾಗ ಸಾಫ್ಟ್​ವೇರ್ ಇಂಜಿನಿಯರ್ ಕಲ್ಯಾಣಮಂಟಪದಲ್ಲಿಯೇ ನೇಣಿಗೆ ಶರಣಾದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಹೈದರಾಬಾದ್‍ನ ದಿಲ್ಖುಶ್‍ ನಗರದ ಎನ್. ಸಾಯಿ ಸಂದೀಪ್ ಎಂಬ ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೆಡ್ಚಲ್ ಜಿಲ್ಲೆಯ ಕೊಂಪಲ್ಲಿ ನಗರದ ಕಲ್ಯಾಣಮಂಟಪದಲ್ಲಿಯೇ ಈ ಘಟನೆ ನಡೆದಿದೆ.

Bulbul Cyclone: ಬುಲ್​ಬುಲ್ ಚಂಡಮಾರುತದ ಹೊಡೆತಕ್ಕೆ 22ಕ್ಕೂ ಹೆಚ್ಚು ಸಾವು; ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಹೈ ಅಲರ್ಟ್​

ಸಾಫ್ಟ್‌ವೇರ್‌ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಂದೀಪ್‍ಗೆ ಶನಿವಾರ ಮದುವೆ ನಿಶ್ಚಯವಾಗಿತ್ತು. ಕೊಂಪಲ್ಲಿ ನಗರದ ಕಲ್ಯಾಣಮಂಟದಲ್ಲಿ ಸಂದೀಪ್ ಮದುವೆಗೆ ಎಲ್ಲ ಸಿದ್ಧತೆಗಳೂ ನಡೆದಿತ್ತು. ಶನಿವಾರ ಬೆಳಗ್ಗೆ 11ಕ್ಕೆ ಹಸೆಮಣೆ ಏರಬೇಕಿದ್ದ ಸಂದೀಪ್ ಮುಹೂರ್ತದ ಸಮಯ ಹತ್ತಿರ ಬಂದರೂ ರೂಮ್‍ನಿಂದ ಹೊರ ಬಂದಿರಲಿಲ್ಲ. ಆತನನ್ನು ಮಂಟಪಕ್ಕೆ ಕರೆದುಕೊಂಡು ಬರಲು ಹೋದ ಸ್ನೇಹಿತರು, ಸಂಬಂಧಿಕರು ಎಷ್ಟೇ ಕೂಗಿದರೂ ಸಂದೀಪ್ ಬಾಗಿಲು ತೆರೆಯಲಿಲ್ಲ. ಇದರಿಂದ ಗಾಬರಿಗೊಂಡ ಸಂಬಂಧಿಕರು ರೂಮ್‍ನ ಬಾಗಿಲು ಮುರಿದು ನೋಡಿದಾಗ ಸಂದೀಪ್ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವಿಷಯ ಬೆಳಕಿಗೆ ಬಂದಿದೆ.

ಡಿ. 5ಕ್ಕೆ ಕರ್ನಾಟಕ ವಿಧಾನಸಭಾ ಉಪಚುನಾವಣೆ; ಇಂದಿನಿಂದ ನೀತಿಸಂಹಿತೆ ಜಾರಿ

ಅರ್ಧ ಗಂಟೆಯಲ್ಲಿ ವಧುವಿಗೆ ತಾಳಿ ಕಟ್ಟಬೇಕಾಗಿದ್ದ ಮದುಮಗನೇ ನೇಣಿಗೆ ಕೊರಟೊಡ್ಡಿರುವ ವಿಷಯ ತಿಳಿದು ಸಂಬಂಧಿಕರು, ಮದುವೆಗೆ ಬಂದಿದ್ದ ಅತಿಥಿಗಳು ಹಾಗೂ ಹೆಣ್ಣಿನ ಮನೆಯವರು ಆಘಾತಕ್ಕೊಳಗಾಗಿದ್ದಾರೆ. ಸಂದೀಪ್ ಬೆಳಗ್ಗೆ 8 ಗಂಟೆಯೊಳಗೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ವರನ ಕೊಠಡಿಯಲ್ಲಿ ಎಲ್ಲೂ ಸೂಸೈಡ್ ನೋಟ್ ಕಂಡುಬಂದಿಲ್ಲ. ಇತ್ತೀಚೆಗೆ ಸಾವನ್ನಪ್ಪಿದ್ದ ಅಜ್ಜನನ್ನು ಸಂದೀಪ್ ಬಹಳ ಹಚ್ಚಿಕೊಂಡಿದ್ದರು ಎನ್ನಲಾಗಿದೆ. ಅಜ್ಜನ ಅಗಲಿಕೆಯಲ್ಲಿ ಖಿನ್ನತೆಗೊಳಗಾಗಿದ್ದ ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಸಂದೀಪ್ ಸಾವಿನ ನಿಖರ ಕಾರಣ ಪತ್ತೆಯಾಗಿಲ್ಲ.

First published:November 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ