2012ರ ನಿರ್ಭಯಾ ಅತ್ಯಾಚಾರ ಪ್ರಕರಣ: ಜ.22ಕ್ಕೆ ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ಅಸಾಧ್ಯ?

ನಾಲ್ವರ ಪೈಕಿ ಒಬ್ಬರು ಹೊರತುಪಡಿಸಿ ಮೂವರು ಇಲ್ಲಿಯವರೆಗೂ ಕ್ಷಮಾದಾನ ಅರ್ಜಿ ಸಲ್ಲಿಸಿಯೇ ಇಲ್ಲ. ರಾಷ್ಟ್ರಪತಿಗೆ ಆರೋಪಿಗಳು ಕ್ಷಮಾದಾನ ಅರ್ಜಿ ಸಲ್ಲಿಸದೆ ನೇಣಿಗೇರಿಸಲು ಸಾಧ್ಯವಿಲ್ಲ. ತಾಂತ್ರಿಕ ದೋಷಗಳ ಕಾರಣಕ್ಕೆ ಗಲ್ಲುಶಿಕ್ಷೆ ವಿಳಂಬ ಮುಂದೂಡಬೇಕು - ದೆಹಲಿ ಸರ್ಕಾರ

news18-kannada
Updated:January 15, 2020, 2:34 PM IST
2012ರ ನಿರ್ಭಯಾ ಅತ್ಯಾಚಾರ ಪ್ರಕರಣ: ಜ.22ಕ್ಕೆ ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ಅಸಾಧ್ಯ?
ರೇಖಾಚಿತ್ರ- ಮೀರ್ ಸುಹೈಲ್
  • Share this:
ನವದೆಹಲಿ(ಜ.15): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ. ಹೌದು, ಜನವರಿ 22ನೇ ತಾರೀಕಿನಂದು ತಿಹಾರ್ ಜೈಲಿನಲ್ಲಿ ನಾಲ್ವರು ದೋಷಿಗಳಿಗೆ ನೇಣಿಗೆ ಹಾಕಬೇಕಿತ್ತು. ಆದರೀಗ, ಇನ್ನೂ ಕ್ಷಮಾದಾನ ಅರ್ಜಿಗಳು ಇತ್ಯರ್ಥವಾಗಿಲ್ಲ. ಪ್ರಮುಖ ಅಪರಾದಿ ಮುಕೇಶ್ ಎಂಬಾತನ ಕ್ಷಮಾದಾನ ಅರ್ಜಿ ಬಾಕಿ ಇದೆ. ನಾಲ್ವರ ಪೈಕಿ ಒಬ್ಬರು ಹೊರತುಪಡಿಸಿ ಮೂವರು ಇಲ್ಲಿಯವರೆಗೂ ಕ್ಷಮಾದಾನ ಅರ್ಜಿ ಸಲ್ಲಿಸಿಯೇ ಇಲ್ಲ. ರಾಷ್ಟ್ರಪತಿಗೆ ಆರೋಪಿಗಳು ಕ್ಷಮಾದಾನ ಅರ್ಜಿ ಸಲ್ಲಿಸದೆ ನೇಣಿಗೇರಿಸಲು ಸಾಧ್ಯವಿಲ್ಲ. ತಾಂತ್ರಿಕ ದೋಷಗಳ ಕಾರಣಕ್ಕೆ ಗಲ್ಲುಶಿಕ್ಷೆ ವಿಳಂಬ ಮುಂದೂಡಬೇಕು. ಮತ್ತೊಂದು ಡೆತ್​​​ ವಾರೆಂಟ್​​​​ ನೀಡಬೇಕೆಂದು ಹೈಕೋರ್ಟ್​ಗೆ ದೆಹಲಿ ಸರ್ಕಾರ ಮನವಿ ಮಾಡಿದೆ. ಅಲ್ಲದೇ ಈ ಸಂಬಂಧ ಕೆಳನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿಯೂ ಹೇಳಿದೆ.

ಏಳು ವರ್ಷಗಳ ಹಿಂದಿನ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಪಟಿಯಾಲ ಹೌಸ್ ನ್ಯಾಯಾಲಯವು ಡೆತ್ ವಾರೆಂಟ್ ಜಾರಿಗೊಳಿಸಿ ಜ.7ರಂದೇ ಆದೇಶ ಹೊರಡಿಸಿದೆ. ಅಂದರೆ, ಈ ನಾಲ್ವರನ್ನು ನೇಣಿಗೇರಿಸುವ ಪ್ರಕ್ರಿಯೆ ಪ್ರಾರಂಭಿಸಲು ಕೋರ್ಟ್ ಹಸಿರುನಿಶಾನೆ ತೋರಿದೆ. ಜನವರಿ 22, ಬೆಳಗ್ಗೆ 7ಕ್ಕೆ ಇವರನ್ನು ನೇಣಿಗೆ ಏರಿಸಲು ಸಮಯ ನಿಗದಿಯಾಗಿದೆ.

ಏನಿದು ರೇಪ್ ಕೇಸ್?

2012ರ ಡಿಸೆಂಬರ್ 16ರಂದು ದಕ್ಷಿಣ ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಅವರನ್ನು ಬರ್ಬರವಾಗಿ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಒಂದು ಬಸ್ಸಿನೊಳಗೆ ಆರು ಜನರು ಸೇರಿಕೊಂಡು ನಿರ್ಭಯಾ​ರನ್ನು ಗ್ಯಾಂಗ್ ರೇಪ್ ಮಾಡಿದ್ದರು. ಆಕೆಯ ಜೊತೆಗಿದ್ದ ಸ್ನೇಹಿತನನ್ನ ಕೈಕಾಲು ಕಟ್ಟಿ ಪ್ರಜ್ಞೆ ತಪ್ಪುವಂತೆ ಥಳಿಸಲಾಗಿತ್ತು. ನಿರ್ಭಯಾ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಷ್ಟೇ ಅಲ್ಲ ಅಮಾನುಷವಾಗಿ ದೈಹಿಕ ಹಲ್ಲೆ ಮಾಡಲಾಗಿತ್ತು. ಮರ್ಮಾಂಗಗಳನ್ನು ಘಾಸಿಗೊಳಿಸಲಾಗಿತ್ತು. ಅಷ್ಟೇ ಅಲ್ಲ, ಚಲಿಸುತ್ತಿದ್ದ ಬಸ್ಸಿನಿಂದಲೇ ಅವರಿಬ್ಬರನ್ನೂ ಹೊರಗೆ ಎಸೆದು ಹೋಗಿದ್ದರು.

ಇದನ್ನೂ ಓದಿ: ‘ನಿರಾಣಿಗೆ ಮಂತ್ರಿ ಸ್ಥಾನ ನೀಡಿ ಉಳಿದ ಪಂಚಮಸಾಲಿ ಮುಖಂಡರು ಕತ್ತೆ ಕಾಯಲು ಹೋಗಬೇಕಾ?‘: ಯತ್ನಾಳ್​​

ತೀರಾ ಗಂಭೀರವಾಗಿ ಗಾಯಗೊಂಡಿದ್ದ ನಿರ್ಭಯಾ ಕೆಲ ದಿನಗಳ ಕಾಲ ಜೀವನ್ಮರಣ ಹೋರಾಟ ತೋರಿ ನಿಧನರಾದರು. ಆ ಘಟನೆಗೆ ನಿರ್ಭಯಾ ಜೊತೆಗಿದ್ದ ಸ್ನೇಹಿತ ಮಾತ್ರ ಸಾಕ್ಷಿಯಾಗಿದ್ದರು. ರಾಮ್ ಸಿಂಗ್, ಅಕ್ಷಯ್, ವಿನಯ್, ಮುಕೇಶ್, ಪವನ್ ಕುಮಾರ್ ಹಾಗೂ ಮತ್ತೋರ್ವ ಅಪ್ರಾಪ್ತ ಹುಡುಗನನ್ನು ಪೊಲೀಸರು ಬಂಧಿಸಿದರು. ಪ್ರಮುಖ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲೇ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದ. ಅಪ್ರಾಪ್ತ ಆರೋಪಿಯನ್ನು ಬಾಲಾಪರಾಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಉಳಿದ ನಾಲ್ವರು ಆರೋಪಿಗಳ ವಿಚಾರಣೆ ನಡೆದು ಅವರೆಲ್ಲರೂ ತಪ್ಪಿತಸ್ಥರೆಂಬುದು ರುಜುವಾತಾಯಿತು. ಎಲ್ಲರಿಗೂ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಆ ಬಳಿಕ ಅಪರಾಧಿಗಳು ಜೀವದಾನ ಪಡೆಯಲು ಮಾಡಿದ ಕೆಲವಾರು ಪ್ರಯತ್ನಗಳು ಫಲಕೊಡಲಿಲ್ಲ. ಮರಣದಂಡನೆ ಶಿಕ್ಷೆ ಜಾರಿಯಾದರೂ ಇನ್ನೂ ನೇಣಿಗೇರಿಸಿಲ್ಲ. ಆದಷ್ಟೂ ಬೇಗ ಗಲ್ಲಿಗೇರಿಸಿ ಎಂದು ನಿರ್ಭಯಾ ಪೋಷಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈಗ ಈ ಅರ್ಜಿಯ ಸಂಬಂಧ ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದ್ದು, ನಾಲ್ವರನ್ನು ನೇಣುಗಂಬಕ್ಕೇರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ.
Published by: Ganesh Nachikethu
First published: January 15, 2020, 2:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading