ದೇಶಾದ್ಯಂತ ಕಿಚ್ಚು ಹತ್ತಿಸಿರುವ ನೂಪುರ್ ಶರ್ಮಾ (Nupur Sharma) ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಈ ನಡುವೆ ಕೆಲವು ಬಿಜೆಪಿ ಮುಖಂಡರು (BJP Leaders) ಹೇಳಿಕೆಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಕುರಿತಾದ ಹೇಳಿಕೆಗಳು (Statements) ಭಾರತ ಮತ್ತು ವಿದೇಶಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು ಭಾರತೀಯ ಜನತಾ ಪಕ್ಷ(BJP)ದಿಂದ ಅಮಾನತುಗೊಂಡ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್ (Gautam Gambhir) ಭಾನುವಾರ ತಮ್ಮ ಬೆಂಬಲವನ್ನು ನೀಡಿದ್ದಾರೆ. ಬಂದಿರುವ ಜೀವ ಬೆದರಿಕೆಗಳ (Death threat) ಕುರಿತು 'ಜಾತ್ಯತೀತ ಉದಾರವಾದಿಗಳ' ಮೌನದ ಬಗ್ಗೆ ಅವರು ಮಾತನಾಡಿದ್ದಾರೆ. ರಾಜತಾಂತ್ರಿಕ ಪತನದ ಮಧ್ಯೆ ಕೇಸರಿ ಪಕ್ಷವು ತನ್ನ ವಕ್ತಾರೆ ನೂಪುರ್ ಅವರನ್ನು ಅಮಾನತುಗೊಳಿಸಿದೆ. ಪಕ್ಷದ ದೆಹಲಿ ಮಾಧ್ಯಮ ಮುಖ್ಯಸ್ಥ ನವೀನ್ ಜಿಂದಾಲ್ ಅವರನ್ನು ಉಚ್ಚಾಟಿಸಿದ ಕೆಲವು ದಿನಗಳ ನಂತರ ಬಿಜೆಪಿ ಸಂಸದರ ಹೇಳಿಕೆಗಳು ಹೊಸ ವಿವಾದವನ್ನು ಹುಟ್ಟುಹಾಕಿದೆ.
#LetsTolerateIntolerance ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಗಂಭೀರ್ ಟ್ವೀಟ್ ಮಾಡಿದ್ದಾರೆ, "ಕ್ಷಮೆಯಾಚಿಸಿದ ಮಹಿಳೆಯ ವಿರುದ್ಧ ದೇಶಾದ್ಯಂತ ದ್ವೇಷ ಮತ್ತು ಸಾವಿನ ಬೆದರಿಕೆಗಳ ಪ್ರದರ್ಶನದ ಕುರಿತು 'ಜಾತ್ಯತೀತ ಉದಾರವಾದಿಗಳು' ಎಂದು ಕರೆಯಲ್ಪಡುವವರ ಮೌನ ಖಂಡಿತವಾಗಿಯೂ ಕಿವುಡಾಗಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಕಪಿಲ್ ಮಿಶ್ರಾ ಮತ್ತು ಸಾಧ್ವಿ ಪ್ರಜ್ಞಾ ಸೇರಿದಂತೆ ಹಲವಾರು ದೆಹಲಿ ಮತ್ತು ಜಿಲ್ಲಾ ಮಟ್ಟದ ಬಿಜೆಪಿ ನಾಯಕರು ನೂಪುರ್ ಅವರನ್ನು ಬೆಂಬಲಿಸಿದ್ದಾರೆ.
Silence of so called ‘secular liberals’ on the sickening display of hatred & death threats throughout the country against a woman who has apologised is surely DEAFENING! #LetsTolerateIntolerance
— Gautam Gambhir (@GautamGambhir) June 12, 2022
ಸೌದಿ ಅರೇಬಿಯಾ, ಅಬುಧಾಬಿ, ಯೆಮೆನ್‌ನಂತಹ ಹಲವಾರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ ನಂತರ ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳ ಕುರಿತು ಶರ್ಮಾ ಮತ್ತು ಜಿಂದಾಲ್ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿದೆ.
ಧರ್ಮದ ಬಗ್ಗೆ ಮಾತನಾಡುವಾಗ ಹುಷಾರಾಗಿರಿ ಎಂದ ಬಿಜೆಪಿ
ವರದಿಗಳ ಪ್ರಕಾರ, ಬಿಜೆಪಿಯು ತನ್ನ ಹಿರಿಯ ಅಧಿಕಾರಿಗಳು ಸೇರಿದಂತೆ ವಕ್ತಾರರು ಹಾಗೂ ಟಿವಿ ಸುದ್ದಿ ಚರ್ಚೆಗಳಲ್ಲಿ ಭಾಗವಹಿಸಲು ಅಧಿಕಾರ ಹೊಂದಿರುವ ಕೆಲವು ಕೇಂದ್ರ ಮಂತ್ರಿಗಳಿಗೆ ಸಾರ್ವಜನಿಕ ವೇದಿಕೆಗಳಲ್ಲಿ ಧರ್ಮದ ಬಗ್ಗೆ ಮಾತನಾಡುವಾಗ "ಅತ್ಯಂತ ಜಾಗರೂಕರಾಗಿರಿ" ಎಂದು ವಿಶೇಷವಾಗಿ ಸೂಚನೆ ನೀಡಿದೆ ಎನ್ನಲಾಗುತ್ತಿದೆ.
ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದ ಒಂದು ವಾರದ ನಂತರ, ದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರವು ಭುಗಿಲೆದ್ದಿತು. ಪ್ರತಿಭಟನಾಕಾರರು ನೂಪುರ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. ಮಾಜಿ ವಕ್ತಾರರ ಹೇಳಿಕೆಗೆ ಉತ್ತರ ಪ್ರದೇಶ, ಜಾರಾಖಂಡ್ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ.
ಇದನ್ನೂ ಓದಿ: Covid19: ಮುಂಬೈನಲ್ಲಿ ಒಂದೇ ದಿನ 100 ಜನ ಕೊರೋನಾ ರೋಗಿಗಳು ಆಸ್ಪತ್ರೆಗೆ ದಾಖಲು!
ಯಾರಿವತು ನೂಪುರ್ ಶರ್ಮಾ?
ನೂಪುರ್ ಶರ್ಮಾ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ರಾಷ್ಟ್ರೀಯ ವಕ್ತಾರರು. ಸುದ್ದಿ ವಾಹಿನಿಯೊಂದರ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ಟೀಕೆಗಳಿಗಾಗಿ ಅವರನ್ನು ಇತ್ತೀಚಿಗಷ್ಟೇ ಪಕ್ಷದಿಂದ ಅಮಾನತುಗೊಳಿಸಲಾಯಿತು. ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಲ್ಲಿ ತೊಡಗಿಸಿಕೊಂಡರು. 2008ರಲ್ಲಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ನೂಪುರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?
ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿದ್ದೇನು?
ಕೆಲ ದಿನಗಳ ಹಿಂದಷ್ಟೇ ಪ್ರವಾದಿ ಮಹಮ್ಮದ್ ಬಗ್ಗೆ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯಿಂದ ಭಾರೀ ವಿವಾದವೇ ಉಂಟಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ